Monday, June 11, 2007

ಕಾಣದ ಕಡಲಿಗೆ ಹಂಬಲಿಸುವ ಮನ. . .

ನನಗೆ ಅಹಂಕಾರ!

ನನಗೇ ಅಹಂಕಾರ! ಅದಕ್ಕೆ ಹೀಗಾಯ್ತು, ಅಂತ ಗಟ್ಟಿಯಾಗಿ ನನಗೆ ನಾನೇ ಕೇಳೋ ಹಾಗೆ ಹೇಳಿಕೊಂಡೆ.
ಭಾವ ಗೀತೆ ಕೇಳಿದ್ರೆ ಮನಸ್ಸಿಗೆ ಸಮಾಧಾನ ಆದ್ರೂ ಆಗುತ್ತೇನೋ ಅನ್ನಿಸಿ ಡಿ ವಿ ಡಿ ಪ್ಲೇಯರ್ ಆನ್ ಮಾಡಿದ್ರೆ ಮೊದಲಿಗೇ ಅವನಿಗಿಷ್ಟವಾದ ಹಾಡು - "ತೊರೆದು ಹೋಗದಿರು ಜೋಗೀ..ಅಡಿಗೆರಗಿಹ ಈ ದೀನಳ ಮರೆತು..."
ಸಿಟ್ಟು ಬಂದು ಮುಂದಿನ ಬಟನ್ ಅಮುಕಿದೆ. ಆದ್ರೆ ಆವನ ನೆನಪು ಬರುತ್ತೆ ಅಂತ ಆ ಹಾಡು ಕೇಳದೇ ಇರೋದು ಪಲಾಯನವಾದ. ಹಾಡು ಅವನದೇನು ಸ್ವತ್ತಲ್ಲವಲ್ಲ! ಒಂದು ಹಾಡು ಅವನ ನೆನಪು ತರಿಸಿ ನನ್ನ ವಿಚಲಿತಗೊಳಿಸುತ್ತೆ ಅನ್ನೋದು ಸುಳ್ಳು ಅನ್ನಿಸಿ, ಮತ್ತೆ ಹಿಂದಿನ ಬಟನ್ ಒತ್ತಿದಳು.

ಸಿಟ್ಟು ಯಾರ ಮೇಲೆ? ಅವನ ಮೇಲೋ?? ಅವನಿಗೆ ಅರ್ಥವಾಗದ ತನ್ನ ವ್ಯಕ್ತಿತ್ವದ ಮೇಲೋ??
ಇಷ್ಟು ವರ್ಷದ ಸ್ನೇಹದಲ್ಲಿ ಎಂತೆಂಥಾ ಕಷ್ಟದ ಗಳಿಗೆಯಲ್ಲೂ ಅವನು ನನಗೆ - ನಾನು ಅವನಿಗೆ ಆಸರೆಯಾಗಿದ್ದೀವಿ, ಒಬ್ಬರಿಗೊಬ್ಬರು ಸಮಾಧಾನ ಮಾಡಿದ್ದೀವಿ, ತುಂಬಾ ಭಾವುಕರಾಗಿ ಭಾವನೆಗಳನ್ನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ವಾಸ್ತಾವಿಕತೆಯ ಪಾಠ ಹೇಳಿದ್ದೀವಿ, ಬದುಕನ್ನ ಸಮರ್ಥವಾಗಿ ರೂಢಿಸಿಕೊಳ್ಳೋದನ್ನ ಕಲಿತಿದ್ದೀವಿ ಅಂದುಕೊಳ್ಳುತ್ತಿದ್ದಾಗ.. "ಅಮ್ಮಾ.." ಅಂತ ಪುಟ್ಟಿ ಕರೆದಿದ್ದು ಕೇಳಿಸಿತು. ಅವಳು ಕಟ್ಟಿದ ಆಟದ ಮನೆ ನೋಡಿ ಇವಳ ತಂದೇನೋ ತಾಯಿನೋ ಸಿವಿಲ್ ಎಂಜಿನೀರ್ ಇರ್ಬೇಕು ಅನ್ನಿಸಿತು."ಚೆನ್ನಾಗಿದೆ ಕಂದ, ಆದ್ರೆ ಆ ಮರ ರಸ್ತೆ ಮಧ್ಯ ಇದೆ ಅನ್ಸುತ್ತೆ , ಮನೆ ಪಕ್ಕದಲ್ಲಿಡು" ಅಂದೆ.

ಮಗು ದತ್ತು ತೊಗೋತೀನಿ ಅಂದಾಗ ಮನೆಯವರೆಲ್ಲ ಎಷ್ಟು ಕೂಗಾಡಿದರು! ಅಪ್ಪ ಮಾತು ಬಿಟ್ಟರು .ಮದುವೆನೇ ಆಗದೇ ಮಗು ಹುಚ್ಚು ಯಾಕೆ ನಿಂಗೆ ? ಅಂತ ಅಮ್ಮ ಎಷ್ಟು ಬೈದರು.. ಇವನು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಮಗು ದತ್ತು ತೊಗೋಳಕ್ಕಾಗುತ್ತಿತ್ತ ನನಗೆ? ಅನ್ನೋದು ಜ್ಞಾಪಕಕ್ಕೆ ಬಂದು, "ಎಷ್ಟು ಒಳ್ಳೆಯವನಲ್ಲವ." ಅಂದುಕೊಂಡೆ.

ಮೊದಲೆಲ್ಲಾ ಎಷ್ಟು ಜಗಳ ಆಗಿದೆ! ಆವಾಗಲೆಲ್ಲ ಜಗಳದ ನಂತರದ ಮೌನ ರಾಜಿಗೆ ಹಾತೊರೀತಿತ್ತು. ಆದರೆ ಮೊನ್ನೆ ಮೌನವಾಗಿ ಅಕ್ಕಪಕ್ಕದಲ್ಲೇ ಅರ್ಧಗಂಟೆ ಕೂತಿದ್ವಲ್ಲ ! ಮೌನಾನೂ ಜಗಳ ಆಡ್ತಿದೆ ಅನ್ನಿಸಿ ಹಿಂಸೆ ಆಗ್ತಿತ್ತು ನಂಗೆ. ಅವನು ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದ ಅನ್ನಿಸಿತು.

ಅವನು ಪುಸ್ತಕಗಳನ್ನು ತುಂಬಾ ಪ್ರೀತಿಸ್ತಿದ್ದ.. ಯಾವಾಗಲು ಶಾಪಿಂಗೂ, ಸಿನೆಮಾ ಅಂತ ತಿರ್ಗತಿರ್ತೀಯಾ ಈ ಪುಸ್ತಕ ಓದು ಅಂತ ಕಾರಂತರ 'ಬೆಟ್ಟದ ಜೀವ' ಕೈಯಲ್ಲಿಟ್ಟಿದ್ದ. ಆಮೇಲೆ ನಾನಂತೂ ಪುಸ್ತಕಗಳಲ್ಲೇ ಮುಳುಗಿ ಹೋದೆ. ಆಮೇಲೇನು ಪುಸ್ತಕಗಳ ಬಗ್ಗೆನೇ ಮಾತಾಡಿದ್ದು, ಭೈರಪ್ಪ, ಕಾರಂತ, ಬೀ ಜಿ ಎಲ್ ಸ್ವಾಮಿ, ಮಾಸ್ತಿ, ಗೊರೂರು, ಕುವೆಂಪು.. ಇವರುಗಳ ಮಧ್ಯಾನೇ ಓಡಾಡಿದ್ದು.

ಈಗ್ಯಾಕ್ ಹಿಂಗಾಡ್ತಿದಾನೆ? ದುಬೈ ನಿಂದ ಬಂದವನು ಸೀದ ನನ್ನ ಮನೆಗೆ ಬಂದ. ಅವನು ನನ್ನ ಕಡೆಗೆ ನೋಡಿದ ನೋಟದಲ್ಲೇ ಅನ್ನಿಸಿತು ನನ್ನ ಬಗೆಗೆ ಇರೋ ಭಾವ ಬಾರಿ ಸ್ನೇಹದ್ದ್ಡಾಗಿ ಉಳಿದಿಲ್ಲ, ಮತ್ತೆ ಅವನನ್ನು ಸ್ನೇಹದ ಟ್ರಾಕ್ಗೆ ತರೊಕ್ಕೆ ಎರಡು ದಿನ ಆದ್ರೂ ಬೇಕು ಅಂತ.

ಮಕ್ಕಳು ಅಂದರೆ ಅವನಿಗೆ ಪ್ರಾಣ. ತನ್ನ ಅಣ್ಣನ ಮಗು ಇನ್ನೂ ತೊಟ್ಟಿಲಲ್ಲಿರುವಾಗಲೇ ಎಷ್ಟು ಮಾತಾಡಿಸುತ್ತಿದ್ದ, ಆಟ ಆಡಿಸುತ್ತಿದ್ದ .. 'ಜನ ಗಣ ಮನ', 'ಸಾರೆ ಜಹಾನ್ಸೆ ಅಛ್ಚಾ' ಹೇಳಿ ಮಲಗಿಸುತ್ತಿದ್ದ ! ಇವನನ್ನು ಹೊರಗಡೆಯವರು ನೋಡಿದರೆ ಮೆಂಟ್ಲೂ ಅಂತ ಅಂದುಕೋತಿದ್ರು. ಯಾರಾದರೂ ಯಾಕೆ ಈ ಹಾಡು ಹಾಡಿ ಮಲಗಿಸುತ್ತೀಯ ? ಅಂದ್ರೆ "ಚಿಕ್ಕ ವಯಸ್ಸಿನಿದಲೇ ದೇಶ ಭಕ್ತಿ ಬರಲಿ" ಅಂತ ಅನ್ನುತ್ತಿದ್ದ.ಆದ್ರೆ ನನ್ನ ಹತ್ರ ಮಾತ್ರ 'ನಂಗೆ ಅವೆರೆಡು ಹಾಡು ಬಿಟ್ರೆ ಬೇರೆ ಯಾವ ಹಾಡು ಪೂರಾ ಬರೋಲ್ಲ ಕಣೆ' ಅಂದಿದ್ದ.ಅವರ ಅಣ್ಣನ ಮಗು ಅಂತೂ ಇವನನ್ನೇ ಅಪ್ಪ ಅನ್ನುತ್ತಿತ್ತು. ಈಗ ನನ್ನ ಮಗುನೂ ನನಗಿಂತ ಹೆಚ್ಚಾಗಿ ಅವನೇ ಪ್ರೀತಿಸುತ್ತಾನೆ ಅನ್ನಿಸುತ್ತೆ. ಪುಟ್ಟಿಯಂತೂ ಇವನನ್ನ ತುಂಬಾ ಹಚ್ಚಿಕೊಂಡುಬಿಟ್ಟಿದೆ . ಪುಟ್ಟಿನ ದತ್ತು ತಗೊಂಡಾಗ ಯಾವತ್ತೂ ಮಗುವಿಗೆ ತಾನು ದತ್ತು ಮಗು ಅನ್ನೋ ಭಾವನೆ ಬರದ ಹಾಗೆ ನೋಡಿಕೊ ಅಂತ ಭೋದಿಸಿದ್ದ.

ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ ಇಲ್ಲ. ಅನ್ಯ ಮನಸ್ಕನಾಗಿ ಏನೇನೋ ಮಾತಾಡುತ್ತಿದ್ದ. ಅಲ್ಲಿನ ಮುಸ್ಲಿಮ್ ಗಂಡಸರ ಬಗ್ಗೆ, ಯಾವಾಗಲೂ ಬುರಖಾದಲ್ಲಿ ಮುಳುಗಿರೋ ಅವರ ಹೆಂಡತೀರ ಬಗ್ಗೆ, ಅಲ್ಲಿ ಚೀಪಾಗಿ ಸಿಗೋ ಚಿನ್ನದ ಬಗ್ಗೆ- ಹೀಗೆ ಏನೇನೋ... ನನಗೆ ಹಿಂಸೆ ಆಗುತ್ತಿತ್ತು. "ದಯವಿಟ್ಟು ಕಣೋ , ಅದೇನು ಮನಸ್ಸಿನಲ್ಲಿದೆಯೋ ಹೇಳು. ಸುಮ್ಮನೇ ಏನೇನೋ ಮಾತಾಡಬೇಡ ನೀ ನಾಟಕ ಮಾಡೋದನ್ನ ನನ್ನಕೈಲಿ ನೋಡಕ್ಕಾಗಲ್ಲ "ಅಂದೆ.

ಅವನಿಗೆ ದುಂಡು ಮಲ್ಲಿಗೆ ತುಂಬಾ ಇಷ್ಟ ಆಗೋದು. ಇನ್ನೂರು ಮುನ್ನೂರು ಗ್ರಾಂ ಬಿಡಿ ದುಂಡು ಮಲ್ಲಿಗೆ ತಂದು ಅತ್ತಿಗೆಗೆ ಕೊಟ್ಟು 'ಅತ್ತಿಗೆ ಹೂಕಟ್ಟಿ ದೇವರಿಗೆ ಇಟ್ಟು, ನೀವು ಮುಡುಕೊಳಿ, ಅಮ್ಮನಿಗೂ ಕೊಡಿ.' ಅಂತಿದ್ದನ್ನ ನಾನೇ ನೋಡಿದ್ದೆ. ಇನ್ನು ನನ್ನ ಮನೆಗೆ ಬಂದರೆ ಅವನೇ ದೇವರ ಮನೆಗೆ ಹೋಗಿ ಅಲ್ಲಿ ನಾನು ಹಾಕಿರೋ ರಂಗೋಲಿ ತುಂಬಾ ಸಾವಧಾನವಾಗಿ ದುಂಡು ಮಲ್ಲಿಗೆ ತುಂಬಿಸಿ 'ನೋಡೇ! ಎಷ್ಟು ಚೆನ್ನಾಗಿ ಕಾಣುತ್ತೇ ನಿನ್ನ ರಂಗೋಲಿ, ನನ್ನ ದುಂಡು ಮಲ್ಲಿಗೆ ಹೂವಿಲ್ಲ ಅಂದ್ರೆ ಚೆನ್ನಾಗಿ ಕಾಣೋದೇ ಇಲ್ಲ' ಅಂತ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ.

"ಮನೇಲಿ ಹುಡುಗಿ ಹುಡುಕ್ತಿದಾರೆ ಕಣೇ, ನಿನ್ನನ್ನ ಎಲ್ಲಿ ಕಳೆದುಕೊಂಡು ಬಿಡ್ತೀನೋ ಅಂತ ಭಯ ಆಗ್ತಿದೆ. ನಾನು ಮದುವೆ ಆದಮೇಲೆ ನಿನ್ನ ಜೊತೆ ಹೀಗೆ ಇರಕ್ಕಾಗುತ್ತಾ?? ಮನಸ್ಸು ಬಂದಾಗಲೆಲ್ಲ ನಿನ್ನ ಮನೆಗೆ ಬಂದು ಗಂಟೆಗಟ್ಲೆ ಮಾತಾಡಿ ಬದ್ನೇಕಾಯಿ ಬಜ್ಜಿ , ಅಕ್ಕಿ ರೊಟ್ಟಿ, ಆಲೂ ಪರಾಟಾ, ಚಿನೀಸ್ ನೂಡಲ್ಸ್ ಅಂತ ಅಡುಗೆಗಳಲ್ಲಿ ಎಕ್ಸ್ಪೇರಿಮೆಂಟ್ ಮಾಡೋಕ್ಕಾಗುತ್ತಾ?? ನಿನ್ನ ಮಗೂನ ಹೀಗೆ ಮುದ್ದುಗರೆಯೊಕ್ಕಾಗುತ್ತಾ?? "
ಅಂತ ನನ್ನ ಕಣ್ಣುಗಳಲ್ಲಿ ಉತ್ತರ ಹುಡುಕಿದ. ಆದರೆ ನನ್ನ ಕಣ್ಣುಗಳು ಪ್ರಶ್ನೆ ಕೇಳುತ್ತಿದ್ದವು.. ಎಷ್ಟು ಸರ್‍ರ್ ಅಂತ ಸಿಟ್ಟು ಹತ್ತಿತು ಅವನಿಗೆ.

" ನಿನಗೆ ಅಹಂಕಾರ ಕಣೆ ಯಾಕೆ ಎಲ್ಲದನ್ನು ನನ್ನ ಬಾಯಲ್ಲೇ ಹೇಳಿಸಬೇಕು ಅಂತೀಯ ಅರ್ಥಮಾಡ್ಕೋ ನನ್ನ! ಸರಿ. ನಾನೇ ಹೇಳ್ತೀನಿ ಕೇಳು, ಹೌದು ನಿನ್ನ ಪ್ರೀತಿಸುತ್ತೀನಿ ನಾನು ನೀನು ನಂಗೆ ಪೂರ್ತಿ ಪೂರ್ತಿಯಾಗಿ ಬೇಕು. ಮದುವೆ ಆಗ್ತೀಯಾ ನನ್ನ?" ಅಂದ.

ಮೂರು ವರ್ಷದ ಹಿಂದೆ ನಾನು ಇವನಿಗೆ ಕೇಳಿದ ಮಾತನ್ನು ನನಗೆ ವಾಪಸ್ಸು ಕೇಳ್ತಿದಾನೆ ಅನ್ನಿಸಿ ಅವನ ಮುಖ ನೋಡಿದೆ.
"ಅಪ್ಪ ಅಮ್ಮನ ಚಿಂತೆ ಮಾಡ್ಬೇಡ ನಿಮ್ಮ ಮನೆಯೊರನ್ನ ಒಪ್ಪಿಸೋ ಜವಾಬ್ದಾರಿ ನಂದು ಹೇಗಾದ್ರೂ ಮಾಡಿ ಒಪ್ಪಿಸುತ್ತೀನಿ" ಅಂದ .

ಅಪ್ಪ ಅಮ್ಮನ್ನ ಹೇಗಾದ್ರೂ ಮಾಡಿ ಒಪ್ಸಾಣ ಕಣೋ.. ನಾನು ಆವತ್ತು ಅಂದಿದಕ್ಕೆ -
"ಹೇಗೆ ಒಪ್ಪಿಸುತ್ತಿಯ? ನಿಮ್ಮ ಜಾತಿಯವರಿಗೂ ನಮ್ಮ ಜಾತಿಯವರಿಗೂ ನಾವೇ ಮೇಲೂ ಅನ್ನೋ ಹಮ್ಮೂ... ನಮ್ಮ ಮನೇಲಿ ಶಿವಾಪೂಜೆ ನಿಷಿದ್ಧ, ನಾವು ಶ್ರೀ ವೈಷ್ಣವರು ಅನ್ನೋ ಅಹಂಕಾರ.. ನಿಮ್ಮ ಮನೇಲಿ ಶಿವನನ್ನು ಬಿಟ್ಟರೆ ಇಲ್ಲ ಅನ್ನುತ್ತಾರೆ, ಲಿಂಗಾಯಿತರು ಬ್ರಾಹ್ಮಣರಿಗಿಂತ ಶ್ರೇಷ್ಠ ಅನ್ನೋ ಭಾವನೆ. ಹೇಗಾದ್ರೂ ಅಂದ್ರೆ ಹೇಗೆ? ಅಂತ ಯೋಚಿಸಿದ್ದೀಯ? ಅಪ್ಪ ಅಮ್ಮನಿಗೆ ನೂವು ಮಾಡೋದು ಬೇಡ"
ಮೂರು ವರ್ಷದ ಹಿಂದೆ ಅಂದದ್ದು ನೆನಪಾಗಿ ಅವನ ಕಂಗಳನ್ನೇ ದಿಟ್ಟಿಸಿದೆ.
"ನೀ ಹಾಗೆ ನನ್ನ ನೋಡಬೇಡ ಏನಾದ್ರೂ ಮಾತಾಡು ಏನ್ ತಿಳ್ಕೊಳ್ಳಲಿ ನಾನು" ಅಂದ.

ಮೊದಮೊದಲು ಅವನನ್ನು ತನ್ನ ಕಣಿವೆಯಾಳಕ್ಕೆ ಇಳಿಸಿಕೊಂಡ ಹೆಣ್ಣಿನ ಬಗ್ಗೆ ಹೇಳಿಕೊಂಡಾಗ ನನಗೇನಾದರೂ ಅನ್ನಿಸಿತ್ತಾ ?? ಅನ್ನಿಸಿದ್ದು ಒಂದೇ.. ಸಧ್ಯ ಇವನು ದುಡ್ಡು ಕೊಟ್ಟು ಯಾರ ಹತ್ತಿರವೂ ಹೋಗಲಿಲ್ಲವಲ್ಲ ಅಂತ.ಅವಳು ಅಮೇರಿಕನ್ ಆದ್ದರಿಂದ ಏನು ಅನ್ನಿಸಲಿಲ್ಲವ? ಅಂತ ಮತ್ತೆ ಕೇಳಿಕೊಂಡಳು. ಅವಳು ಇವನಿಗೆ "dont kiss me - ಪ್ರೀತಿ ಇಲ್ಲದಿರೊವಾಗ ಕಿಸ್ಸಿಂಗ್ ಬೇಕಿಲ್ಲ" ಅಂದಿದ್ದಳಂತೆ.


ಆದರೆ ಪ್ರೀತಿಯೇ ಇಲ್ಲದಿರೋವಾಗ ಅಂತಹ ಸಂಬಂಧ ಹೇಗೆ ಸಾಧ್ಯವಾಗುತ್ತೆ? ಅದೂ ಇಷ್ಟೆಲ್ಲಾ ಯೋಚಿಸೋ ಹುಡುಗನಿಗೆ ಅಂತಹ ಜರೂರತ್ತಾದರೂ ಏನಿತ್ತು ಅನ್ನಿಸಿತು. ಈ ಪ್ರಶ್ನೆಯನ್ನೇ ಕೇಳಿದ್ದಕ್ಕೆ-

"ಊಟಕ್ಕೆ ಕರೆದಿದ್ದಳು, ಹಾಗೆ ಈ ಊಟವನ್ನೂ ಮಾಡಿಸುತ್ತಾಳೆ ಅಂತ ಗೊತ್ತಿರಲಿಲ್ಲ. ಅವಳ ಅವತ್ತಿನ ಜರೂರತ್ತಿರಬಹುದು ನಾನು, ಇಲ್ಲ ಭಾರತದ ಗಂಡಸುತನ ಹೇಗಿರುತ್ತೆ ಅಂತ ನೋಡೋ ಆಸೆ ಇರಬಹುದು, ಅದೇನೇ ಆಗಲಿ ನಾನು ಪರಿಪೂರ್ಣ ಗಂಡು ಅನ್ನೋ ಭಾವನೆ, ಅಹಂಕಾರ ತರಿಸಿದ್ದೇ ಅವಳು" ಅಂದವನ ಮೇಲೆ ಭಯಂಕರ ಸಿಟ್ಟು ಬಂದಿತ್ತು.

"ಮಿಲನ ಅಂದರೇನೇ ಎರಡು ಒಂದಾಗೋದು. ಎರಡು ಒಂದರೊಂದರಲ್ಲಿ ಮಿಳಿತವಾಗೋದು. ಐಕ್ಯದಲ್ಲಿ ಅಹಂಕಾರಕ್ಕೆ ಅರ್ಥ ಎಲ್ಲಿ ನಾನು ವಿಜ್ರಂಭಿಸಿದೆ ಅನ್ನೋವಾಗಲೇ ಅಹಂಕಾರ ಬರೋದು ಮೇಲನ ಬರೀ ವಿಜ್ರಂಭಣೆ ಆದರೆ ಅದು ಮಹೋತ್ಸವವಾಗೋಲ್ಲ, ಬರೀ ಕಾಮ ಅನ್ನಿಸಿಕೊಳ್ಳುತ್ತೆ. ಮುಗಿಲು ಕಣಿವೆಯೊಳಕ್ಕೆ ಮಳೆಯಾಗಿ ಇಳಿಯುತ್ತೆ, ನೆಲವನ್ನು ತಣಿಸುತ್ತೆ, ತಣಿಸಿ ತಾನು ಸುಖಿಸುತ್ತೆ. ಕಣಿವೆಯನ್ನ ಮಳೆಯಿಂದ ತುಂಬಿಸಿ ವಿಜ್ರಂಭಿಸುತ್ತೇನೆ ಅನ್ನೋ ಹುಂಬತನಕ್ಕೆ ಇಳಿಯೋಲ್ಲ" ಅಂತ ಆವೇಶದಲ್ಲಿ ಮಾತಾಡಿದ ಮೇಲೆ, ಮಾತಾಡಿದ್ದು ಹೆಚ್ಚಾಯಿತೇನೋ,ಇವೆಲ್ಲ ಅನುಭವವಿಲ್ಲದ ಪುಸ್ತಕದ ಬದನೇಕಾಯಿಯಾಗಿರುವ ತನ್ನ ಮಾತುಗಳೇನೋ ಎಂದು ಅನ್ನಿಸಿದರೂ ಕಣ್ಣುಗಳಲ್ಲಿನ ಕಾನ್ಫಿಡೆನ್ಸ್ ಬಿಟ್ಟುಕೊಡದೇ ಅವನನ್ನೇ ದಿಟ್ಟಿಸುತ್ತಿದ್ದರೆ ಅವನೂ ತುಂಬಾ ಹೊತ್ತು ದಿಟ್ಟಿಸಿ-
"ನೀನು, ನಿನ್ನ ಮೊದಲ ಮಿಲನ ಮಹೋತ್ಸವದ ಬಗ್ಗೆ ಹೇಳುತ್ತೀಯ ಅದು ಆದಾಗ?? ಅಂದಿದ್ದ. ಧ್ವನಿಯಲ್ಲಿ ವ್ಯಂಗ್ಯವಿತ್ತಾ? ಗೊತ್ತಿಲ್ಲ..

"ತಿಂಗಳಿಗೆ ಒಂದು ಲಕ್ಷ ಸಂಬಳ, ಓಡಾಡೋಕ್ಕೆ ಕಾರು, ಇಂದ್ರನಗರದಲ್ಲಿ ಮನೆ, ದಿನದ ಇಪ್ಪತ್ತುನಾಲ್ಕು ಗಂಟೆ ಇಂಟರ್ನೆಟ್ಟು ಫೆಸಿಲಿಟಿ, ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ಕನಸುಗಳನ್ನು ನನ್ನ ಕನಸಾಗಿಸಿಕೊಂಡಿರುವ ಮತ್ತು ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಿರುವ ನಾನು. ಇನ್ನೇನು ಬೇಕು ಹೇಳೇ ನಿಂಗೆ? ನಿನಗೂ ಬಹಳಷ್ಟು ಹುಡುಗರು ಸ್ನೇಹಿತರಿದ್ದಾರೆ , ಯಾರಾದರೂ ನನಗಿಂತ ನಿನ್ನ ಅರ್ಥಮಾಡಿಕೊಂಡೋರು ಇದ್ದಾರ? ಇದ್ದರೆ ಹೇಳು. ನಾವು ಒಂದು ದಿನ ಆದ್ರೂ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡೋಕ್ಕೆ ಪ್ರಯತ್ನಿಸಿದ್ದೀವ? ನೀನು ನೀನಾಗಿ ಬರಿ ವಸುಂಧರೆಯಾಗಿ, ನಾನು ನಾನಾಗಿ ಬರೀ ರಾಜೇಶನಾಗಿ ಇನ್ಯಾರ ಜೊತೆಗಾದರೂ ಇರೋಕ್ಕೆ ಸಾಧ್ಯವಾಗಿದೆಯಾ? "

"ನೀ ಪ್ರೋಪೋಸ್ ಮಾಡ್ತೀಡೀಯಾ?" ಅಂತ ನಾನು ಕೇಳಿದೆ

"ಇಲ್ಲ ಕಣೆ, ನಾಳೆ ನಮ್ಮ ಆಫೀಸಿನಲ್ಲ್ಲಿ ಭಾಷಣ ಇದೆ. ಅದಕ್ಕೆ ಪ್ರಾಕ್ಟೀಸ್ ಮಾಡ್ತೀದೀನಿ." ಅಂದವನಿಗೆ ಸಿಟ್ಟು ನೆತ್ತಿಗೇರಿತ್ತು.

ಆದರೆ ನನ್ನ ಬದುಕಿನ ದಾರಿಯೇ ಬೇರೆಯಲ್ಲವ? ನಾನು ಇವನನ್ನ ಮದುವೆಯಾದರೆ ಅತ್ಯದ್ಭುತ ದಂಪತಿಗಳು ಅನ್ನಿಸಿಕೊಳ್ಳಬಹುದು. ಇವನು ನನ್ನಲ್ಲಿ ಮುಳುಗಬಹುದು, ನಾನು ಇವನ ಬೆಚ್ಚನೆಯ ಆಸರೆಯಲ್ಲಿ ತೇಲಬಹುದು..ಆದರೆ ನನಗೆ ಬೇಕಾಗಿರೋದು ಏನು? ಎಲ್ಲ ಹುಡುಗಿಯರಂತೆ ಮದುವೆಯಾಗಿಬಿಡೋದ? ಛೇ ಎಲ್ಲರನ್ನು ಯಾಕೆ ತರಲಿ ! ಹೋಲಿಕೆಗಳನ್ನು ಮಾಡಿಕೊಳ್ಳಬಾರದು. ನಾನೇ ಹೆಚ್ಚು ಎಲ್ಲರಿಗಿಂತ ಅನ್ನೋ ಅಹಂಕಾರ ಬರುತ್ತೆ.. ಆದರೆ ನನಗೆ ಬೇಕಾಗಿರೋದೇನು? ಗೊತ್ತಾಗುತ್ತಿಲ್ಲ.. ಮದುವೆಯಂತೂ ಬೇಡ ಅನ್ನಿಸುತ್ತಿದೆ.. ಆದರೆ ಇದನ್ನು ಅವನಿಗೆ ವಿವರಿಸಲಾಗಲಿಲ್ಲ.

'ಇಲ್ಲ ನನಗೆ ಮದುವೆ ಬೇಡ' ಅಂದೆ. ಅವನೂ ಒಳಗೊಳಗೆ ಕುದ್ದು ಹೋಗುತ್ತಿರುವುದು ಗೊತ್ತಾಗುತ್ತಿತ್ತು . ಅರ್ಧ ಗಂಟೇ ಏನೂ ಮಾತಾಡಾದೇ "ನಿನಗೆ ಅಹಂಕಾರ!" ಎಂದಷ್ಟೇ ಹೇಳಿ ಎದ್ದು ಹೋದ. ನನಗೆ ಅಹಂಕಾರವೇ?
ಕೇಳಿಕೊಳ್ಳುತ್ತಿದ್ದೇನೆ ಪ್ಲೇಯರ್‌ನಲ್ಲಿ - ಕಾಣದಾ ಕಡಲಿಗೇ ಹಂಬಲಿಸಿದೇ ಮನಾ... ಅಂತ ಅಶ್ವಥ್ ರು ಹಾಡುತ್ತಿದ್ದಾರೆ.....

23 comments:

Susheel Sandeep said...

Mruganayanee,
You Rock!

ಅಪ್ಪು..... said...

ಮೃಗನಯನೀ,

ಲೀವ್-ಇನ್ ಸಂಸ್ಕೃತಿ [ತಪ್ಪಾಗಿ ಅರ್ಥೈಸಿಲ್ಲ ಅನ್ಕೊಂಡಿದೀನಿ] ಬಗ್ಗೆ ಇಣುಕುನೋಟ ಚೆನ್ನಾಗಿ ಮೂಡಿಬಂದಿದೆ.

Simply Superb....

Keep it up....

Raghu

ಶ್ಯಾಮಾ said...

Simply superb....

kathe eshtu chennagide adndre avalu naanenaa annuvashtara mattige katheyolage muLugihogidde...

Keep going......

Unknown said...

ಕತೆ ಓದಿದೆ,ಯವ್ದೊ ಫಿಲ್ಮ್ ನ ಹಿಂದೆ ಮುಂದೆ ಓಡಿಸಿ ನೊಡಿದಹಾಗಿತ್ತು.
"ಕಾಣದ ಕಡಲಿಗೆ ಹಂಬಲಿಸುವ ಮನ..." ಹೆಸರು ಅರ್ಥಪೂರ್ಣವಾಗಿದೆ.

ಪೂರ್ತಿ ಓದಿದಾಗ ಭಾಗಶಃ ಲೀವ್-ಇನ್ ಸಂಸ್ಕೃತಿಯತ್ತ ಕತೆ ಇಣುಕಿದೆ ಅನ್ಸುತ್ತೆ.


ಆದ್ರು ಕತೆ ಮಾತ್ರ ಚೆನ್ನಾಗಿ ಮೂಡಿಬಂದಿದೆ...ಹೀಹೆ ಬರಿತಾಯಿರಿ :)

Bigbuj said...

ಮೃಗನಯನೀಯವರೇ ,

ನಿಮ್ಮ ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ..ಅದರಲ್ಲೂ
"ಮುಗಿಲು ಕಣಿವೆಯೊಳಕ್ಕೆ ಮಳೆಯಾಗಿ ಇಳಿಯುತ್ತೆ, ನೆಲವನ್ನು ತಣಿಸುತ್ತೆ, ತಣಿಸಿ ತಾನು ಸುಖಿಸುತ್ತೆ. ಕಣಿವೆಯನ್ನ ಮಳೆಯಿಂದ ತುಂಬಿಸಿ ವಿಜ್ರಂಭಿಸುತ್ತೇನೆ ಅನ್ನೋ ಹುಂಬತನಕ್ಕೆ ಇಳಿಯೋಲ್ಲ" sentence is Marvelously excellent..
ಆದರೆ ಒಂದು ಅರ್ಥ ಆಗ್ಲಿಲ್ಲ ಕಣ್ರೀ ನನಗೆ. ಹುಡುಗ ದೂಬೈಂದ ಬಂದ ಅಂತ್ ಹೇಳ್ತೀರಾ ಮತ್ತೆ ಅಮೇರಿಕನ್ನ್ ಹುಡುಗಿಯ ಜೊತೆ ಸಂಬಂದ್ ಎಲ್ಲಿ(ಯಾವ ದೇಶದಲ್ಲಿ)ಬೇಳಿಸಿದ್ದ..ಅದು ನಿಮಗೆ ಗೊತ್ತಾಗದೆ ಆಗಿದ ತಪ್ಪು ಅಥವಾ ನಿಮ್ಮ ಕಥೆಯಲ್ಲಿ ನೀವು ದೂಬೈಳ್ಲಿ ಅಮೇರಿಕನ್ ಹುಡುಗಿ ಸೃಷ್ಟಿ ಮಾಡಿದ್ದೀರಾ?.. These small mistakes make readers to think , Is this literary work is just fictional?

I have also noticed, Almost all of your articles portrays or depicts an unhappy but meaningful ending..
This is really strength of ur writing. But it can also have some -ve points, If you write some more articles in the same way..No surprise that readers will call you as Tragedy ending writer..So sometime its always good to write something different(With happy Happy ending) than the same..

BTB Its just my views..Different people may have different views..Its up to u how u will take it..

ನಿಮ್ಮ ಬರವಣಿಗೆ ತುಂಬಾ ಇಂಪ್ರೋವೆ ಆಗಿದೆ..ಹೀಗೆ ಬರೀತ ಇರಿ..ನಿಮ್ಮ ಇನ್ನೂ ಹೆಚ್ಚಿನ ಕಥೆಗಳಿಗಾಗಿ ಕಾಯುತಿದ್ದೇನೆ.

With Regards
Bujju

ಜಯಂತ ಬಾಬು said...

ಸುಶೀಲ್ ಬ್ಲಾಗ್ ನೋಡ್ತ ಇದ್ದೋನು ಈ ಕಡೆ ಬಂದೆ ..ನಿಮ್ಮ ಈ ಕಥೆಯಷ್ಟೇ ಓದಿದ್ದು.. ತುಂಬಾ ತುಂಬಾ ಚೆನ್ನಾಗಿದೆ.

ಅದೇ ಅಶ್ವಥ್ ಅವರು ಈ ಹಾಡನ್ನ ಮುಂದೆ ಹಾಡ್ತಾ..ನಿಧಾನ ಗತಿಯಲ್ಲಿ ಹೇಳೋದು...ನೆನಪಾಗ್ತ ಇದೆ.

"ಜಟಿಲ ಕಾನನದಿ,ಕುಟಿಲ ಪಥಗಳಲಿ(ಸರಿ ಅಂದ್ಕೊತಿನಿ)
ಹರಿವ ತೊರೆಯು ನಾನು,ನಾ....ನು"..

Anonymous said...

ಮೃಗನಯನಿ,
ಕಥೆ ನಿಜಕ್ಕೂ ಅದ್ಭುತ ಕಲ್ಪನೆ......
ಆದರೆ ಇದು ನಿಜ ಜೀವನದಲ್ಲಿ ಸಾದ್ಯವಾ? ಒಂದು ಹೆಣ್ಣಿಗೆ ಗಂಡಿನ ಆಸರೆ ಇಲ್ಲದೇ ಬದುಕಲು ಆಗುತ್ತಾ ಅದು ಮಗುವನ್ನು ದತ್ತುಪಡೆದು....

ಅವರಿಬ್ಬರ ಸ್ನೇಹ ಅಪರೂಪವಾದುದ್ದು......

ತಾನು ಮೂರು ವರ್ಷದ ಹಿಂದೆ ಇಷ್ಟಪಟ್ಟ ಹುಡುಗ ಈಗ ಅವನಾಗೆ ಹತ್ತಿರ ಬಂದಾಗ ಬೇಡವೆನ್ನುತಾಳಾ ಆ ಹುಡುಗಿ?
ನನ್ನ ದೃಷ್ಠಿಇಂದ ಈ ಕಥೆ ಇಲ್ಲಿಗೆ ಮುಗಿಯುವುದಿಲ್ಲಾ ಯಾಕೆಂದರೆ ಅವನಿಗೆ ಅವಳು ಯಾವುದೇ ಉತ್ತರವನ್ನು ನೀಡಿಲ್ಲಾ..... ಆದ್ದರಿಂದ ಅವಳು ಅವನನ್ನು ಮರುದಿನ ಕರೆದು ನಂಗೂ ನೀನೂ ಪೂರ್ತಿಯಾಗಿ ಬೇಕು ಎನ್ನುತ್ತಾಳೆ ಅಂತಾ ಅನ್ಕೋಂಡು ಈ ಕಥೆಗೆ ಹ್ಯಾಫಿ ಎಂಡಿಂಗ್ ಕೊಡ್ತಾ ಇದಿನಿ.

Ultrafast laser said...

Mrinee,
"avanannu thanna kaNiveyoLage iLisikoMdavaLu...." is the new phrase which I liked. I felt something here. This "kaNiveyoLage iLisikoLLuvudu.." sounded like "making somebody victim" and his situation sounded like that of a victim's.

That lady depicts an unchangable, non-progressive character. This, according to me, is because, she rejects him just because he had rejected her proposal. Here, there is just a tit for tat- attitude. On the other hand, the attitude of hers implies a stagnant mentality that cannot accept time-evolving state of mind or an experience-oriented change in one's character.

Particularly, his experience might have changed him and that now he is ready for marriage. That doesnot mean that she doesnot have the right to reject his proposal, but simply that her rejection shouldnot be based on his previous rejection (again, tit for tat).

Regards
Dr.D.M.Sagar
Canada

ಮೃಗನಯನೀ said...

@ Suanskruta
Thnx Susanskrut

@ Appu
ಲೀವ್-ಇನ್ ಸಂಸ್ಕೃತಿಯ ಬಗ್ಗೆ ಬರೆದಿಲ್ಲ ನಾನು... ಧನ್ಯವಾದಗಳು.ಹೀಗೆ ಗಮನಿಸುತ್ತಾ ಇರಿ

ಮೃಗನಯನೀ said...

ಧನ್ಯವಾದಗಳು ಶ್ಯಾಮಾ :-D

ಮೃಗನಯನೀ said...

@ ರಾಜ್
ನಾನು ಬೇಕಂತಲೇ ಆ technique ಬಳಸಿಕೊಂಡಿದೀನಿ ಒಂದು ಪ್ಯಾರಾ past tense ನಲ್ಲಿದ್ದರೆ ಇನ್ನೊಂದು near presentದು.

ಧನ್ಯವಾದಗಳು

ಮೃಗನಯನೀ said...

@ Bigbuj
ಕಥೆಯನ್ನು ದಯವಿಟ್ಟು ಸರಿಯಾಗಿ ಓದಿ. ಅವನು ದುಬೈ ಇಂದ ಬಂದಾಗ ಆ ಮಾತು ಹೇಳೋಲ್ಲ, ಅವನು ಹಿಂದೆ ಹೇಳಿದ್ದ ಮಾತನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.

may be ನನಗೆ abstract ending ಅನಿಸೋದು ನಿಮಗೆ unhappy ending ಅನ್ಸುತ್ತೆ.ಅವರವರ ಭಾವಕ್ಕೆ. but ಬೇರೆ ರೀತಿಲು ಬರೆಯೊಕ್ಕೆ ಪ್ರಯತ್ನಿಸುತ್ತೇನೆ.

Keep commenting.Thank u

ಮೃಗನಯನೀ said...

ಧನ್ಯವಾದಗಳು ಜಯಂತ್.do peep into my blog once a while

ಮೃಗನಯನೀ said...

@Ranju

ಗೊತ್ತಿಲ್ಲ ಕಣ್ರೀ ನಿಜಜೀವನದಲ್ಲಿ ಸಾಧ್ಯವ ಅಂತ.
u seem to be very optimistic.Good

thnx 4r commenting

ಮೃಗನಯನೀ said...

@Dr D.M Sagar
Thnx 4r ur comment Dr.Sagar.
do keep an eye on my write ups.

Malnadhudgi
chikmagalooru
karnataka

Harsha Narayana said...

hi,
ree nijavaaglu neevu gr8.. atyaMta suMdara, spashta reetiyalli manamuttuvaMte, mana midiyuvaMte vivarisiddira..
simply superb.. keep blogging.. u rock

Shree said...

ಬೇಕಂದಿದ್ದು ಬೇಕಂದಾಗ ಬದುಕು ಕೊಡದಿರಬಹುದು..., ಆಮೇಲೆ ಯಾವತ್ತೋ ಕೊಟ್ಟಾಗ ಅದನ್ನು ತೆಗೆದುಕೊಳ್ಳಲಾರೆ ಅನ್ನುವ ಹಠವೇ ಇಲ್ಲಿನ ನಾಯಕಿಗೆ..?

If that's the case, I like it..!

ನವಿಲುಗರಿ ಹುಡುಗ said...

ಅಬ್ಬ ಕೊನೆಗೂ ಕತೆಯನ್ನ ಅಪೂರ್ಣ ಮಡಿಬಿಟ್ಟ್ರಿ ಅಂತ ನಿಮ್ಮ್ ಮೆಲೆ ನನಗೆ ಸಕತ್ ಸಿಟ್ಟು ಬಂದಿದೆ...ಒಂತರಾ ಬೇಜಾಅರ್ ಆಯ್ತು ಓದಿ ಅಯ್ಯೋ ಕೊನೆಗಾದ್ರು ಉತ್ತರಾ ಸಿಗುತ್ತೆ ಅನ್ನೋ ಕಲ್ಪನೆ ಇಂದ ಓದಿದ್ರೆ..ಕೊನೆಗೂ ನೋವಿನಲ್ಲೆ ಮುಗ್ಸಿ ಬಿಟ್ಟಿದ್ದೀರ......:(] ಆದ್ರೆ ಹೃದಯಕ್ಕಂತು ತಟ್ಟುತ್ತೆ ಅದು ಸತ್ಯವಾದ ಮಾತು......

I dont understand why poets always write sadistic poems n storys[:(]

bhadra said...

ವಾಹ್ ವಾಹ್ ಸಕ್ಕತ್ ಬ್ಲಾಗು

ಒಂದೊಂದು ಕಥೆಯೂ ತನ್ನದೇ ಲೋಕಕ್ಕೆ ಎಳೆದುಕೊಂಡು ಹೋಗುತ್ತಿದೆ. ಅಷ್ಟೇ ಅಲ್ಲ ಅದರ ಸೆಳೆತಕ್ಕೆ ಒಳಗಾಗಿಸುತ್ತಿದೆ. ಉತ್ತಮ ಕಲ್ಪನೆ, ಅತ್ಯುತ್ತಮ ನಿರೂಪಣೆ.

ಇದರ ಬಗ್ಗೆ ಗೊತ್ತೇ ಇರ್ಲಿಲ್ಲ. ಸೋಮಣ್ಣ ಹೇಳಿದ್ಮೇಲೆಯೇ ಗೊತ್ತಾಗಿದ್ದು. ಓರ್ಕುಟ್ಟಿನಲ್ಲಿ ಹೇಳ್ಬಾರದಿತ್ತೇನಮ್ಮ?

ಗುರುದೇವ ದಯಾ ಕರೊ ದೀನ ಜನೆ

ಮೃಗನಯನೀ said...

thnx Harsha narayan.nimmagala protsaaha heege sadaa irali

ಮೃಗನಯನೀ said...

@Shreee

ಇರಬಹುದು ... ಇಲ್ಲಿನ ನಾಯಕಿಗೆ ಏನು ಬೇಕೆಂಬುದೇ ಅವಳಿಗೆ ಸ್ಪಷ್ಟವಗಿಲ್ಲ..... ಜೊತೆಗೆ ಸ್ವಲ್ಪ ಅಹಂಕಾರವಿರಬಹುದೇನೋ..
keep commenting

ಮೃಗನಯನೀ said...

@ Somu
ಸೋಮು ಇದು sadistic view ಅಲ್ಲ ಆದ್ರೆ ನಿಜ ಜೀವನದಲ್ಲಿ ಆಗೋ abstractsgalu ಇಂಥದು ನನ್ನನ್ನು ತುಂಬಾ ಆಕರ್ಷಿಸುತ್ತೆ ಅದಕ್ಕೆ ನಾನು ಹೀಗೆ ಬರೆಯುತ್ತೇನೆ ಅನ್ನಿಸುತ್ತೆ.ಧನ್ಯವಾದಗಳು ಕಾಮೆಂಟಿಸುತ್ತಾ ಇರಿ

ಮೃಗನಯನೀ said...

@ TAVASHREE
ಧನ್ಯವಾದಗಳು uncle ಈ ಎಳಸು ಬ್ರಹಗಳನ್ನು ನೀವು ಓದಿದ್ದಕ್ಕೆ ಧನ್ಯವಾದಗಳು... ದಯವಿಟ್ಟು ಹೇಗೆ ಗಮನಿಸುತ್ತೀರಿ
preetiyinda
malenaada hudugi