Monday, May 19, 2008

ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ

ಬೆಳಗ ಚೈತನ್ಯವೇ..
ಚುನಾವಣೆಯ ಬಿಸಿ ವಾತಾವರಣಕ್ಕೂ ತಟ್ಟಿರಬೇಕು, ಇಲ್ಲಿ ಚಳಿ ಇಲ್ಲ. ಒಳ್ಳೆಯದಾಯಿತು ಚಳಿ ಇದ್ದಿದ್ದರೆ ನೀನು ಇನ್ನೂ ಬೇಕೆನಿಸುತ್ತಿದ್ದೆ. ನೀನು ಹಾಲೆಂಡಿಗೆ ಹೋದಮೇಲೆ ಇಲ್ಲಿ ತುಂಬಾ ಬೋರು. ಅಮ್ಮ ಮನೆಗೆ ಬಾ ಅಂದಳು, ಕೆಲಸಕ್ಕೆ ಒಂದುವಾರ ರಜ ಹಾಕಿ ಅಮ್ಮನ ಜೊತೆ ಸುಮ್ಮನೆ ಶಾಪಿಂಗು, ಮೂವಿ ಅಂತ ಸುತ್ತುತ್ತಿದ್ದೇನೆ.

ನಾನು ಅಮ್ಮ ಸಮುದ್ರದ ಬಳಿ ಹೋಗಿದ್ದೆವು. ಸಂಜೆ ಹೊತ್ತು, ಗಾಳಿ. ಅಪ್ಪಳಿಸುತ್ತಿದ್ದ ಅಲೆಗಳಿಗೆ ಪಾದಗಳನ್ನು ಒದ್ದೆ ಮಾಡಿ ಹೋಗುವ ಸಂಭ್ರಮ. ಅಲ್ಲೆಲ್ಲೋ ಸಮುದ್ರದಾಳದಲ್ಲಿ ಹುಟ್ಟಿ ಸುಳಿಸುಳಿದು ಬರುತ್ತಿದೆ ಅನಿಸುತ್ತಿದ್ದ ಗಾಳಿಗೆ ಮುಖಒಡ್ಡಿ ನಿಂತಿದ್ದರೆ ಅದು ನನ್ನ ತುಂಬ fierce ಆಗಿ, ಸಾದ್ಯಂತವಾಗಿ ಮುದ್ದಿಸುತ್ತಿದೆ ಅನ್ನಿಸಿತು. ಥೇಟು ನಿನ್ನಂತೆಯೇ ಅಂದುಕೊಂಡೆ.

ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನ ಪುರಿಗೆ
ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ...

ಇವತ್ತು ಒಬ್ಬಳೇ ಇರಬೇಕೆನ್ನಿಸಿತು. ಅಮ್ಮನನ್ನು ಅವಳ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಮನೆಗೆ ಬಂದೆ. ನೀನು ಚಿಕ್ಕ ಮಕ್ಕಳ ಹಾಗೆ ಎಲ್ಲವನ್ನೂ ನಿನ್ನ ಮುಂದೆ ಹರವಿಕೊಂಡು ಕೆಲಸ ಮಾಡುತ್ತಿರುತ್ತೀಯಲ್ಲ ಆ ಚಿತ್ರ ಕಣ್ಣ ಮುಂದೆ ಹಾದು ಹೋಯಿತು. ನೀನು ಹಾಗೆ ಕೂತಿರೋವಾಗ ನಂಗೆ ಎಷ್ಟು ಇಷ್ಟ ಆಗ್ತೀಯ ಗೊತ್ತಾ... ಮನೆ ತುಂಬ ನೀಟಾಗಿದೆ, ಏನೂ ಹರಡಿಲ್ಲ ಕೊಳೆಯಾಗಿಲ್ಲ. ನೀನಿಲ್ಲವಲ್ಲ..ಉಹುಂ ಕೊರಗ್ತಾ ಇಲ್ಲ ನಾನು, ನಿನ್ನ ನೆನಪುಗಳಿಂದ ನನ್ನ ಒಂಟಿತನ ಘಮ ಘಮ.


ಕಿಷನ್ ಮೆಸೇಜ್ ಕಳುಹಿಸಿದ್ದ
"I have seen old ship
sail like swans asleep" ಇದರ ಬಗ್ಗೆ ಕಮೆಂಟು ಮಾಡು ಅಂತ. ಪದ್ಯ ಯಾರದು ಕೇಳಿದೆ. 'ಯಾರದೋ ಗೊತ್ತಿಲ್ಲ, ಪದ್ಯದ ಹೆಸರೂ ನೆನಪಿಲ್ಲ ಸಾಲುಗಳು ಮಾತ್ರ ನೆನಪಾದವು' ಅಂದ. ಖುಷಿಯಾಯಿತು ನನಗೆ. ಸಾಲುಗಳು ಹಾಗೇ ನೆನಪಾಗಬೇಕು ಅಲ್ಲವ.. ಹೆಸರಿನ ಹಂಗಿಲ್ಲದೆ, ಕವಿಯ ಹಂಗಿಲ್ಲದೆ? ಹಾಗೆ ನೆನಪಾಗೋದ್ರಲ್ಲೇ ಆ ಸಾಲುಗಳ ಸಾರ್ಥಕತೆ ಇದೆ ಅನ್ನಿಸಿತು. ನಿಂಗೇನನ್ನಿಸುತ್ತೆ ಹುಡುಗಾ..?


J.M CoetzeeDisgrace ಕಾದಂಬರಿ ಒದುತ್ತಿದ್ದೆ ಹಾಯ್ ಬೆಂಗಳೂರಿನಲ್ಲಿ ಜಾನಕಿ ಈ ಪುಸ್ತಕದ ಬಗ್ಗೆ ಬರೆದಿದ್ದರು. ತುಂಬ ವಿಭಿನ್ನವಾಗಿದೆ ಕಣೋ ಕಾದಂಬರಿ ಅದರಲ್ಲಿ ಬರೋ David Lurie ಒಂದು ಕಡೆ ಹೀಗೆ ಹೇಳುತ್ತಾನೆ
"But in my experience poetry speaks to you either at first sight or not at all. A flash of revelation a flash of response like lightning like falling in love." ಮತ್ತೆ ಇನ್ನೊಂದು ಕಡೆ ಲೇಖಕ ಹೇಳುತ್ತಾನೆ "Exactly good or bad, he just does it. He dosent act on principle but on impulse." ನನಗೆ ಎಲ್ಲಕ್ಕಿಂತ ಅದರ ಆರನೇ ಅಧ್ಯಾಯ ತುಂಬ ಇಷ್ಟ ಆಯ್ತು.ನಿನ್ನ ತೋಳಿನ ಮೇಲೆ ತಲೆ ಇಟ್ಟು ಮಲಗಬೇಕು, ಇದನ್ನೆಲ್ಲಾ ಮಾತಾಡಬೇಕು, ಮಾತಾಡುತ್ತಾ ನಿನ್ನ ಎದೆಯ ಇಂಚಿಂಚನ್ನೂ ನನ್ನ ಬೆರಳುಗಳಲ್ಲಿ ಅಳೆಯಬೇಕು, ಅದರ ಹರವಿಗೆ ಸೋಲಬೇಕು, ಸುಸ್ಥಾಗಬೇಕು, ಸುಖ ಭೋರ್ಗರೆಯಬೇಕು... ಬೇಗ ಬಾ ಹುಡುಗಾ..........

.....ನಿನ್ನ ಪೇಪೆಜೀನ್ಸ್

20 comments:

ವಿ.ರಾ.ಹೆ. said...

wow, ಸೋತು ಹೋದೆ, ’ಸುಸ್ಥಾಗಿಹೋದೆ’ :)

ಭಾವ ತುಂಬೋದ್ರಲ್ಲಿ expertu ನೀವು .

Anonymous said...

Dear Pepe Jeans,

Don`t post this letter, otherwise Holland`s work will remain unfinished :-)

-Prasad.

Susheel Sandeep said...

Whoaaaa!!!!

ನರಸಿಂಹಸ್ವಾಮಿಯವರ ಸಾಲುಗಳು ಮೊದಲಿಗೆ ಬೋಲ್ಡ್ ಮಾಡಿದ್ವು! ಅದರ ಮೇಲೆ ಆ ಇಂಗ್ಲೀಷ್ ಪದ್ಯದ ಸಾಲುಗಳು ಬೇರೆ! ಸಿಂಪ್ಲಿ ಸುಪರ್ಬ್ ಅನ್ಬೋದು ಕಣ್ರೀ ಈ ಬರವಣಿಗೆ...

ನಿಮ್ಮ ಬರಹಗಳನ್ನ ಓದ್ತಾ ಇದ್ರೆ ನಿಮ್ಮ ಪ್ರಪಂಚ ಎಷ್ಟು ಚಿಕ್ಕದು ಅನ್ಸತ್ತೆ..ಇಷ್ಟ ಬಂದಾಗ ಸಮುದ್ರದ ತೀರಕ್ ಹೋಗ್ತೀರ..ಇಷ್ಟ ಬಂದಾಗ ಮಲೆನಾಡಿನ ಕಾಫಿ ಸವಿ ಹಂಚ್ತೀರ...ಮಳೇಲಿ ನೆನೀತೀರ...ಭಾವನೆಗಳನ್ನ ನೆನಸ್ತೀರ:) ಸೂಪರ್...

ಮೃಗನಯನೀ said...

@ವಿಕಾಸ

thanks ಕಣೋ.... ಅಂದಹಾಗೆ ಇದ್ದಕ್ಕಿದ್ದಹಾಗೆ ಗೌರವ ಯಾಕೆ??? :-o

@ಪ್ರಸಾದ್

:-o!!! :-)

@ಸುಶೀಲ್

ಚಿಕ್ಕ ಪ್ರಪಂಚ ಅನ್ಸತ್ತಾ... ನಂಗೆ ಇವೆಲ್ಲವುದರ ಹರವು ತುಂಬಾ ದೊಡ್ಡದು ಅನ್ಸತ್ತೆ... :-)

ARUN MANIPAL said...

;-)

sritri said...

ನಯನೀ,

ಆಹಾ! ಈ ಪ್ರೀತಿಯ ಕರೆಗೆ ಹಾಲೆಂಡೇನೂ, ಮಂಗಳ ಗ್ರಹದಲ್ಲಿದ್ದರೂ ಓಡಿಬರಲೇ ಬೇಕು ನಿಮ್ಮ ಹುಡುಗ :)

Anonymous said...

" ನಿನ್ನ ಎದೆಯ ಇಂಚಿಂಚನ್ನೂ ನನ್ನ ಬೆರಳುಗಳಲ್ಲಿ ಅಳೆಯಬೇಕು, ಅದರ ಹರವಿಗೆ ಸೋಲಬೇಕು, ಸುಸ್ಥಾಗಬೇಕು, ಸುಖ ಭೋರ್ಗರೆಯಬೇಕು... ಬೇಗ ಬಾ ಹುಡುಗಾ.........." ವಾಹ್!!. ವಿರಹದ ಅನನ್ಯಾನುಭವದ ಉತ್ಕಂಟತೆಯಲ್ಲಿ ಮೂಡಿದ ಭಾವ ಭಾಷ್ಯದ ಪದಪುಂಜಗಳು!.
ಹಾಲೆಂಡ್ ಒಂದು ಅತೀ ಸುಂದರವಾದ ಪುಟ್ಟ ಹಾಗು ಅತ್ಯಂತ ಸ್ವಚ್ಚವಾದ ದೇಶ. ಮುಕ್ತ ಸಮಾಜದ ಪ್ರತೀಕವಾದ ಹಾಲೆಂಡಿಗೂ ಹಾಗೂ ಪ್ರಚ್ಚನ್ನ ಭಾವಾಭಿವ್ಯಕ್ತೆ ಹೊಂದಿರುವ ನಿಮಗೂ ಸಾಕಸ್ತು ಸಾಮ್ಯವಿರುವಿದು ನಿಜ.

Dr.D.M.Sagar (Original)

Shree said...

hai thumba mast ide kane nin huduga ishthottigeholland inda avana preetia hudugina nodakke bandirbeku ashtu high voltage nalli ide nin lettru very goodies

Anonymous said...

hi huDugee,
bahaLa chennAgi bareeteeya neenu. ninna exam mugdiddu oLLEdAytu. innu regular Agi blog update mADOke aDDi illa alvA?
- Chetana

Anonymous said...

ಚೆನ್ನಾಗಿದೆ!! ಬರಹದ ಉತ್ಕಟತೆ ಇಷ್ಟವಾಯ್ತು..

ಮೃಗನಯನೀ said...

@Arun
;-o

@Sritri

ayyO nanna karegallaa Pepe jeans karege....

@Saagar

thanks. haagaadre naa Holland nODlEbEku.

@Agni

Thanku you my love....

@Chetana

thanksu.. hu maaDbEku ankonDidini
:-)

ಶ್ವೇತಾ ಹೆಗಡೆ said...

hi....
patra oddeyagide, bhavotkatateya tunturalli. oduva manassugalanno odde maduvudu nimma barahada takattu. han! nimma mayoorada kathe kooda chennagittu.
-praveen banagi

Anonymous said...

Ivaga Nija Anista ide Nanage

Thanks
Buj

Sree said...

ಸೂಪರ್ರು! ಎಲ್ಲೋ ಹೊರ್ಟುಹೋದೆ ಓದ್ತಾ! ಪೆಪೆಜೀನ್ಸ್ ಕೆಳಗಿಳಿಸ್ತು ಮತ್ತೆ!:)) ಜೀನ್ಸು ಕವನ ಕಾದಂಬ್ರಿ ಎಲ್ಲ ಓದುತ್ತಾ? ಪರ್ವಾಗಿಲ್ವೇ!;)

Anonymous said...

waah!excellent!

Madhava said...

A poem hesaru THE OLD SHIPS anta. ni baredidral ond san mistake ide adu ships anta agabeku.

I have seen old ships sail like swans asleep

idan bardiddu JAMES ELROY FLECKER

alla nange ista ada padyad salanna adyava kishan ning kalisida? a kishan yare pepe jeans?

Veena DhanuGowda said...

thumba chennagi ide rii
mruganayani :) manasige hatiradali bandu nilute nima baraha

Gururaja Narayana said...

ಮಲೆನಾಡ್ ಹುಡ್ಗಿಗೆ ನಮಸ್ಕಾರ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ

ಮೃಗನಯನೀ said...

@praveen

ಧನ್ಯವಾದಗಳು...:-)

@Buj

:-o

@Sree

ಏನೋಪ್ಪಾ ನಂಗೂ ಗೊತ್ತಿಲ್ಲಾ ಕೇಳಿದ್ದಕ್ಕೆ 'ನಾನು ಅವ್ನಿಗೆ ಜಿನ್ಸಿನ ಥರ ಅಂಟಿಕೊಂಡಿರ್ತೀನಿ' ಅಂದ್ಲು ನಂಗಂತೂ ಎನ್ ಹೇಳ್ತಿದ್ಲೋ ಅರ್ಥನೇ ಆಗ್ಲಿಲ್ಲಾ... :-o

@Sujaata

love u MotherIndia.... thanksuuu..

@Maadhavaa

:-) thanksu kaNO ತಪ್ಪು ಸರಿ ಮಾಡಿದ್ದಕ್ಕೆ ಪದ್ಯ ಬರೆದೋರ ಹೆಸರು ಹೇಳಿದ್ದಕ್ಕೆ ...JAMES ELROY FLECKER i mst read him...

@Veena

thnxರೀ ವೀಣಾ ಪ್ರೀತಿಯಿಂದ...:-)

ಸಿಬಂತಿ ಪದ್ಮನಾಭ Sibanthi Padmanabha said...

ನೆನಪಿರಬಹುದು ಅನ್ಸುತ್ತೆ ಕೊಡಚಾದ್ರಿ. ಗುಂಪಿನಲ್ಲಿದ್ದವ ನಾನೂ ಒಬ್ಬ. ನಿಮ್ಮ ಕಥೆಗಳನ್ನು ಇತ್ತೀಚೆಗಷ್ಟೆ ಓದಲು ಶುರು ಮಾಡಿದೆ. ಕಳೆದ 'ಮಯೂರ'ದಲ್ಲಿ, ಹಾಗೆಯೇ ಬೇರೆ ಒಂದೆರಡು ಕಡೆ ಓದಿದೆ. ಇಷ್ಟವಾದವು. ಯು ಹ್ಯಾವ್ ಎ ವಂಡರ್ಫುಲ್ ಫ್ಯೂಚರ್. ಬರೆಯುತ್ತಿರಿ.