Tuesday, May 15, 2007

ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ .......

ಸ್ನಾನ ಅನ್ನೋದು ಎಷ್ಟು ಚೆನ್ನಾದ ಕೆಲಸ ಅಂತ ಅನ್ನಿಸುತ್ತೆ. ಕೆಲಸ ಅಂದ ತಕ್ಷಣ ಅದು ಎಷ್ಟೇ ಚೆನ್ನಾಗಿರಲಿ ಅದಕ್ಕೊಂದು ಕಷ್ಟದ ಲೇಪ ಹಚ್ಚಿಬಿಡ್ತೀವಿ . ಆದರೆ ಸ್ನಾನ ಮಾತ್ರ ಇಷ್ಟದ ಕೆಲಸಾನೆ.

ಸ್ವಚ್ಹ, ಶುಭ್ರವಾಗಿರೋದಕ್ಕೆ ಸ್ನಾನ ಮಾಡ್ತೀವಿ ಅಂದ್ರೂ ಅದೊಂದು ನೆಪ ಮಾತ್ರ.
ಗಡಿಬಿಡಿಲಿ ಸ್ನಾನ ಮಾಡೋದು ಬಿಟ್ಟು ಬಿಡಿ..... ಅರಾಮಾಗಿ ನೀವು ಸ್ನಾನ ಮಾಡಿರೋದು ಜ್ಞಾಪಿಸಿಕೊಳ್ಳಿ.. ಅದೊಂದು ಅದ್ಭುತ feeling...

ಟವೆಲ್ಲು ಬಟ್ಟೆ ತೊಗೊಂಡು ಸ್ನಾನದ ಮನೆಯನ್ನ ಹೊಕ್ಕು, ಒಂದು ಚೊಂಬು ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ನೆನಪು-ರಿವರ್ಸ್ ಗೇರ್ ನಲ್ಲಿ! - ಅಮ್ಮನ ಹಾಡು, ತಂಗಿ ಜೊತೆ ಕೀಟಲೆ ,ಅಪ್ಪನ ತಮಾಷೆ-ಕಾಳಜಿಯ ಮಾತು, ತಾತನ ನಗು- ಪ್ರೀತಿ, ಅಜ್ಜಿಯ ಧಾವಂತಗಳು, ಚಿಕ್ಕಪ್ಪನ ಧೈರ್ಯ, ಪಕ್ಕದ ಮನೆ ಕುಳ್ಳೀ ಜಲಜನ ಜೊತೆ ಜಗಳ, ಹೀಗೆ ನೂರಾರು ನೆನಪುಗಳು ಸ್ನಾನದ ಕೋಣೆಯ ಪ್ರತಿ ನಲ್ಲಿಗು, ಷವರ್ ಗೂ, ಅಲ್ಲಿನ ಸೋಪ್ ಸ್ಟಾಂಡ್ ಗೂ, ಅಪ್ಪನ ಸಿಂತಾಲ್ ಸೋಪ್ ಗೂ - ಹೀಗೆ ನೂರು-ನೂರು ನೆನಪು ಹಂಚಬಹುದು.

ಇಲ್ಲಾ..ನಿಮ್ಮ ಮನಸ್ಸೆಂಬ ಹಕ್ಕಿಗೆ ನೂರಾರು ಕನಸು. ಇವತ್ತು ನಾನು ಮಾಡಬೇಕಾಗಿರೊ ಕೆಲಸಾನ ಹೇಗೆ ಮಾಡಬೇಕು, ಏನೇನು ವ್ಯವಸ್ಥೆ ಮಾಡಬೇಕು, ಮುಂದೆ ದುಡ್ಡಿದಾಗ ಅಂಥಾ ಮನೆ ಕಟ್ಟಿಸಬೇಕು, ಮತ್ತು ಎಲ್ಲೆಲ್ಲಿಗೆ ಪ್ರವಾಸ ಹೋಗಬೇಕು ಇನ್ನು ಏನೇನೋ ಕನಸುಗಳು....

ನಾನು ಸಾಮಾನ್ಯ ಸಂಜೆ ಸ್ನಾನ ಮಾಡ್ತೀನಿ.ಕ್ಲಾಸ್ ಅದಮೇಲೆ, ಅರಾಮಾಗಿ ಆರರಿಂದ ಏಳು. "ಈ ಹುಡುಗಿಗೆ ಏನಾಗಿದೆ ಸ್ನಾನದ ಮನೆಯಲ್ಲೆ ಎಷ್ಟೊಂದು ಹೊತ್ತು ಕಳೀತಾಳಲ್ಲ ಎಷ್ಟೊಂದು ಟೈಮ್ ವೇಸ್ಟ್".. ಅಂತ ಅಪ್ಪಂಗೆ ಚಿಂತೆ ಆದ್ರೆ "ಸೋಲಾರಿನ ಬಿಸಿ ನೀರೆಲ್ಲ ಇವಳೇ ಸುರುಕೊಂಡಾಗಿರುತ್ತೆ. ಛೇ.. ಬೆಳಗ್ಗೆ ಎದ್ದು ಗೀಸರ್ ಆನ್ ಮಡಬೇಕು.. ಎಷ್ಟೊಂದು ಕರೆಂಟ್ ವೇಸ್ಟ್" ಅನ್ನೋ ಚಿಂತೆ ಅಮ್ಮಂಗೆ.

ಗೀಸರ್, ಸೋಲಾರ್, ಬಾಯ್ಲರ್ಗಿಂತ ಹಂಡೇಲಿ ಕಾಸಿದ ನೀರು ಎಷ್ಟು ಚೆಂದ. ಒಂಥರ ಹಿತ.. ಸೌದೆ ಒಲೆ ಹತ್ತಿಸೋದು, ಅದರ ಹೊಗೆ ಈಗಿನ ಕಾಲದ ನಮಗೆ ರೇಜಿಗೆ ಅನ್ನಿಸಬಹುದು ಆದ್ರು ಹಂಡೆ ನೀರು ಅಂದ್ರೆ ಏನೋ ಒಂದು ಅಟ್ಯಾಚ್ ಮೆಂಟ್.. ರಜದಲ್ಲಿ ಅಜ್ಜನ ಮನೆಗೆ ಹೋದಾಗ ಎಷ್ಟು ಆರಾಮ..ಹಂಡೆ- ಬಿಸಿ ನೀರು -ಕರೆಗಟ್ಟಿದ ಬಚ್ಚಲು- ಮೂಲೇಲಿ ಮಣೆ- ತಾಮ್ರದ ಚೊಂಬು- ಗೂಡಲ್ಲಿ ಅರಿಶಿನ, ಪಕ್ಕದಲ್ಲಿ ಸೀಗೇಕಾಯಿ ಮೆಲೆ ಚಿಕ್ಕಪ್ಪನ ಮೈಸೂರು ಸ್ಯಾಂಡಲ್ ಸೋಪು ಘಮ್ ಅಂತ...

ಯಾರು ಸ್ನಾನ ಮಾಡ್ಕೊಳ್ಳೊಕೆ ಮಾತ್ರ ಬೇಜಾರು ಪಟ್ಟುಕೋಬಾರದು.ಯಾವಾಗಲಾದರೂ ಮಾಡಿ ದಿನಕ್ಕೊಂದು ಸಲ ಅರಾಮಾಗಿ. ಸ್ನಾನದಮನೆಯಿಂದ ಬಂದ ತಕ್ಷಣ-
ನಿಮ್ಮ ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ- ಕನಸು ಬಿಸಿನೀರಿನ ಆವಿ, ಹೊಗೆ ರೂಪದಲ್ಲಿ ಆಕಾಶದ ಹತ್ತಿರ...

15 comments:

Jagali bhaagavata said...

ಮೃಗನಯನಿ, ಚೆನ್ನಾಗಿದೆ. ಆದ್ರೆ ಯಾಕೆ ಇಷ್ಟೊಂದು ಕಾಗುಣಿತದ ತಪ್ಪುಗಳು? ಉದಾಹರಣೆಗೆ - ಮತ್ರ (ಮಾತ್ರ), ನನು (ನಾನು)...ನೀವು ದೀರ್ಘ ಕೊಡೋವಾಗ ಸರಿಯಾಗಿ Shift key-ನ ಉಪಯೋಗಿಸ್ತಾ ಇಲ್ಲ ಅನ್ಸತ್ತೆ.

ಕಥೆಗಳೆಲ್ಲಿ?

ಮೃಗನಯನೀ said...

ನಮಸ್ಕಾರ
ನನಗೆ blogu ಇದರಲ್ಲಿ ಹೇಗೆpublish ಮಾಡಬೇಕು ಅನ್ನೋದು ಗೊತ್ತಿರ್ಲಿಲ್ಲ ಆದ್ದರಿಂದ ನನ್ನ ಸ್ನೇಹಿತರಿಗೆ e ಕೆಲಸ ವಹಿಸಿದ್ದೆ ಅವರು ನಾನು ಬರೆದಿದ್ದರ type ಬೇರ್ಯವರ ಕೈಲಿ ಮಾಡಿಸಿದ್ದಾರೆ ನನ್ನ blogannu ನನಗಿಂತ ನೀವೇ ಮೊದಲು ನೋಡಿದ್ದೀರ. ಈಗ ಆಗಿರೋ ತಪ್ಪುಗಳನ್ನು ತಿದ್ದಿದ್ದೇನೆ.ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಹೇಗೆ ತಪ್ಪುಗಳಿದ್ದರೆ ತಿಳಿಸುತ್ತೀರಿ

Sushrutha Dodderi said...

Welcome onboard! ಬರಹದ ಹಂದರ, ಭಾವ, ಮಾಡಿದ ಪದಜೋಡಣೆ, ಎಲ್ಲಾ ಚೆನ್ನಾಗಿದೆ. Continue blogging..!

ವಿ.ರಾ.ಹೆ. said...

ಈ ಮಲ್ನಾಡ್ ಮೃಗನಯಿನಿ ಬಗ್ಗೆ ಭಾರೀ ಕೇಳಿದ್ದೆ. ಎಲ್ಲಾ ಕಡೆ ಕಮೆಂಟ್ ಬರಿಯೋದನ್ನ ನೋಡಿದ್ದೆ. ಈಗ ಬ್ಲಾಗ್ ಬರೆಯೋಕೆ ಶುರು ಮಾಡಿದ್ದು ನೋಡಿ ಖುಷಿ ಆಯ್ತು.

ಸ್ನಾನ ಮಾಡುವುದನ್ನೂ ಭಾವನಾತ್ಮಕವಾಗಿ ಬರೆದಿದೀರಲ್ಲಾ !
ಗುಡ್.

ಹೌದು , ಮಲೆನಾಡಿನ ಮನೆಗಳ ಹಂಡೆ ನೀರಿನ ಸ್ನಾನದ ಮಜಾನೇ ಬೇರೆ ! ಆದ್ರೂ ಬೆಳಗ್ಗೆ ಸ್ನಾನ ಮಾಡೋ ಅಭ್ಯಾಸನೇ ಒಳ್ಳೆದು ಅನ್ಸುತ್ತಪ್ಪಾ :-)

ಮೃಗನಯನೀ said...

@ Shushruta Dodderi
thnx for the welcome nd the comment..Nd I wish If you could take the oppurtunity to correct me in future

@Vikas Hegde
hmmhh...ಈಗ ಎರಡು ಹೊತ್ತು ಸ್ನಾನ ಮಾಡೋ ಅಭ್ಯಾಸ ಇದೆ...:-)ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ said...

ಮಲ್ನಾಡು ಹುಡುಗಿಗೆ ಬ್ಲಾಗು ಪ್ರಪಂಚಕ್ಕೆ ಸ್ವಾಗತ,
ಬರಹ ಚೆನ್ನಾಗಿದೆ, ಇನ್ನು ಸ್ವಲ್ಪ ದೊಡ್ಡ ಬರಹ ಬರಿಯೋಕೆ ಪ್ರಯತ್ನಿಸಿ.ಸ್ನಾನದ ಬಗೆಗಿನ ಭಾವ ಸಿಂಚನ ಚೆನ್ನಾಗಿ ಬಂದಿದೆ.
ನಿಮ್ಮ ಮುಂದಿನ ಬರಹಗಳಿಗಾಗಿ ಕಾಯುತ್ತೇನೆ.

Susheel Sandeep said...

ಬ್ಲಾಗಿನ ಲೋಕಕ್ಕೆ ಸ್ವಾಗತ!
ನಿಮ್ಮ ಶೈಲಿ ಹಿಡಿಸಿತು...ಸಂಕೀರ್ಣವಲ್ಲದ ಸುಲಲಿತವಾಗಿ ಸಣ್ಣ ಸಣ್ಣ ಸುಖಗಳನ್ನೇ ವೈಭವೀಕರಿಸುವ ಕೆಲ್ಸ ಮುಂದುವರೀಲಿ...

@above : ಬೆಳಗ್ಗೆನೋ ಸಂಜೇನೋ ಯಾವಾಗಾದ್ರೂ ಮಾಡಿ ತೊಂದರೆಯಿಲ್ಲ...ಆದ್ರೆ ಮಾಡಿ!:)

ನಾಕುತಂತಿ said...

ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ "ಭದ್ರ ....... " Title muddagide. bhaavanegalu harivu muddagide. All the best saagali doni haage teluta teluta doora tirava saagaradaachege, kanasugalachege haage beluguta naliyuta anantake dig-digantake!!!
Ishtu maatra helaballe, bcoz:.... Hechchenu helalu ishta illa, yaakendare putaa maguvina todala nudiyidu, tadavarisade hjje idalaagadu; ambegaaliduva maguvina modala hejje biluvadu sahaja!
Chennagide!!!

ಮೃಗನಯನೀ said...

@ಶ್ರೀನಿಧಿ
ಧನ್ಯವಾದಗಳು..ಇನ್ನೂ ದೊಡ್ಡ ಬರಹಗಳನ್ನು ಬರೆಯುವ ಪ್ರಯತ್ನ ಮಾಡುವೆ.
@ಸುಸಂಸ್ಕೃತ
ಧನ್ಯವಾದಗಳು..ವೈಭವೀಕರಣದ ವ್ಯಾಖ್ಯೆ ಏನು?
@Revana
thnx 4r the poem nd comment...

Parisarapremi said...

ನನ್ನ ಕಡೆಯಿಂದಲೂ ಒಂದು ಸ್ವಾಗತ.. ಅಂತೂ ಸ್ನಾನ ಮಾಡಿ ಶುಚಿಯಾಗಿ ಬ್ಲಾಗಿನ ಲೋಕಕ್ಕೆ ಕಾಲಿಟ್ಟಿರೆಂದಾಯ್ತು, ನನ್ನ (ಹಾಗೂ ನನ್ನಿತರ ಕೆಲವು ಗೆಳಯರ) ಹಾಗೆ ಕೊಳಕುಮಯವಾಗಿಲ್ಲವಲ್ಲಾ.. ಚೆನ್ನಾಗಿ ಬರೆಯುತ್ತಿದ್ದೀರ. ಬರೆಯುತ್ತಲಿರಿ..

Rainland-Kid said...

ಸ್ನಾನದ ಅಭಿಮಾನಿಗಳನ್ನ ನೋಡಿ ಖುಷಿಯಾಯ್ತು !!!
ಮಲ್ನಾಡ್ ಸ್ನಾನದ ಸುಖ & ನಂತರದ ಮತ್ತು... "ಎಂಥ ಮಧುರ ಯಾತನೆ"

BTB ಮೃಗನಯನೀ is an interesting name

ಹಿಂಗೇ ಬ್ಲಾಗಿಸ್ತಾ ಇರಿ :)

Malnad Maga...Sandeep Aithal

Unknown said...

ಅರುಣ್ ಮತ್ತು ಸಂದೀಪ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಸ್ನಾನ always comes as a relief ಅನಿಸಿದೆ ಯಾವಾಗ್ಲೂ ನನಗೆ.nd obivously a refreshing one..
with all ur support i wil try to write something more worth.

Anonymous said...

Best Part of the Article is Ending..ನಿಮ್ಮ ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ- ಕನಸು ಬಿಸಿನೀರಿನ ಆವಿ, ಹೊಗೆ ರೂಪದಲ್ಲಿ ಆಕಾಶದ ಹತ್ತಿರ.....

ಅಪ್ಪು..... said...

'ನೆನಪು ಬಚ್ಚಲಲ್ಲಿ ಭದ್ರ', 'ಕನಸು ಬಿಸಿನೀರಿನ ಆವಿ'..... ಅದ್ಭುತ ಪದಗುಚ್ಚಗಳು...... Thanx for such a nice article....

ಮೃಗನಯನೀ said...

@kannadada kusu nd Appu

ಧನ್ಯವಾದಗಳು..ಹೀಗೆ ನಿಮ್ಮ ಪ್ರೊತ್ಸಹವಿರಲಿ