ಮಧ್ಯರಾತ್ರಿಯ ಕಪ್ಪಿನೊಳಗಣ ಬೆಳಕೇ...
ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????
ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.
ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.
ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...
ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...
ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...
ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...
.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)
Subscribe to:
Post Comments (Atom)
12 comments:
kelavu saalugalu hosdaagive, chennagive.
ಮೈ ತುಂಬ Metaphor ತುಂಬಿಕೊಂಡ ಬರಹ ಚೆನ್ನಾಗಿದೆ.
Houdu neevu enu maadutteera anta gottagalilla. Nijwagalu tumba channagi bareeta idira..keep it up. Who knows kannada will support you.
Nimma Geleya,
Raj..the king of all time.
mane olagina paatre, pagade bittu horage baa maharaayti..plz..
ulidaMte baraha chennaagide.
@ Sudhanva nd Nagprasd
ಧನ್ಯವಾದಗಳು
@Lingraj
:-)
ಧನ್ಯವಾದಗಳು
ಹಂಗಂದ್ರೇನೋ?? ;-O!!!!!!
Come out with new ideas. Now u r a student of journalism. Dare enough to criticize the double standards. Write some issue-based articles.
@Vijay
u know that I do write those kinds bt not intrested to update those in my blog....nd basically those are not good as urs.. hwever thnx 4r the sujjestions....
@Arun
I thought Its my college mate Arun nd hence i replied u in singular really sorry 4r that. hope u dont mind
ಅಯ್ಯೋ ! ಹಾಗೇನು ಇಲ್ಲ..ನೀನು ಬೇಕಾದ್ರೆ ಹಾಗೇನೆ ಕರಿಯೇ..ಯಾಕೋ ಒಂಥರಾ ಚೆನ್ನಾಗಿರುತ್ತೆ...;-)!!
ಆದ್ರೆ ಅದಲ್ಲ ನಾನು ಹೇಳೋಕೆ ಹೊರಟಿದ್ದು..ನಾನು ತುಂಬ ಓದಿದವ್ನಲ್ಲ ನಿನ್ನಷ್ಟು ಬುದ್ದಿವಂತಿಕೆ ನನ್ನತ್ರ ಇಲ್ಲ ಆದ್ರು ನನಗನ್ನಿಸಿದ್ದು ನಾನು ಹೇಳ್ತೇನೆ ಪ್ರತಿ ಬಾರಿ ಬರಿವಾಗ್ಲು ನನ್ನಂತ ಬಡಪಾಯಿ ಒದುಗನನ್ನು ಒಂದು ದಿಕ್ಕಿನಿಂದ ಗಮನವಿರಿಸು..
ನೀನು ಏನು ಬರೆದ್ರು ತಪ್ಪದೆ ಓದುವ ನನ್ನ ಕಷ್ಟ ಸ್ವಲ್ಪ ಅರ್ಥ ಮಾಡಿಕೊ.plz... ನಾನು ನಿನ್ನಿಂದ ಇನ್ನು ಎತ್ತರವಾದ ಕಲ್ಪನೆಗಳನ್ನು,ಓದಿ ಮುಗಿದಾಗ"ವಾವ್ ಮ್ರಗನಯನಿ" ಅನ್ನುವಂಥ!ಉದ್ಗಾರ ಹೊರಬರಿಸಲು ಸಾದ್ಯವಿರುವಂಥ ಶಕ್ತಿಯುತ ಬರಹಗಳನ್ನು ಇಷ್ಟ ಪಡುತ್ತೇನೆ..ಇದಿಷ್ಟು ನನ್ನ ಅನಿಸಿಕೆ ಅಷ್ಟೇ ಮತ್ತೆ ನಾನು ಮೊದಲೆ ಹೇಳಿದ ಹಾಗೆ ಖಂಡಿತ ನಿನ್ನಷ್ಟು ಬುದ್ದಿವಂತಿಕೆ ನನ್ನಲ್ಲಿ ಇಲ್ಲವೆ...ಇಲ್ಲ...:-)
ಒಕೆ ಹಾಗೇ ಕರಿಯೋಣ. ಆದ್ರೆ, "ತುಂಬ ಓದಿದವನಲ್ಲ ನಿನ್ನಷ್ಟು ಬುದ್ದಿವಂತನಲ್ಲ" ಇದೆಲ್ಲ ಯಾಕೆ??? ಬುದ್ದಿವಂತಿಕೆ ಒದಿಕೊಂಡಿರುವುದು ಇದೆಲ್ಲಾ relative ನೀನು ಇನ್ಯಾರಿಗಿಂತಲೊ ಬುದ್ದಿವಮ್ಥನಾಗಿದ್ದರೆ ಇನ್ನ್ಯಾರೋ ನಿನಗಿಂಥ ಬುದ್ದಿವಂಥರಾಗಿರುತ್ತಾರೆ. hope u hv got what I wanna say....
:-) ok ಇನ್ನೊಮ್ಮೆ ತಪ್ಪಿ ಕೂಡ ಹಾಗೆ ಹೇಳೊದಿಲ್ಲ sorry sorry... ನೀ ಹೇಳಿದ್ದು ಅರ್ಥವಾಯಿತು ಗುಡ್ಡಕ್ಕೆ ಗುಡ್ಡ ಅಡ್ಡವಿರುತ್ತದೆ ಅಂತಾರಲ್ಲ ಆ ಅರ್ಥದಲ್ಲಿ ತಾನೆ ನೀ ಹೇಳಿದ್ದು. ನನ್ನನೊಂದಿಷ್ಟು ತಿದ್ದಿದಕ್ಕೆ thank u :-)
Post a Comment