ನನಗಿನ್ನು ಆ ದಿನ ಚೆನ್ನಾಗಿ ನೆನಪಿದೆ. ನಾನು ಅಪ್ಪ ಅಮ್ಮನ ಜೊತೆ ನಮ್ಮ ಕಾಲೇಜಿನ ಆ ನರಿ ಮೂತಿ ಮ್ಯಾನೇಜರ್ ಕೋಣೆ ಮುಂದೆ ಕೂತಿದ್ವಿ. ಅವನ ಹೆಸರೇನೋ ನನಗಿನ್ನು ಗೊತ್ತಿಲ್ಲ ದಿನೇಶಾನೋ ಗಣೇಶಾನೊ ಇರ್ಬೇಕು...
ನೀನು ನಿನ್ನ ತಂಗಿ ಜೊತೆ ಬಂದೆ. ಬಂದು, ಸೀದ ನುಗ್ಗುತ್ತಿದ್ದೀಯ ಮ್ಯಾನೇಜರ್ ಕೋಣೆಗೆ ಅಷ್ಟ್ ಹೊತ್ತಿನಿಂದ ಕಾದು ಕಾದು ರೋಸಿಹೋಗಿದ್ದ ನನಗೆ ಬರ್ತೀರೋ ಸಿಟ್ಟನ್ನೆಲ್ಲಾ ನಿನ್ನ ಮೇಲೆ ಕಕ್ಕೋಹಾಗಿತ್ತು. cant you see we are waiting here ಅಂದೆ ನಾನು. ನಿನ್ನ ಮುಖದಲ್ಲಿ ಒಂದು ತುಂಟ ನಗೆ...
ನಾನು ನಿನ್ನ ದುರುಗುಟ್ಟಿಕೊಂಡು ನೋಡುತಿದ್ರೆ,ನೀನು ನನ್ನ ಕಣ್ಣುಗಳನ್ನ ಅಷ್ಟೇ ಪ್ರೀತಿಯಿಂದ ನೋಡುತಿದ್ದೆ. ನಾನು ಸ್ವಲ್ಪ ಅಹಂಕಾರದ ಹುಡುಗಿ ಅಂತ ಎಲ್ಲರಿಗೂ ಗೊತ್ತು. ನನ್ನ ಮುಂದೆ ಹುಡುಗರ ಗುಂಪೇ ಹೋಗುತಿದ್ರೂ ಕುತೂಹಲಕ್ಕಾದರೂ ನಾನು ಕಣ್ನೆತ್ತಿ ನೋಡಿದವಳಲ್ಲ ನನ್ನ ಕಣ್ಣುಗಳಲ್ಲಿ ಅದೇ ನಿರ್ಲಿಪ್ತ ಅಹಂಕಾರ...
ಆದರೆ ಅವತ್ತು ಏನಾಯ್ತು ನನಗೆ? ನಿನ್ನನ್ನು ನನ್ನ ಕಣ್ಣುಗಳು ಪದೇ ಪದೇ ಯಾಕೆ ಹುಡುಕ ಹತ್ತಿದವು ? ? ಮತ್ತೆ ನೀ ಸಿಕ್ಕುಬಿಟ್ಟೆಯಲ್ಲ ನಿನ್ನ ಗುರು ಗುಟ್ಟೋ ಬೈಕಿನ ಮೇಲೆ! ನನಗೆ ಅಸೂಯ ಆಗುವಷ್ಟು ಆ ಬೈಕಿನ ಜೊತೆಗೇ ಇರತಿದ್ಯಲ್ಲ! ನೀನು ನೆಡದಿದ್ದೆ ನಾನು ನೋಡಿಲ್ಲ.
ನನ್ನ ಕಣ್ಣುಗಳು ನಿನ್ನ ಹುಡುಕುತ್ತಿದ್ದವು ಅನ್ನೋದೇನೊ ನಿಜ. ಆದರೆ, ಈ ಪರಿ ನೀನು ನನ್ನ ಆವರಿಸಿಕೊಂಡಿರಲಿಲ್ಲ. ನಿನ್ನ ಸ್ನೇಹಕ್ಕಾಗಿ ಒಂದು ಚಿಕ್ಕ ಪ್ರಯತ್ನ ಕೂಡ ಮಾಡಿರಲಿಲ್ಲ ನಾನು...
ಅವತ್ತು ನಿನ್ನ ತಂಗಿ ಲ್ಯಾಬ್ ನಲ್ಲಿ ನನ್ನ ಹತ್ರ ಬಂದು 'ಅಣ್ಣ ನಿಮ್ಮ ಹತ್ರ ಮಾತಾಡಬೇಕಂತೆ' ಅಂದಾಗ ಆಷ್ಚರ್ಯ ಆಯ್ತು ನೀನು ಮಾತಾಡಬೇಕು ಅಂತ ಹೇಳಿಕಳಿಸಿದ್ದಕ್ಕಲ್ಲ.. ನಿನ್ನ ತಂಗಿ ಮಾತಾಡಿದಳಲ್ಲ ಅದಕ್ಕೆ ಆ ಹುಡುಗೀನ ಏನು protectedಆಗಿ ಬೆಳಸಿದ್ದೀರೋ ಮಾರಾಯ? ಅವಳಿಗೆ ಮಾತಡಕ್ಕೆ ಬರುತ್ತೆ ಅಂತ ಗೊತ್ತಾಗಿ ಖುಷಿ ಆಯ್ತು ನನಗೆ...
ನಮ್ಮ ಭೇಟಿ ಬಿಡು ಎಲ್ಲಾ ಹುಡುಗ-ಹುಡುಗಿ ಭೇಟಿಗಳoತೆ ಒಂದು ಸಾಮಾನ್ಯ ಭೇಟಿ, ಅರ್ಧ ಅರ್ಧ ದಾಳಿಂಬೆ ಹಣ್ಣಿನ ಜ್ಯೂಸ್ ನಿಂದ ಶುರುವಾಗಿದ್ದು..ನಿನ್ನ ಜೊತೆ ಅರ್ಧ ಗ್ಲಾಸಿನ ದಾಳಿಂಬೆ ಜೂಸ್ ಕುಡಿಯುವಾಗ ನಮ್ಮ ಸ್ನೇಹ ಇಷ್ಟು ಗಟ್ಟಿಯಾಗಿ ಬೆಳೆಯುತ್ತೆ ಅನ್ನೋ ಕಲ್ಪನೆ ಖಂಡಿತ ಇರಲಿಲ್ಲ..
ಮೊದಮೊದಲು ನೀನು ನಂಗೆ ಇಷ್ಟ ಆಗಲಿಲ್ಲ ಉಹೂ...ನಿನ್ನ ಪ್ರೀತಿ ಹಂಚೋ ಕಣ್ಣುಗಳಷ್ಟೆ ಇಷ್ಟವಾಗಿದ್ದು ನನಗೆ!!
ಆದರೆ ಬರುಬರುತ್ತಾ ಏನಾಯ್ತ್ತು? ನಮ್ಮಿಬ್ಬರಿಗೂ? ಒಬ್ಬರನ್ನೊಬ್ಬರು ಅಷ್ಟು ಹಚ್ಚಿಕೊಂಡ್ವಿ. ಎಷ್ಟು ವಿಷಯ ಮಾತಡಿಲ್ಲ ನಾವು? ಬದುಕಿನೆಡೆಗೆ, ಪ್ರೀತಿಯೆಡೆಗೆ, ಕಾಮದೆಡೆಗೆ , ಆದ್ಯಾತ್ಮದೆಡೆಗೆ...ನನ್ನಲ್ಲಿದ್ದ ಪ್ರಶ್ನೆಗಳನ್ನ ನಾನು ಕೇಳುತ್ತಿದ್ದರೆ, ನೀನು ಆ ಎಲ್ಲಾ ಪ್ರಷ್ನೆಗಳಿಗೆ ಅತ್ಯಂತ ಸರಳವಾಗಿ, ಮುಜುಗರ ಆಗದೆ ಇರೊ ಹಾಗೆ ಉತ್ತರಿಸುತ್ತಿದ್ದೆ. ನಿನ್ನ ಉತ್ತರಗಳು ಯಾವತ್ತೂ ಭಾಷಣ ಅನ್ನಿಸಲಿಲ್ಲ ನಂಗೆ ನೀನು ಯಾವತ್ತು ನಿನ್ನ ಭಾವನೆಳಗನ್ನಾಗಲಿ, ಉತ್ತರಗಳನ್ನಾಗಲಿ, ಅನಿಸಿಕೆಗಳನ್ನಾಗಲಿ ಯಾವುದನ್ನು ನನ್ನ ಮೇಲೆ ಹೇರಲಿಲ್ಲ, ನನ್ನ ಉಸಿರುಕಟ್ಟಿಸಲಿಲ್ಲ! ಅದಕ್ಕೆ ನಾನು ಅಷ್ಟು ಇಂಪ್ರೆಸ್ಸ್ ಆಗಿದ್ದ?
ನಾವು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ ಅಂತ ಗೊತ್ತಾದರೂ ಯಾಕೆ ಹೇಳಿಕೊಳ್ಳಲಿಲ್ಲ? ನಾನಾದರೂ ಹೇಳಿಕೊಳ್ಳುತ್ತಿದ್ದೆನೇನೋ...ಆದರೆ ನೀನು ಪ್ರಭಾವ ಬೀರಿಬಿಟ್ಟಿದ್ದೆ..ಭಾವನೆಗಳ ಅಲೆಯಲ್ಲಿ ತೇಲಿ ಹೋಗದೇ ವಾಸ್ತವತೆಯಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ನಿನ್ನಿಂದ್ಲೇ ಅಲ್ವ ನಾನು ಕಲಿತಿದ್ದು?
ಆದ್ರೆ ನೀನು ಯಾಕೆ ಫ್ಲರ್ಟ್ ಮಾಡ್ತೀಯ ಎಲ್ಲರ ಜೊತೆ? ನಿನ್ನ ಮಾತನ್ನ ನಂಬೋದೇ ಕಷ್ಟ! ಆದರೂ ನಿನ್ನ ಯಾಕೆ ಅಷ್ಟು ಇಷ್ಟಪಡ್ತೀನಿ ಅಂತ ಯೋಚಿಸಿದರೆ ನಿನ್ನ ತುಂಟತನ ಮತ್ತು ನೀನು ಎಲ್ಲಾ ವಿಷಯದೆಡೆಗೂ ಬೆಳಸಿಕೊಂಡಿರುವ ದಿವ್ಯವಾದ ನಿರ್ಲಕ್ಷವೇ ಕಾರಣ ಅನ್ನಿಸುತ್ತೆ...
ಇಷ್ಟೆಲ್ಲಾ ಬರೆದರೂ ಇದನ್ನ ನಿನಗೆ ಕೊಡಬೇಕೆ? ಅಂತ ಯೋಚಿಸ್ತಿದ್ದಿನಿ..ಉಹೂಂ..ನಾಚಿಕೆ ಅಲ್ಲ, ಭಯ ಮೊದಲೇ ಇಲ್ಲ, ಆದರೂ ಕೊಟ್ರೆ ಏನು ಸಾಧಿಸಿದ ಹಾಗಾಯ್ತು ಅನ್ನುವ ನಿರ್ಲಕ್ಷ...ಆದರೂ ಕೊಡುತೀನಿ ಯಾಕೆ ಗೊತ್ತ? ನನ್ನ ತುಂಬಾ ಪ್ರೀತಿಸ್ತಿರೋ ಹುಡುಗನ್ನ ಮದುವೆಯಾಗ್ತಿದೀನಿ. ಅವನನ್ನೆ ಪ್ರಜ್ನಾಪೂರ್ವಕವಾಗಿ ಪ್ರೀತಿಸಬೇಕು, ಪ್ರೀತಿಸ್ತೀನಿ...
ಇಲ್ಲ! ನಾನು ನೀನು ಖಂಡಿತಾ ಮದುವೆ ಆಗಬಾರದು.` ಹೀಗೆ ಒಬ್ಬರೆಡೆಗೆ ಒಬ್ಬರು ಕುತೂಹಲವನ್ನು ಉಳಿಸಿಕೊಂಡೇ ಬದುಕಿಬಿಡಬೇಕು..ಮುಂದೆ ನನ್ನ ಗಂಡನ ಜೊತೆ ಒಂದು ಚಿಕ್ಕ ಜಗಳ ಆದಾಗ ನಿನ್ನ ನೆನಪು ಬರಬೇಕು, ನೀನು ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಅಂತ ಕಲ್ಪಿಸಿಕೊಳ್ಳಕ್ಕಾದರೂ ನಾವಿಬ್ಬರೂ ಬರೀ ಸ್ನೇಹಿತರಾಗೆ ಉಳಿದುಬಿಡೋಣ ...
ಸಂಜೆ ಕಾಫೀ ಡೇನಲ್ಲಿ ಸಿಗೋಣ" ಏನೆ ಹುಡುಗಿ ನಿನ್ನ ಪತ್ರ ನನ್ನ ಸೆಂಟಿ ಮಾಡಿಬಿಟ್ಟಿತ್ತಲ್ಲ" ಅಂತ ..ನಿನ್ನ ಎವರ್ಗ್ರೀನ್ ಡೈಲಾಗ್ ಹೊಡೆಯುತ್ತ...ಮುಖದಲ್ಲಿ ತುಂಟನಗೆ ಹೊತ್ತು ಒಳಗೆ ಬಾ.....
ಕಾಫಿಗಾಗಿ ಕಾದಿರುವವಳು
Subscribe to:
Post Comments (Atom)
25 comments:
ಮುಂದೆ ನನ್ನ ಗಂಡನ ಜೊತೆ ಒಂದು ಚಿಕ್ಕ ಜಗಳ ಆದಾಗ ನಿನ್ನ ನೆನಪು ಬರಬೇಕು, ನೀನು ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಅಂತ ಕಲ್ಪಿಸಿಕೊಳ್ಳಕ್ಕಾದರೂ ನಾವಿಬ್ಬರೂ ಬರೀ ಸ್ನೇಹಿತರಾಗೆ ಉಳಿದುಬಿಡೋಣ .............idu yeshtara mattige sari? gandana jothe jagala aadaga ninna nenapu barokkadru frends aagirona annuva nimma mathu yaru oppatakkaddalla bidi....kevala bhaavanegala jagattinalli viharisuvudanna bittu vaastavakke banni....
anda hage nimma baravanige dinadinda dinakke uttamavagutta ide...keep writing.....
@ ಸೋಮು,
ಇಲ್ಲ ಕಣೋ ಸೋಮು.. ಹಾಗೆ ಒಮ್ಮೊಮ್ಮೆ ಯಾರ್ಯಾರೋ ನೆನಪಾಗ್ತಾರೆ.. ಅದ್ರಲ್ಲೇನಿದೆ?
@ ನಯ್ನೀ,
no doubt, ನಿಮ್ಮ ಬರಹಗಳು ದಿನದಿಂದ ದಿನಕ್ಕೆ ಉತ್ತಮವಾಗುತ್ತಿವೆ.
Wonderful Mruganayani, odisikondu hoguva prayatna sogasagi mudibandide, nimma sahityadalli manassina aladha bhavanegalanna horatharo prayatna nijakku prashamshaniya.
Manassu preethi ella hage kanri estu bigi hidithivo aste chimmi horahariyutte. pretistina illa, attraction idiya khanditha ide, idannella MORALITY-ETHICS BASEnalli ittu nodidre sarina thappa gothilla.
Especially last but second paragraph has come out very good & I really liked that narration, Jevanadalli ondu vyakti bagge elliyavaregu ondu kutuhala anta irutto uliyutto alliyavaregu jeevana hasiru hosadu anisuthirutte ivnu hige iste ansibittare preetinu nashisutta hogbidutte.
Sneha-premagala tholalata, averadara madyada sanna eleya dvandvagalanna sogasagi chitrisiddira.
ಮೃಗನಯನೀ,
ಹೊಸ ತರಹದ ಆಲೋಚನೆ.ಮಾಮೂಲಿ ಮನಸ್ಥಿತಿಯನ್ನ ಇಟ್ಟುಕೊಂಡು ಆಲೋಚನೆ ಮಾಡುವವರಿಗೆ ಸ್ವಲ್ಪ ವಿಚಿತ್ರ ಅನ್ನಿಸ ಬಹುದು.life ಲಿ ಆಗೋದೆ ಹೀಗೆ, ಹೆಚ್ಚಿನ ಸಲ, ಅಲ್ವಾ?
ಆದರೂ ಹೇಳೋದನ್ನ ಈ "ಪತ್ರ"ದ ಶೈಲಿ ಬಿಟ್ಟು ಬೇರೆ ಹೇಗಾದರೂ ಬರೆಯೋಕೆ ಯತ್ನಿಸಿ. ಇದೊಂದು ಮಾಮೂಲಿ ಶೈಲಿ ಆಗಿ ಬಿಟ್ಟಿದೆ. ಹಾಗಂತ ನಿಮ್ಮ ಬರವಣಿಗೆ ಚೆನ್ನಾಗಿದೇರೀ, ತಪ್ಪು ತಿಳಿದುಕೊಂಡು ಬಿಟ್ಟಿರಾ ಮತ್ತೆ!
ಬರವಣಿಗೆ ಕಲೆ ಸಿದ್ದಿಸುತ್ತಿದೆ, ಬರೀತಾ ಇರಿ.
@ Somu
ಎಷ್ಟರ ಮಟ್ಟಿಗೆ ಸರಿ ಅಥ್ವ ತಪ್ಪು ಅನ್ನೋ ವಿಚಾರ ಮನಸ್ಸಿಗೆ ಗೊತ್ತಾಗೋಲ್ಲ. ಬುದ್ಡಿಗೆ ತಪ್ಪು ಅನ್ನಿಸಿದರು ಮನಸ್ಸನ್ನು ಹಾಗೆಲ್ಲ ಯೋಚಿಸಬೇಡ ಅಂತ ಕಟ್ಟಿಹಾಕೋಕ್ಕೆ ಆಗಲ್ಲ.
ಇನ್ನೂ ಭಾವನೆಗಳ ಜಗತ್ತಿನಲ್ಲಿ ವಿಹರಿಸುವ ವಿಷಯ...ಬರಿ ಭಾವಲೋಕದಲ್ಲಿ ಸಂಚರಿಸುತ್ತಿದ್ದರೆ ಅವರಿಬ್ಬರ ಮದುವೆ ಮಾಡಿಸುತ್ತಿದ್ದೆ.dicitions ಪ್ರಾಕ್ಟಿಕಲ್ ಆಗಿ ತೋಗೋಬೇಕು ನಿಜ ಆದರೆ ಹೊಮ್ಮುವ ಭಾವನೆಗಳನ್ನ ಯಾವ ಮರಕ್ಕೆ ಕಟ್ಟಿಹಾಕುತ್ತೀರಿ? ಕಟ್ಟಿ ಹಾಕಿದಷ್ಟು ಬಿಚ್ಚಿಕೊಂಡು ಓಡಲು ಹವಣಿಸುವ ಕಾಡಿನ ಹುಚ್ಚು ಕುದುರೆ ಅದು.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
@Shushruta
ಒಮ್ಮೊಮ್ಮೆ ಹಾಗೆ ಯಾರ್ ಯಾರೋ ನೆನಪಾದಾಗ ಆಗುವ ಕಲಮಲಗಳು ಬಹಳಷ್ಟು ಅಲ್ವಾ?
ಧನ್ಯವಾದಗಳು ಸುಶ್ರುತ ಹೀಗೆ ಗಮನಿಸುತ್ತಿರಿ
@Akshara
ಸ್ನೇಹ ಪ್ರೇಮದ ಮಧ್ಯದ ಹಳದಿ ಗೆರೆ ಇಷ್ಟ ನನಗೆ...
ಅಲ್ಲಿ ನಮ್ಮ ಭಾವನೆಗಳ ಋಜುತ್ವ ತಿಳಿಯುತ್ತೆ atleast ನಮಗಾದರೂ ಗೊತ್ತಾಗುತ್ತೆ.
ನನ್ನ ಸ್ನೇಹಿತೆಯರು, hostelmates ತಮ್ಮ ಸ್ನೇಹಿತರ ಬಗ್ಗೆ ಹೇಳಿಕೊಳ್ಳುವಾಗ ಗಮನಿಸುತ್ತಿರುತೀನೆ ಮತ್ತು ಬಹಳಷ್ಟು ಸರಿ ಈ ಹಳದಿ ಗೆರೆಯ ಛಾಯೆ ಕಂಡಿದ್ದೇನೆ. ಈ ಹಳದಿ ಗೆರೆಯಲ್ಲಿ ನಿಂತುಕೊಂಡು ತೊಳಲಾಡುವುವರ ತೊಳಲಾಟಗಳ ಬಗ್ಗೆ ಬರೆಯೂದೂ ನನಗೆ ಖುಷಿ ಕೊಡುತ್ತೆ.
thank you Akshara
@Shreenidhi
ಪ್ರತಿಯೊಬ್ಬರು ಈ ಸ್ಥಿತಿಯಿಂದ ಒಂದಲ್ಲ ಒಂದು ಸಾರಿ ಪಯಣಿಸುತ್ತಾರೆ ಅನ್ನೋ ನಂಬಿಕೆ ನನ್ನದು. ಅವರಿಗೆ ಆವಾಗಲೆ ಅರ್ಥ ಆಗಲಿ ಬಿಡಿ. ಬೇರೆ ಶೈಲಿಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು ಶ್ರೀನಿಧಿ
Mrigaakshi,
I don't quite agree with your claim/desire that it is worth remembering "him" after a quarrel with your hubby, particularly. On a practical note, If you had married "him" only, after a routine quarrel with "him", whom you wanna remember?.
In essence, travelling on two boats, with each leg on one and the other boat, never take you to any shore.
On the other hand, the other end of the river/ocean/sagara looks always beautiful, this is just a trick of the mind.
You talked about feelings and brain. Balancing brain and heart is the art of life, which was called YOGA in Bhagavadgeetha.
The writing is good!
Regards
Dr.D.M.Sagar
Canada
reee mrUganayane,
Neevu sakath aagi baritiraa kaNree.... nim blog odtrhirodu ide first time.. ella blog nnu ond sala odthabande... sakath improvement ide, neenu nejavaaglu expressive aagthidira.. oLLe beLavaNige...
nimma i post bagge heLodaadre,
nange neevu bardidralli enu tappu anta kaaNsilla.. neenu baredirodu vaastava... namage yaavataadru tumba novaadre namage modlu nenapige barodu namage tumba ishta aagoru, manassige hatra aagoru.. so neevu aa tuMtana nenapu barli anta aashisodralli enu tappilla....
wht ever it is.. nim baraha tumba ishta aaythu kaNre... yu have real potential.. keep it up...
with regards
chintu
@Dr.Sagar
Do you do only that things which others agree?? I always feel that there is a rebillion in every one which foreces them to do wat ever they like...
nd if she just wants a harmless comment 4m her close friend 4r a fight between her nd her husband wats a big deal in it?
yoga definetely balances feelings emotions...but wat is balancing??? its jst done after wat u hv felt something....
thanks 4r the comment which really provoked me to think more....
@ಚಿಂಟು
ಧನ್ಯವಾದಗಳು ನಿಮ್ಮಗಳ ಪ್ರೋತ್ಸಾಹವೇ ನನಗೆ ಬರೆಯಲು ಸ್ಪೂರ್ತಿ..ಹೀಗೆ ಕಮೆಂಟಿಸುತ್ತಾ ಇರಿ. i will try to write more worth
ಈ ಕಥೆ/ಬರಹ so far the best ಅನ್ಸತ್ತೆ!
ಎಷ್ಟೋ ಸುಧಾರಣೆ ಮೂಡಿಬಂದಿದೆ..Keep it up!
ಇನ್ನು ಕಥೆಯ ಪ್ರಾರಂಭ ಬಾಲಿಶವೆನಿಸಿತು...ಆದ್ರೆ ಕಡೆಯಲ್ಲಿ ಈ ರೀತಿಯ ಪ್ರಾರಂಭ ಸೂಕ್ತ ಅನ್ನಿಸೋ ಹಾಗೆ ಮಾಡ್ಬಿಟ್ರಿ!
ಸ್ನೇಹಿತರಾಗಿ ಉಳಿದುಬಿಡೋ ವಿಚಾರ ಸರಿಯೆ..ಆದ್ರೆ ಈಗಾಗಲೇ ಮೇಲಿನವರು ಹೇಳಿದಂತೆ ಕೊಟ್ಟಿರೋ ಕಾರಣ ಸಮಂಜಸ ಅನ್ನಿಸಲಿಲ್ಲ...ಕೇವಲ ನಿಮ್ಮೆಜಮಾನ್ರು ಜೊತೆ ಜಗಳ ಆದಾಗ ನೆನಪು ಮಾಡ್ಕೊಳ್ಳೋಕೆ ಒಬ್ಬ ಸ್ನೇಹಿತನ ಅವಶ್ಯಕತೆ ಇದ್ಯ?
ಭಾವನೆಗಳನ್ನ ಕಟ್ಟಿಹಾಕೋಕ್ ಸಾಧ್ಯ ಇಲ್ಲ ಒಪ್ತೀನಿ..ಕಾಡುಕುದುರೆ ಕೂಡಾ ಹೌದು...ಆದ್ರೆ ಸಮಯಕ್ ಸರ್ಯಾಗಿ ಹುಲ್ಲು,ಹುರುಳಿ ನೀರ್ ಕೊಟ್ಟು ಪಳಗಿಸೋ ಪ್ರಯತ್ನ ಮಾಡಿ...ಜೀವನ ಇನ್ನು ಬಣ್ಣಬಣ್ಣವಾಗಿ ಕಾಣ್ಸಕ್ ಶುರುವಾಗತ್ತೆ!
Mruganayani....
Simply Superb.....
Nimma Baraha Sikapatte improve aagide.... Letter(Narration) Style Tumba ishta aaytu....
Keep it up...
Raghunandana S. Adebhagi
Mrigaakshi,
Thanks for your words and understanding. As a writer one has to have a deep so called "saakshi prajne", otherwise, whatever one writes becomes a non-transparant and dishonest expression. Even as a human being, that saakshi prajne can only take us in the right direction.
There is a saying, man loves woman, and woman loves [not man] her life. This is a primitive-type of saying. Your claim that it is worth remembering "him" after quarreling with hubby may reflect this.
We donot have to answer others, but at least answer ourselves [again the saakshi prajne!]
Hope this makes sense
Best wishes
Dr.D.M.Sagar
Canada
@ Susanskruta
ಅಯ್ಯೂ ಅಲ್ಲಿರೋ ಹುಡ್ಗಿ ನಾನಲ್ಲ ಮಾರಾಯ.. plzzzz...
whatever ಎಲ್ಲರ ಅಭಿಪ್ರಾಯ ಹೀಗಿರೋವಾಗ ನಾನು ಇನ್ನೇನೋ ಹೇಳೋಕ್ ಹೋದ್ರೆ ಸಮರ್ಥನೆ ಅನ್ಸುತ್ತೆ.... thanks 4r ur comment. ಹೇಗೆ ಗಮನಿಸುತ್ತಾ ಇರಿ
@ Dr.Sagar
There is a saying, man loves woman, and woman loves [not man] her life
I think you have a point here..this must hv worked in me while writing.not sure..
but Abt Saakshi Pragne I hv some doubts..Hw do you define it? Is it valued by something which a great man says, like- u must think like this only, otherwise its wrong.. or is it valued by something whatever you(the saakshi) have felt right?? hope you got my point??
thnx Raghunandan 4r your support nd comment.
Mrigaakshi,
Saakshi prajne starts from inside, by doubting ourselves about our views.
According to me, all materialistic must be authentic, whereas, all other things [such as openion about a particular concept/person/event] must be expressed as views, which makes us to open a new window for our ideas/openions to be changed/modified from time to time based on our current experiences/knowledge.
For instance, mass of the electron is an universal constant and one can be very authentic about it, whereas, for instance again, whether S.L.Bhyrappa is a good novalist or not - this should be a non-authentic but expressed as merely an openion regardless of the subjective justifications that one may give.
In essence, saakshi prajne is NOT to enforce thinking in a particular way, rather it is a reasoning followed by a biasless observation/witnessing.
I appreciate your honesty!
Regards
D.M.Sagar
೧೬-೨೨ ವರ್ಷದ ಹುಡುಗಿಯರ ಮಾನಸಿಕ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಈ ಲೇಖನ. ಈಗ ಅದು ವಾಸ್ತವ ಎನಿಸಿದರೂ, ಅದ್ರಲ್ಲೇನಿದೆ ತಪ್ಪು ?! ಅಂತ ಅನಿಸಿದರೂ ಕ್ರಮೇಣ ಜೀವನ ಅಂದರೆ ಹೀಗಲ್ಲ ಅಂತ ತಿಳಿಯುತ್ತದೆ...
ಆದರೆ ಬಹುಪಾಲು ಜನ ಈ ಸ್ಥಿತಿಯನ್ನು ಅನುಭವಿಸಿಯೇ ಇರುತ್ತಾರೆ ಎನ್ನುವುದಂತೂ ಸತ್ಯ.
Regards,
Vikas Hegde
India :-)
hogli konege enantha nirdhaara maadidri ashtu janara abhipraayagalige ?.
aa kathaa naayaki neeve na ?. in any case neevu aa kathaa naayaki anta thilkolli matte ee ella janaru helidakke enu heltheera neevu ?.
Thanks, ಕಣೋ ವಿಕಾಸ್ ಹೀಗೆ ಗಮನಿಸುತ್ತಾ ಇರು.
@Crazy
ಕಥಾ ನಾಯಕಿ ನಾನಲ್ಲ ಆದರೆ ನನಗೆ ಅನ್ನಿಸೋದನ್ನ ಅದ್ರಲ್ಲಿ ಬರೆದಿದೀನಿ. ಅಂತಹ ಭಾವನೆ ಬಂದ್ರೆ ತಪ್ಪ? ನಿಮ್ಗೇನ್ ಅನ್ಸುತ್ತೆ ಅದು ಹೇಳಿ
ಮೃಗನಯನಿ,
ಭಾವನೆಗಳು ಯಾರನ್ಣ ಬಿಟ್ಟಿಲ್ಲ ಹೇಳಿ ?. ಹುಚ್ಚು ಸಾಗರದಂತೆ ಉಕ್ಕಿ ಬರುವ ಭಾವನೆಗಳು ಬರೋದು ತಪ್ಪು ಅಂತ ನಾನು ಹೇಳ್ತಾ ಇಲ್ಲ.. ಆದ್ರೆ ಆ ಭಾವನೆಗಳು ಬರೋ ಸಂಧರ್ಭ ನಂಗೆ ಯಾಕೋ ಅಷ್ಟು ಸರಿ ಅನ್ನಿಸ್ಲಿಲ್ಲ ಕಣ್ರೀ. ಗಂಡನ ಜೊತೆ ಜಗಳ ಆಡುವಾಗ ಯಾಕೆ ನೆನಪು ಬರ್ಬೇಕು ?. ಅದೂ ಅಲ್ದೇ ಪ್ರತಿ ಸಲ ಗಂಡನ ಜೊತೆ ಜಗಳ ಆಡುವಾಗ್ಲೂ ಅವನ ನೆನಪು ಧಾವಿಸಿ ಬಂದರೆ ಕ್ರಮೇಣ ನಿಮ್ಮ ಗಂಡನ ಸ್ಥಾನದಲ್ಲಿ ಅವನು ಬಂದು ಕೂರ್ತಾನೆ ಅಂತ ನಿಮ್ಗೆ ಅನ್ನಿಸ್ಲಿಲ್ವಾ ?. ಹಳೆ ನೆನಪು ಗಳು ಬಂದು ಮತ್ತೆ ದುಖ ಬರೋದಿಕ್ಕಾ ?. ಇವನು ಯಾರೋ ಒಬ್ಬ narrow minded ಅಂತ ಅಂದುಕೊಳ್ತಾ ಇರ್ತೀರಾ ಅಂತ ನಂಗೆ ಗೊತ್ತು ಆದ್ರೆ ನಾನು ಮಾತಾಡ್ತಾ ಇರೋದು ವಾಸ್ತವಾ' ಅಷ್ಟೇ
ನಿಮ್ಮ ಉತ್ತರಕ್ಕಾಗಿ ಕಾಯುತ್ತಾ ಇರ್ತೀ'ನಿ
!!! ವಿಶ್ !!!
sakkathaagi bardiddiree !!!
nimma barahagala titles tumbaa chennagiruttave.haageye koneya saaloo kudaa.
Post a Comment