Wednesday, May 16, 2007

ಪ್ರಶ್ನೆ!!???

ಕಪ್ಪೆ ಸದ್ದು ಕೇಳಿ ಸಣ್ಣಗೆ ರೋಮಾಂಚನಗೊಳ್ಳುತ್ತಿದ್ದಳು ಅವಳು..ಮಳೆ ಬರುತ್ತೆ ಅಂತು ಮನಸ್ಸು..

ಅಜ್ಜಯ್ಯ ತನ್ನ ಪುಟ್ಟ ಮೊಮ್ಮಕ್ಕಳಿಗೆ ನಾಳೆ ಖಂಡಿತ ನವಿಲು ತೋರುಸ್ತೀನಿ ಅಂತ ಆಸೆ ತೋರಿಸುತ್ತಿರೋದು ..God promise ಮಾಡು ತಾತಾ mother promiseಮಾಡು ತಾತಾ ಅಂತ ಅವು ಗೋಳು ಹುಯ್ಕೋತಿರೋದು ಕೆಳುಸ್ತಿತ್ತು.

ಮನೆಯ ದೊಡ್ಡ ಮೊಮ್ಮಗಳಲ್ಲವೇ ಅವಳು...ತಾತ ಅವಳಿಗೂ ಮೊದಮೊದಲು ನವಿಲು ತೋರಿಸಿದ್ದ ಅವಳ ನಾಲ್ಕನೇ ವರ್ಷದಲ್ಲಿ...ಅವಳಿಗೆ ಒಂದು ಚಂದದ ಹೆಸರು ಇತ್ತು..ಅರುಂಧತಿ ಅಂತ 'ಅರೂ' ಅಂತ ಕರೀತಿದ್ರು ಪುಟ್ಟದಾಗಿ ಪ್ರೀತಿಯಿಂದ.... ಆದರೆ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಸಿಕ್ಕ ಚುಂಬನ ಕೂಡ ನವಿಲಿನ ಮುಂದೇನೇ ಆಗುತ್ತೆ ಅಂತ ಖಂಡಿತ ಉಹೆ ಇರಲಿಲ್ಲ ಅವಳಿಗೆ.ಆ ಹುಡುಗನ ಎತ್ತರ ನೆನಪಿಗೆ ಬಂದು ಮುತ್ತು ಕೊಡೋಕ್ಕೆ ಅವನು ಬಗ್ಗಬೇಕಾಯ್ತಾಲ್ಲ... ಅನ್ನಿಸಿ ನಕ್ಕಳು.

ಬೆಳಗ್ಗೆ ತೋಟದ ಬಾವಿ ನೀರಲ್ಲಿ ಈಜಾಡಬೇಕು ಅಂತ ಬೇಗನೆ ಎದ್ದು, ತಾತನ ಜೊತೆ ಅಷ್ಟು ದೂರ ಬಾವಿ ಕಡೆ ಹೋದ್ರೆ.."ನಿನ್ನ ಚಿಕ್ಕಪ್ಪ ಇನ್ನೂ ವಂದಿಲ್ಲೇ ಅವನು ಬಂದ್ರೆ ಬೇಕಾದ್ರೆ ಈಜಡಿಕೊ" ಅಂತ ಕನ್ನಡ ತಮಿಳು mix ಮಾಡಿ ಹೇಳಿದ ತಾತನ ಮೇಲೆ ಸಿಟ್ಟು ಬಂದಿತ್ತು. "ಚಿಕ್ಕಪ್ಪ ವರಲ್ಲೇ ಅಂತ ಗೊತ್ತಾಗಿ ಅಲ್ಲೇ ಮಣ್ಣು ನೆಲದ ಮೇಲೆ ಅಡ್ಡಾದಳು ..ಜೂರು ನಿದ್ದೆ..

ಕರಿಯ ಬಂದು ಸಾಮಿ ಎದ್ದೇಳಿ ಮನೆ ತಾಕ್ಕೆ ಹೋಗ್‌ಬೇಕಂತೆ ದೊಡ್ಡ ಸಾಮಿ ಹೇಳ್ಟು ಅಂದಾಗ ಎಚ್ಚರ ಆಯ್ತು ಈ ಕರಿಯಂಗೆ ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು, ಅನ್ನೋ ಭೇದನೆ ಇಲ್ಲ ಅಪ್ಪಾಂಗು ಸಾಮಿ, ತಾತಂಗುಸಾಮಿ, ಅಜ್ಜಿಗೂ ಸಾಮಿ, ಮೊಮ್ಮಗಳಿಗೂ ಸಾಮಿ, ಮನೆ ಪುಟ್ಟ ಕಂದ - ರಾಘವಂಗು ಸಾಮಿ, ಅಂತನಲ್ಲ ಅನ್ನಿಸಿ.. ನಿದ್ದೆ ಕಣ್ಣಲ್ಲೇ ಅವನನ್ನೇ ನೋಡುತ್ತಿದ್ದಳು..ಅವನಿಗೆ ಗೊಂದಲವಾಗಿ 'ದೊಡ್ಡ ಸಾಮಿ ಕರಿತತೆ..' ಅಂತ ರಾಗ ಎಳೆದ...

ಈ ಕರಿಯ ಅಜ್ಜಯ್ಯನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು ಮೊದಲನೆ ಸತಿ ಅವನನ್ನು ನೋಡಿದಾಗ ಸಂಜೆ ತಂಪಲ್ಲಿ ಅವನು ಕಾಯಿಸುಲೀತಿದ್ದ... ಆಗ ನಾನು ಮೂರನೇ ಕ್ಲಾಸ್‌ನಲ್ಲಿದ್ದನಾ ಅಂತ ಜ್ಞಾಪಿಸಿಕೊಂಡಳು ಅರೂ.. ಅಜ್ಜಿ ಸಕ್ಕರೆ ನೀರು ಕಾಸಿ, ಹಳೆ ಕಾಫಿಗೆ ಆ ನೀರನ್ನು ಸೇರಿಸಿ ಒಂದು ದೊಡ್ಡ ಲೋಟ ಕಾಫಿ ಮಾಡಿದಳು. "ಇದನ್ನ ಕರಿಯನ ಲೋಟಕ್ಕೆ ಮೇಲಿಂದ ಸುರಿದು ಬಾ, ಅವನ ಲೋಟಕ್ಕೆ ಈ ಲೋಟ ತಾಗುಲಿಸ ಬೇಡ" ಅಂತ ಭೋಧಿಸಿ ಕಳುಹಿಸಿದಳು. ಆ ಛತ್ರದಂತಹ ಮನೆಯ ಅಡುಗೆ ಮನೆ, ಆರಂಗು, ಹಾಲೂ , ವಾರಂಡ ದಾಟಿ ಜಗುಲಿಗೆ ಬರೋಹ್ತೊತ್ತಿಗೆ ಅಜ್ಜಿಯ ಮಾತು ಮರೆತಿತ್ತು ಮೂರನೇ ಕ್ಲಾಸಿನ ಪುಟ್ಟ ಅರುಗೆ. ಕಯ್ಯಲ್ಲಿ ಕಾಫಿ ಇದ್ದಿದ್ದರಿಂದ ಅದನ್ನ ಕರಿಯನಿಗೆ ಹಾಕ್‍ಬೇಕು ಅಂತ ಗೊತ್ತಾಯ್ತು 'ಸಾಮಿ ಇಲ್ಲ್ಹಾಕಿ' ಅಂತ ಲೋಟ ಇಟ್ಟು ಬೆವರು ಒರೆಸಿಕೊಳ್ಳುತ್ತಾ ದೂರ ಹೋದ ಕರಿಯ.ಅರೂ ಕಾಫಿ ಕೆಳಗೆ ಚಲ್ಲದಂತೆ ನೀಟಾಗಿ ಹಾಕಬೇಕು ಅಂತ ಆ ಲೋಟಕ್ಕೆ ಈ ಲೋಟ ತಗುಲಿಸಿಯೇ ಹಾಕಿದ್ಲು..ಅಲ್ಲೇ ಇದ್ದ ಅವಳ ಅಪ್ಪ "ಹಂಗೆ ಲೋಟ ತಗುಲಿಸಿ ಹಾಕಬಾರದು ಕಂದ ಅಜ್ಜಿಗೆ ಬೇಜಾರಾಗುತ್ತೆ ನೋಡಿದ್ರೆ ನಿನ್ನ ಗ್ರಹಚಾರ ಬಿಡಿಸೋಳು" ಅಂದ್ರು.

ಮಳೆ ಬಂದ್ರೆ ಅಜ್ಜಿ ನೆನೆಯಕ್ಕೆ ಬಿಡ್ತಾಳಾ.. ಅಂತ ಕೇಳಿಕೊಂಡಳು ..ಆದ್ರೆ ನಾನು ನೆಂದರೆ ಈ ಚಿಲ್ತಿ ಪಿಲ್‌ಟಿಗಳು ನೆನೆಯಕ್ಕೆ ಶುರು ಮಾಡುತ್ತವೆ.. ಚಿಕ್ಕಮ್ಮಂಗೆ ಬೇಜಾರಾಗುತ್ತೆ ಅನ್ನಿಸಿತು. ಹಾಳಾಗ್ ಹೋಗ್ಲಿ ನೆನೀದಿದ್ರೂ ಪರ್ವಾಗಿಲ್ಲ ಈ ಪುಟ್ಟ ಮಕ್ಕಳು ಗಲಾಟೆ ಮಾಡದಿದ್ರೆ ಮಳೆ ಸದ್ಡನ್ನಾದರೂ ಕೇಳಬೇಕು,ಜಗುಲಿಮೇಲೆ ಕೂತ್ಕೊಂಡು ಮಳೆ ನೋಡಬೇಕು ಅಂತ ಜಗುಲಿ ಕಡೆಗೆ ಹೋದ್ಲು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದು ರಜಾದಲ್ಲಿ ಅಜ್ಜನ ತೋಟದ ಮನೇಲಿ ಸಮಯ ಕಳೆದ ಅವಳಿಗೆ ಮಳೆ everlasting ಅಚ್ಚರಿ ..ಬೆಳಗು, ಕಾಡು, ಕಡಲು, ಸಂಜೆ, ಉರಿಬಿಸಿಲು, ಬೆಳದಿಂಗಳು, ಎಲ್ಲಾನೂ ಒಂದು exitement..

ಬೇಕಂತಲೇ ಕಾಲೇಜಿಗೆ ಛತ್ರಿ ತೊಗೊಂಡು ಹೋಗದೇ ವಾಪಾಸಾಗುವಾಗ ಬರೋ ಮಳೆಯಲ್ಲಿ ಪೂರ್ತಿ ನೆನೆದು, ಕುಣಿದು..ಮನೆಗೆ ಬಂದಾಗ 'ಛೇ! ಎಂಥ ಮಳೆ! ಪೂರ್ತಿ ಬಟ್ಟೆ ನೆಂದು ಹೋಗಿದೆ..ಕಾಲೇಜು ಬಿಟ್ಟಾಗಲೇ ಬರಬೇಕಾ ಈ ಮಳೆ ಏನು ಖರ್‍ಮಾನೋ' ಅಂತ ದಪ್ಪ ಟೆವಲಿನಲ್ಲಿ ತಲೆ ಒರೆಸುತ್ತೀರೋ ಅಮ್ಮನ ಮುಂದೆ ನಾಟಕ ಆಡಿದ್ದು, ರಸ್ತೆಯಲ್ಲಿ ಮಳೆ ನೀರು ತುಂಬಿದ ಹೋಂಡಗಳ ಪಕ್ಕವೇ ನೆಡೆದು ಹೋಗುತ್ತಿರುವಾಗ ಲಾರಿಯೋ ಬಸ್ಸೊ ಬರ್‍ರ್‍ರ್ ಅಂತ ಅದರ ಮೇಲೆ ಹೋಗಿ ಇವಳ ಮೇಲೆ ನೀರಿನ ಅಭಿಷೇಕ ಆದಾಗ ಮನಸ್ಸಿನಲ್ಲಿ ಕುಣಿಯೊಅಷ್ಟು ಖುಷಿ ಆಗ್ತಿದ್ದ್ರೋ 'ಥತ್ ಈ ಲಾರಿ ಬಸ್ಸಿನವರಿಗೆ ಸರಿಯಾಗಿ drive ಮಾಡೋಕ್ಕೋ ಬರೋಲ್ಲ' ಅಂತ ಸುಮ್ಮನೇ ಬೈದಿದ್ದು ನೆನಪಾಯಿತು.

ಯಾರೋ ಕಪ್ಪಗಿನ ಹುಡುಗ ಬರುತ್ತಿರೋದು ಕಾಣಿಸಿತು ಜಗುಲಿ ಮೇಲೆ ಕೂತಿದ್ದವಳಿಗೆ..ನನ್ನ ಹುಡುಗನೂ ಹೇಗೆ ಇದಾನಲ್ಲ ಅನ್ನಿಸುತ್ತಿತ್ತು..ಆ ಹುಡುಗ ಬಂದದ್ದೆ "ಅಪ್ಪ ಎಲ್ಲೈತೆ ಗೊತ್ತಾ ಸಾಮಿ" ಅಂದ..ನೀ ಯಾರು ಅಂದಿದ್ದಕ್ಕೆ.."ಏ... ಕರಿಯನ ಕೊನೇ ಮಗ ಕನ ಸಾಮಿ" ಅಂದ ತೆಲೆ ಕೆರೆದುಕೊಳ್ಳುತ್ತಾ.."ತಾತನ ಜೊತೆ ತೋಟದ ಕಡೆಗೆ ಹೋದ ಎಂದಳು".

ಈ ಹುಡುಗನ ತರ ಇರೋದು ಮಾತ್ರವಲ್ಲ ನನ್ನ ಹುಡುಗನ ಜಾತಿ ಕೂಡ ಇವರದೇ ಜಾತಿ ಎಂದು ನೆನಪಿಗೆ ಬಂದಾಗ ಸಣ್ಣಗೆ ಬೆವರಿದಳು.....
'ಅಜ್ಜಿ ನೋಡಿದ್ರೆ ಗ್ರಹಚಾರ ಬಿಡಿಸೋಳು' ಅಂದಿದ್ದ ಅಪ್ಪ ಈ ಜಾತಿ ಹುಡುಗನ್ನ ಮದುವೆ ಆಗ್ತೀನಿ ಆಂದ್ರೆ ಏನುಹೇಳಬಹುದು ಅಂತ ಯೋಚಿಸುತ್ತಾ ಕುಳಿತ ಅವಳಿಗೆ ಮಳೆ ಸದ್ದು ಕೇಳುತ್ತಿರಲಿಲ್ಲ.....

8 comments:

ನಾಕುತಂತಿ said...

Modalu katheya helidu tandiro daati chennagide adre innu swalpa munduvarisidre adbhuta annisutittu!!

Prasad Shetty said...

ಎಲ್ಲ ಚೆನ್ನಾಗಿದೆ ಅಂದೆನಿಸಿದರೂ ಕೂಡ, ಕಥೆ ಮನಸಿಗ್ಗೆ ಹಿತವಾಗುತಿಲ್ಲ.! ಕನ್ನಡದ ಮದ್ಯೆ ಇಂಗ್ಲಿಷ್ ಬೆರೆಸಿದ್ದೆ ಕಾರಣವೇನೊ ಅನ್ನಿಸುತ್ತಿದೆ. ಕಥೆಯ ದಾಟಿ,ಪದ ಜೊಡಣೆ, ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಬಗೆ ಎಲ್ಲ ಚೆನ್ನಾಗಿದೆ. ನಿಮ್ಮ ಹೊಸ ಕಥೆಗಳಿಗೆ ಕಾಯುತ್ತಿರುವೆ.. ಪೂರ್ತಿ ಕನ್ನಡದಲ್ಲಿ ಬರೆಯಿರಿ ಎಂದು ಆಶಿಸುವೆ.

Unknown said...
This comment has been removed by the author.
Unknown said...

Mruganayani Bhavanegalu sogasagi haridubandide, male andre yenella tunturugalanna manasige harisibidithe, male andre navyathena bumige thalpisodu, manassu mathra bhuviya hage ellavannu swekarso hantakke thalpode kasta, manasu hosdanna bayasidru namma beru adakke poorakavagodilla, bahusha jevanadalli changes expect maduvavaru prashnegala dvandvalli silukiruttare annodanna thumba sogasagi chitrisiddira, nimma baravanige hige munduvariyali.

Shubaharikegalondige,
Rashmi

ಮೃಗನಯನೀ said...

ಧನ್ಯವಾದಗಳು ರಶ್ಮಿ ನನ್ನ ಮೂಲ ಪ್ರಶ್ನೆ ಅರ್ಥವಾಗಿದೆ ಅನ್ನೋದು ಸಂತೋಷ.. ಮಳೆ ಬಗ್ಗೆ ಬಿಡಿ ಎಷ್ಟು ಹೇಳಿದರು ಕಮ್ಮಿನೇ

Susheel Sandeep said...

ಬರವಣಿಗೆಯ ಶೈಲಿ ನಿಜಕ್ಕೂ ಚೆನ್ನಾಗಿದೆ! ಆದರೆ ಇದನ್ನ ಕಥೆ ಅನ್ನೋದಕ್ಕೆ ಮನಸ್ಸು ಒಪ್ತಾಇಲ್ಲ..ನಿಮ್ಮ ಈ ಬರವಣಿಗೆಯ ಉದ್ದೇಶ ಅರ್ಥವಾಗ್ಲಿಲ್ಲ..ಹಾಗೆ ಈ ಬರಹ ಇನ್‍ಕಂಪ್ಲೀಟ್ ಅನ್ನಿಸ್ತು!

ಮೃಗನಯನೀ said...

@ Revana
ಧನ್ಯವಾದಗಳು

@Prasad shetty
ಧನ್ಯವಾದಗಳು
ಪೂರ್ತಿ ಕನ್ನಡದಲ್ಲಿ ಬರೆಯಲು ಎಷ್ಟು ವರ್ಷ ಬೇಕಾಗುತ್ತೋ ಗೊತ್ತಿಲ್ಲ..Still ii will try

@ Susanskruta
ಕಥೆ ಅನ್ನದೇ ಏನಂತೀರಾ? ಕಥೆ ಹೇಳುವುದಷ್ಟೇ ಕಥೆಗಾರನ ಕೆಲಸ. ಏನು ಹೇಳಲು ಹೊರಟಿದ್ದೇನೆ ಅನ್ನೋದನ್ನ ನೀವೇ ನಿಮಗರ್ಥವಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಿ .

Unknown said...

@ Prasad Shetty

English padagalannu upayogisodu kadime maadabahudashte aadare sampoornavaagi avoid maaduvudu kashta. Haage madidaroo bahusha asahajavaagi kaanabahudu...namma dainandina jeevanadalli english haasu hokkagi bittide. So complete aagi avoid madodu kashta. Madidaroo kelavomme aa punch siguvudilla endu nanna bhavane.