Friday, June 1, 2007

ಮುಟ್ಟಾದ ಹುಡುಗಿ!

ಅವತ್ತು ಸಂಜೆ ಅವಳ ಓದ್‌ಕೊಳೋ ಕೋಣೆಯಿಂದ ವಾರೆಂಡಾದವರೆಗೂ ಬಂದಿದಾಳೆ "ಅಮ್ಮ.. ಹೊಟ್ಟೆಲಿ ಒಂಥರ ನೋವು- ಸಂಕಟ, ತಲೆನೋವು ಅಳು ಬರ್ತಿದೆ." ಅಂದಳು. ಅವಳ ಅಮ್ಮ "ಏನಾಯ್ತೆ ಕಂದ" ಅಂತ ಹುಡುಗಿ ಹತ್ರ ಹೋಗಿ ನೋಡಿದ್ರೆ ಒಂದು ತೊಟ್ಟು ರಕ್ತ ನೆಲಕ್ಕೆ ಬಿತ್ತು.ಸರಿಯಾಗಿ ಗಮನಿಸಿದಾಗ ರೂಮಿನಿಂದ ವರೆ0ಡಗೆ ಬರೋ ದಾರಿಯಲ್ಲಿ ಒಂದೊಂದು ತೊಟ್ಟು ರಕ್ತ ಬಿದ್ದಿದೆ ಅವಳು ಮೈ ನೆರೆದಿದಾಳೆ her body is matured.

'ಅಯ್ಯೂ.. ಇಷ್ಟು ಬೇಗ ಆಗ್‌ಬಿಟ್ಲಲ್ಲ' ಅಂತ ತಾಯಿಗೆ ಹಿಂಸೆ ಆದ್ರೂ ತೋರಿಸಿಕೊಳ್ಳದೇ ತಮ್ಮ ಮಲಗೋ ಕೋಣೆಯಲ್ಲಿ ಯಾವುದೋ ಪುಸ್ತಕದಲ್ಲಿ ಮುಳುಗಿದ್ದ ಗಂಡನಿಗೆ ವಿಷಯ ತಿಳಿಸಿ, ಅವರ ಅಮ್ಮನಿಗೆ ಫೋನ್ ಮಾಡಿದಳು. ಮೊಮ್ಮಗಳು ಮೈನೇರೆದಳು ಅಂತ ತಿಳಿಸೋಣ ಅಂತಾನೂ? ಅಥವಾ ಅವಳಿಗೆ ಇನ್ನೂ ಮುಂದೆ ಏನು ಆರೈಕೆ ಮಾಡೋಣ ಅಂತ ಕೆಳೊಕ್ಕೋ? ಅಥವಾ ಎರಡಕ್ಕೂ?

ಹೀಗೆ ಒಂದಲ್ಲ ಒಂದು ರೀತಿಲಿ ಹುಡುಗೀರು ಮೈ ನೆರೆದಿರೋದು ಅವರ ಮನೆಯೋರಿಗೆ ಗೊತ್ತಾಗುತ್ತೆ.ಕೆಲವರಿಗೆ ಅವರ ತಾಯಿನೋ, ಇನ್ಯಾರೋ ಮೊದಲೇ 'ಹುಡುಗಿ ವಯಸ್ಸಿಗೆ ಬಂದಿದಾಳೇ' ಅನ್ನಿಸಿದಾಗ ಇದರ ಬಗ್ಗೆ ಸೂಚ್ಯವಾಗಿ ತಿಳಿಸಿರುತ್ತಾರೆ. ಇನ್ನೂ ಕೆಲವು ಹುಡುಗೀರಿಗೆ ಅದೂ ಲಭ್ಯವಿಲ್ಲ.

ಮುಟ್ಟಾಗೋಕೆ ಮುಂಚೆ ತಿಳಿಸಬೇಕೋ ಬೇಡವೋ? ಮುಟ್ಟಾದಮೇಲೆ ಅವರಿಗೆ ಆರತಿ ಮಾಡಬೇಕಾ? ಆರೈಕೆ ಮಾಡಬೇಕಾ? ಇದರ ಬಗ್ಗೆ ನಾನು ಮಾತಾಡ್ತಾ ಇಲ್ಲ! ನಾನು ಹೇಳ್ತೀರೂದೇ ಬೇರೆ.

ನನ್ನ ಸ್ನೇಹಿತೆ ಒಬ್ಬಳು ಮೈನೆರೆದಾಗ "ಜೀವನದಲ್ಲಿ ಒಂದೇ ಸತಿ ಹೀಗೆ ಆಗೋದು ಹಾಳಾಗ್ ಹೋಗ್ಲಿ" ಅಂತ ಅಂದುಕೊಂಡಿದ್ದಳಂತೆ. ಮುಂದಿನ ತಿಂಗಳು ಮತ್ತೆ ಆದಾಗ ಅವಳಿಗೆ ಆಘಾತ, ನಿರಾಶೆ, ದು:ಖ. ಮೊದಲನೆದಾಗಿ ನಾವು ಫಿಸಿಕಲ್ ಹಿಂಸೇಗಳಾದ ರಕ್ತ ಸ್ರಾವ, ತಲೆನೋವು, ಹೊಟ್ಟೆನೋವು, ಬೆನ್ನುನೋವು, ಕೈ ಕಾಲು ಬಿದ್ದುಹೋದಹಾಗೆ ಅನ್ನಿಸುವುದು(ಒಬ್ಬೊಬ್ಬರಿಗೆ ಒಂದೊಂದು ರೀತಿ )ಇವುಗಳನ್ನ ಮೊದಲನೆ ಸಾರಿ ಅನುಭವಿಸುತಿರ್ತಿವಿ.
ಇದರ ಜೊತೆಗೆ ಅಮ್ಮಂದಿರ ಆರೈಕೆ ಮೊದಲು ಚಿಗಲಿ ಉಂಡೆ, ಒಂದೆರೆಡು ತಿಂಗಳು ಆದ ಮೇಲೆ ಕೊಬ್ಬರಿ ಬೆಲ್ಲ, ಅದಾದ ಒಂದು ತಿಂಗಳಿಗೆ ಸಜ್ಜಿಗೆ,ಮೇಂತೆ ಮುದ್ದೇ.. ಇವೆಲ್ಲವನ್ನು ಹಾಗೆ ಕೊಡ್ತಾರೆ ಅಂದುಕೋಬೆಡಿ ಪ್ರತಿಯೊಂದನ್ನು ತುಪ್ಪದಲ್ಲಿ ಮುಳುಗಿಸಿ ಕೊಟ್ಟಿರುತ್ತಾರೆ. ತುಪ್ಪದ ಹೊಳೇಲಿ ಚಿಗಲಿ ಉಂಡೆ, ಕೊಬ್ಬಾರಿ ಬೆಲ್ಲದ ಉಂಡೆ ತೇಲುತ್ತಿರುತ್ತದೆ.ಊಹಿಸಿಕೊಳ್ಳಿ ತುಪ್ಪ ಅಂದರೆ ಅಲರ್ಜಿ ಆಗಿಹೋಗುತ್ತೆ.ಇವನೆಲ್ಲಾ ನೋಡಿದರೆ ಓಡಿಹೋಗೋಣ ಅನ್ನೋಷ್ಟು ಅಸಹ್ಯ, ಹಿಂಸೆ ಆಗುತ್ತಿರುತ್ತೆ,ಕಣ್ಣಲ್ಲಿ ನೀರು.. ಆದರೆ ಅಮ್ಮಂದಿರು ಇದ್ಯಾವುದಕ್ಕೂ ಕ್ಯಾ ರೇ ಅನ್ನುವುದಿಲ್ಲ.
ತಣ್ಣೀರು ಮುಟ್ಟೋಹಂಗೆ ಇಲ್ಲ, ಕುಡಿಯೋಹಂಗೆ ಇಲ್ಲ! ಸುಡು ಬೇಸಿಗೆಲೂ ಶಾಲೆಗೆ ಸ್ವೇಟೆರ್ ಹಾಕಿಕೊಂಡು ಹೂಗಬೇಕು ಯಾರಾದರೂ ಸ್ನೇಹಿತೆಯರು ಯಾಕೆ ಸ್ವೇಟರ್ ಅಂತ ಕೇಳಿದರೆ ಹುಷರಿಲ್ಲ ಅಂತ ಸುಳ್ಳು ಹೇಳಬೇಕು..

ಮುಟ್ಟಾದಾಗ ಹುಡುಗೀರು ತಾವು ಮುಟ್ಟಾಗಿರೋದು ಯಾರಿಗೂ ಗೊತ್ತಾಗಬಾರದು ಅನ್ಕೊಂಡಿರ್ತಾರೆ ಹುಡುಗೀರು ಕಷ್ಟಪಟ್ಟು ಶಾಲೆಲಿ ಹೊರಗಡೆ ಯಾರಿಗೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಿಕೊಂಡಿದ್ರೆ, ಮನೇಲಿ ಅವರ ಅಮ್ಮ ತನ್ನ ಎಲ್ಲ ಸಂಭಂಧಿಕರಿಗೂ ಸ್ನೇಹಿತೆಯರಿಗೂ ಆರಾಮಾಗಿ ಒಂದು ಚೂರು ಗುಟ್ಟು ಮಾಡದೇ ಹೇಳುತ್ತಿರುತ್ತಾರೆ.. ಆಗ ಆ ಹುಡುಗಿ ಎಷ್ಟು irritate ಆಗ್ತಾಳೆ! 'ದೇವರೇ! ನಂಗೆ ಯಾಕೆ ಇಷ್ಟೆಲ್ಲಾ ಕಷ್ಟ ಕೊಡ್ತೀಯಾ? ಈ ಅಮ್ಮಂಗೆ ಸ್ವಲ್ಪ ಬುದ್ದಿ ಕೊಡಪ್ಪಾ..' ಅಂತ ಮೊರೆ ಇಡ್ತಾಳೆ..

ಈಗ ಅದೆಲ್ಲ ನನಪಿಸಿಕೊಂಡರೆ ಎಷ್ಟೊಂದು ಸಾಮಾನ್ಯ ವಿಷಯ ಅನ್ಸುತ್ತೆ. ಮುಟ್ಟಾಗೋ ದು ತಿಂಗಳಿಗೊಂದು ಸತಿ ಅನುಭವಿಸಬೇಕಾದ ಖರ್ಮ! ಅಂತ ಗೊತ್ತಾಗೋಗಿದೆ. ಆದರೆ ಪ್ರತಿಯೊಬ್ಬ ಹುಡುಗಿಯ ಮನಸಿನ ಡೈರಿಯಲ್ಲಿ ಮೊದಲ ಸಲ ಮುಟ್ಟಾದಾಗ ಉಂಟಾದ ಭಾವನೆಗಳು, ಒಂದು ಅಳಿಸಲಾಗದ ಹಾಳೆ - ಮರೆಯಲಾಗದ ನೆನಪು!

21 comments:

ಅಪ್ಪು..... said...

ಮೃಗನಯನೀ....

ಮನಸಿನ ಮಾತು ಉತ್ತಮವಾಗಿ ಮೂಡಿಬ೦ದಿದೆ.....

ಹೀಗೆ ಮು೦ದುವರೆಯಲಿ.....

ರಘು....

ಅರೇಹಳ್ಳಿ ರವಿ said...

ಬರಹ ಸರಾಗ....ಅದೇಕೋ ಕೊನೆಯಲ್ಲಿ ವಿರಾಗ.
ಮುಟ್ಟು, ಮುನಿಸು(ಅಳು), ಮುದ್ದು(ತಾಯಿ ಪ್ರೀತಿ) ಮೂರೂ ಹೆಣ್ಣಿಗಾಗಿಯೇ ಇರುವ ಅದ್ಭುತ ವಿಶಿಷ್ಟತೆಗಳು...
ಮತ್ತೊಮ್ಮೆ ಮಗದೊಮ್ಮೆ ಸೃಷ್ಟಿಗಾಗಿ ಸಿದ್ಧವಾಗುವ ಹೆಣ್ಣಿನ ದೇಹ ಪ್ರಕೃತಿ ಭೂದೇವಿಯ ಪ್ರತಿಕೃತಿಯಂತೆ.
ಪ್ರಥಮ ಮುಟ್ಟು ನಿಮಗೆ ಹಿಂಸೆಯಾದರೆ ಪ್ರಥಮ ಮುಷ್ಟಿ ಮೈಥುನ ನಮಗೆ ರೋಮಾಂಚನ. ಮುಟ್ಟು-ಮೈಥುನ ನಿರಂತರ ನಮ್ಮಲ್ಲಿ ಸೃಷ್ಟಿ ಶಕ್ತಿ ಸೃಜನವಾಗಿರುವವರೆಗೂ.....

ಜಾತ್ರೆ said...

ಗಂಡೆಂಬ ಅಹಂ ಮುಟ್ಟಾದವಳ ಹೆಣ್ತನದ ಸಾಚಾತನವನ್ನು ಮೀಸೆಯ ಮರೆಯಲ್ಲಿ ಒರೆಗಚ್ಚುವ ವಿಲಕ್ಷಣ ಆನಂದಕ್ಕೆ ಒಳಗಾಗಿ ಮುಷ್ಟಿ ಮೈಥುನಕ್ಕೆ ಈಡಾಗುವುದೂ ಸೃಷ್ಟಿಯ ಸೂತಕಾಚರಣೆಯ ಒಂದು ಮಜಲು..!

ಮೃಗನಯನೀ said...

@raghu
ಧನ್ಯವಾದಗಳು ರಘು..ಹೀಗೆ ಗಮನಿಸುತ್ತಿ ರಿ

Unknown said...
This comment has been removed by the author.
Unknown said...

Olle subject choose madideera...Ishtella himsegalirutte anta gotte iralilla...Eegina kaaladavarigintaloo hindinavaru mattoo kashtagalannu edurisirabeku....

ಮೃಗನಯನೀ said...

@ Ravee
ಹಮ್ಮ್ ನೀವು ಹೇಳುವುದು ನಿಜ.At the age of puberty ಹುಡುಗ ತನ್ನಲ್ಲಿ ಆಗುವ ಬದಲಾವಣೆಗಳನ್ನು(broadening of shoulders, mascular nd bone growth,change in voice.etc etc.) ಕಂಡು ಆಶ್ಚರ್ಯ ಪಡುತ್ತಾನೆ. ಕುತೂಹಲ ಗೊಳ್ಳುತ್ತಾನೆ ಮತ್ತು he tries to expolre his bodily changes. ಆದರೆ ಹುಡುಗಿ ತನ್ನಲ್ಲಾಗುವ ಬದಲಾವಣೆಗಳನ್ನು ಕಂಡು tension, grief, dipression nd fearಗೆ ಒಳಗಾಗುತ್ತಾಳೆ ಎಂದು ವಿದ್ಯಾಕೀಯ ವಿಜ್ಞಾನ ವಿವರಿಸುತ್ತೆ .
thnx 4r ur comment

ಮೃಗನಯನೀ said...

@ Prashant
obivously,ಹಿಂದಿನಕಾಲದವರು ನಮಗಿಂತ ಹೆಚ್ಚಿನ ಹಿಂಸೆ ಅನುಭವಿಸಿರುತ್ತಾರೆ. ಧನ್ಯವಾದಗಳು ಹೇಗೆ ಕಾಮೆಂಟಿಸುತ್ತಾ ಇರಿ.

ಸಂತೋಷಕುಮಾರ said...

To be honest ಕೆಲ ವಿಷಯಗಳನ್ನು ದಾಖಲಿಸದಿದ್ದರೇ ಚೆನ್ನ.

benkibirugali said...

hmmmm nimm barahagal chennagide...chiravirahi helo haage kelave kelavu vishyagalanna neevu illi dhaakalisadiddare chenna aMta nanna bhavane...[kevala nanna]


naavu heluvudella nijavagiddaru neevu heluvudaralli satyaviddaru kelavomme atI annusalU bahudu..ashtakku muttina vishayavannu illi taMdidde tappu..bariyoke aMta huDugiyaada niumge innu tumba vishayagalive yochisi....

illi neevu ee vishayada bagge baredirudu yaava purushartakke amta gotagalilla..!!aadarU helabekaddannu sariyaagiye directaagi helida nimma baravanige ge

beladingala baleya
salaaam

ವಿ.ರಾ.ಹೆ. said...

ಹ್ಮ್.. ಚೆನಾಗಿ ಬರ್ದಿದಿಯಾ. ಇಂಥಾ ವಿಷ್ಯ ನಿಂಗೆ ಬರೀಬೇಕು ಅಂತ ಹೊಳ್ದಿದ್ದಾದ್ರೂ ಸೂಪರ್. ಯಾವುದೇ ವಿಷ್ಯ ಆದ್ರೂ ಮುಜುಗರ ಆಗ್ದೇ ಇರೋ ರೀತಿ informative ಆಗಿ ಬರೆದರೆ ಚೆನಾಗೇ ಇರತ್ತೆ.

ಆದ್ರೆ ಈ ತುಪ್ಪ, ತಣ್ಣೀರು, ಸ್ವೆಟರ್ರು ಇದೆಲ್ಲಾ ಯಾಕೆ ಅಂತ ಗೊತ್ತಾಗ್ಲಿಲ್ಲ. ಹೇಳಕ್ಕಾಗತ್ತಾ? ಏನೋ g.k improve ಮಾಡ್ಕಳಣಾ ಅಂತ ಅಷ್ಟೆ. :-)

ವಿಷಯದ/ಬರಹದ ಪ್ರೌಢಿಮೆ ಜಾಸ್ತಿ ಆಗ್ತಾ ಇದ್ದಂತೆ ಕಾಗುಣಿತ ದೋಷಗಳಂತೂ ವಿಪರೀತ ಆಗ್ತಾ ಇದವೆ. ತಿದ್ಕೋತಿಯೋ ?tutionsಗೆ ಬರ್ತೀಯೋ? :-)

ಮೃಗನಯನೀ said...

I like your honesty ಚಿರವಿರಹಿ

ಮೃಗನಯನೀ said...

@ಬೆಳದಿಂಗಳ ಬಾಲೆ

ಪುರುಶಾರ್ಥಗಳು ಯಾವುವು ಗೊತ್ತಾ ಬೆಳದಿಂಗಳ ಬಾಲೆ? ನಿಮ್ಮ ಈ ಮಾತನ್ನು ಕೇಳಿ ನಗು ಬರುತ್ತೆ ನನಗೆ... ಮುಟ್ಟಿನ ವಿಷಯದ ಬಗ್ಗೆ ಬರೀ ಹುಡುಗೀರು ಮಾತಾಡಿಕೊಳ್ಳಬೇಕು ಅನ್ನೋ ಮಡಿವಂತಿಕೆಯೋ??

ತನ್ನ ಮನಸ್ಸಿಗೆ ಬಂದದ್ದನ್ನು ಬರೆಯುವುದು ಬರಹಗಾರನ ಸ್ವಾತಂತ್ರ.if the reader reader does not accept the views of text he can oppose or can debate on the writers view.. but he cant impose a writer to write something or not to write a particular thing

however thnx for your comment dear

ಮೃಗನಯನೀ said...

@ Vikas

ಚಿಗಲಿ ಉಂಡೆ, ಕೊಬ್ಬರಿ ಬೆಲ್ಲ ,ಸಜ್ಜಿಗೆ ಇವೆಲ್ಲದರಲ್ಲೂ ಬೆಲ್ಲದ ಅಂಶ ಮುಖ್ಯ ವಾಗಿರುತ್ತೆ ಮತ್ತು ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುತ್ತೆ iron is the main component of blood.. to be more clear iron takes a major part in the formation of RBC(red blood cells)so jaggary componsates for the loss of blood taking place during this time.ಆದರೆ ಬೆಲ್ಲದಲ್ಲಿ ಉಷ್ಣದ ಅಂಶ ಹೆಚ್ಚು ಈ ಉಷ್ಣವನ್ನು ಹೊಡೆಯಲು ತುಪ್ಪ.

ಇನ್ನು ತಣ್ಣೀರು, ಸ್ವೆಟರ್ರು ವಿಷಯ ಈ ಸಮಯದಲ್ಲಿ ದೇಹಕ್ಕೆ ಬೇಗ ತಂಡಿ ಹಿಡಿದು ರೋಗಗಳು ಬರುತ್ತವೆ ಅನ್ನೋ ನಂಬಿಕೆ ಹಿರಿಯರದು ಅದನ್ನು ತಪ್ಪಿಸಲು ಇಂತಹ torture ಕೊಡುತ್ತಾರೆ.

ವಿಕಾಸ್ type ಮಾಡೋಕ್ಕೆ ತುಂಬಾ ಕಷ್ಟ ಆಗ್ತಿದೆ.. tusionsಗೆ ಬರೋದು ಗ್ಯಾರಂಟಿ. ನಿಮ್ಮ ಪ್ರೋತ್ಸಾಹ ಗದರುವಿಕೆ ಎರಡು ಬೇಕು ಹೇಗೆ ಗಮನಿಸುತ್ತೀರಿ ನನ್ನ

Susheel Sandeep said...

ಈಗಾಗ್ಲೇ ಹೇಳಿದಂತೆ ಎಲ್ಲವನ್ನೂ ದಾಖಲಿಸುವ ಅವಶ್ಯಕತೆ ಇದೆಯೇ ಅನ್ನೋದು ನನ್ನ ಪ್ರಶ್ನೆಯೂ ಕೂಡಾ!

ಬರವಣಿಗೆ,ಭಾವ ಸ್ವಾತಂತ್ರ್ಯದ ಬಗ್ಗೆ ನಿಮ್ಮ ನಿಲುವು ಸರಿಯಾದದ್ದೇ..ಆದರೆ ಯಾವುದನ್ನು ಎಷ್ಟರ ಮಟ್ಟಿಗೆ ಹಂಚಿಕೋಬಹುದು ಅನ್ನೋದನ್ನ ನಿರ್ಧಾರ ಮಾಡೋ ಶಕ್ತಿ ಕೂಡಾ ಬರೆಯೋವ್ರಿಗೆ ಇರ್ಬೇಕಲ್ವ? ತೀರಾ ಸಲೀಸಾಗಿ ಎಲ್ಲವನ್ನೂ ಬರೀತಾ ಹೋದ್ರೆ ಅದು ಮೆಡಿಕಲ್ ಜರ್ನಲ್ ಆಗಿಹೋಗತ್ತೆ! ಇದು ನನ್ನಭಿಪ್ರಾಯವಷ್ಟೇ!

ಶ್ಯಾಮಾ said...

ತುಂಬಾ ಇಷ್ಟವಾಯಿತು.. ತುಂಬಾ different ಆದ ಲೇಖನ..
ನನ್ನ ಮನಸಿನ ಡೈರಿಯನ್ನು ತೆಗೆದು ಆ ಅಳಿಸಾಲಾಗದ ಪುಟವನ್ನು ಮತ್ತೊಮ್ಮೆ ಓದಿಕೊಂಡೆ...
ಆದರೂ ಪ್ರತಿ ತಿಂಗಳ ಆ ಹಿಂಸೆಯನ್ನು ನೆನಪಿಸಿಕೊಂಡರೆ ಈಗಲೂ ಅಳು ಬರುತ್ತಿದೆ :(

ಮೃಗನಯನೀ said...

@Susanskruta
ಯಾವುದನ್ನು ಎಷ್ಟರಮಟ್ಟಿಗೆ??? ಅರ್ಥ ಆಗ್ಲಿಲ್ಲ ಈ ಸಾಲಿನ ಭಾವನೆ....ಏನು ಹಂಗಾದ್ರೆ ಹುಡುಗೀರಿಗೆ ಹಿಂಸೆಗಳಾಗುತ್ತೆ ಅಂತ ಹೇಳಿದ್ರೆ ಅದು ಮೆಡಿಕಲ್ ಜರ್ನಲ್ ಅನ್ಸುತ್ತಾ??
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.keep commenting.
@Shyama
ಧನ್ಯವಾದಗಳು ಶ್ಯಾಮಾ ನಂಗೂ ಅಳು ಬರುತ್ತೆ .ನಾನಂತೂ ಅದೇ ನೆಪ ಮಾಡ್ಕೊಂಡು ಏನು ಕೆಲ್ಸಾನೂ ಮಾಡೋಲ್ಲ:-)

ಪವ್ವಿ said...

ಆಧುನಿಕ ಕಾಲದಲ್ಲೂ ಮುಟ್ಟಿನ ಬಗ್ಗೆ ಮೂಗು ಮುರಿಯುವ ಜನರು ಇದ್ದಾರೆ ಅಂದರೆ ನಂಬಲೇಬೇಕು. ಆ ಮೂರು ದಿನಗಳು ಹೆಣ್ಣಿನ ಪಾಲಿಗೆ ನರಕ-ಸದೃಶ ದಿನಗಳು ಅಂದರೆ ತಪ್ಪಾಗಲಾರದು. ಆಗಬಾರದು ಆಗಿದೆ, ಎಲ್ಲಾ ಒಳ್ಳೆಯ ಕೆಲಸಗಳಿಗೆ ನಿಷೀದ್ಧ ಅನ್ನುವ ಹಾಗೆ ನೋಡುವ ಜನ, ಮುಟ್ಟಾದವರನ್ನು ಮುಟ್ಟಿಸಿಕೊಳ್ಳಬಾರದು ಎಂದು ಹೇಳುವ ಮಂದಿಗೆ ಯಾವಾಗ ಬುದ್ದಿ ಬರುತ್ತದೆಯೋ ಗೊತ್ತಿಲ್ಲ. ಮೈ ನೆರೆದಿರುವ ಮಗಳಿಗೆ ಅದರ ಬಗ್ಗೆ ವೈಜ್ಞಾನಿಕವಾಗಿ scientifically ಹೇಳಬೇಕಾಗುವ ಗುರತರ ಅವಶ್ಯಕತೆ ಇದೆ. ಇದು ಕೇವಲ ಒಂದು ಕ್ರಿಯೆ, ಕೈ ಕುಯಿದುಕೊಂಡಾಗ ಬರುವ ರಕ್ತವೇ ಆ ೩ ದಿನಗಳು ಬರುವುದು. ಅದಕ್ಕೆ ಪಾಪಪ್ರಜ್ನೆ ಬೇಡ ಎನ್ನುವದನ್ನು ವಿವರಿಸಬೇಕು.
ನಮ್ಮ ಸಮಾಜ ಆ ೩ ದಿನಗಳೂ ಹೆಣ್ಣಿಗೆ ದೈಹಿಕೆ ನೋವಿಗಿಂತ ಮಾನಸಿಕ ನೋವನ್ನು ಕೋಡುವದನ್ನು ಕಮ್ಮಿ ಮಾಡಬೇಕು.

Manjula said...

ನಿಮ್ಮ ಒಂದಿಷ್ಟು ಬರಹಗಳನ್ನು ಓದಿದೆ.. ವಿಭಿನ್ನ ಭಾವನೆಗಳು.. ವಿಭಿನ್ನವಾಗಿ ಯೋಚಿಸುವ ನಿಮ್ಮ ಶೈಲಿ ಇಷ್ಟ ಆಯ್ತು.. ಈ ಲೇಖನದ ವಿಷಯದಲ್ಲಿ ಯಾಕೋ ಆ ವಿಭಿನ್ನತೆ ಕಾಣಲಿಲ್ಲ..

ಎಲ್ಲ ಹುಡುಗಿಯರೂ ಯೋಚಿಸೋ ಥರ ಬರೆದಿದೀರಾ? ಅಥವಾ ನಿಮ್ಮ ಅನಿಸಿಕೆಗಳನ್ನೇ ಬರೆದಿದಿರಾ ತಿಳೀಲಿಲ್ಲ :) ravee ಅವರ ಕಾಮೆಂಟ್ ಸೂಕ್ತ ಅಂತ ನನಗನ್ಸಿತು..

ನಮ್ಮ ಆಲೋಚನೆಗಳು ಕೆಲವೊಂದು ಸಲ ಸ್ವಂತದ್ದಾಗಿರತ್ತೆ ಕೆಲವೊಂದು ಸಲ ಸುತ್ತಲ ಪರಿಸರದಿಂದ ಕಲಿತಿದ್ದಾಗಿರತ್ತೆ.. ನಿಸರ್ಗ ಸಹಜತೆಗಳನ್ನು ಮುಗುಳು ನಗೆಯಿಂದ ಸ್ವೀಕರಿಸೋದು ಉತ್ತಮ ಅನ್ನೋದು ನನ್ನ ಅಭಿಮತ..

ಉತ್ತಮ ಬರವಣಿಗೆ..ಉತ್ತಮ ವಿಷಯ.. ಎಲ್ಲರೂ ಬರೆಯಲ್ಲ ಈ ಥರ ವಿಷಯಗಳ ಬಗ್ಗೆ.. :)

Sandhya said...

Namskara...

Nice writeup. Intha vishayagalla open agi bareyodu ondu kaLe...chennagi bardiddira...

Wanted to add one more thing ....

Baree hudgreere yak inthaddella anubhavisabeku...hudgur yesht aramagi irthare..antha sakkat jelous agbidtittu nange :) kopa nu barthittu :)

Sandesh Kumar G.K. said...

namaskara

vishaya ene eddaru adnnu bareyuva lekakana yochane hagu alochane eradu mukya

illi nanu helodu enadre nimma i baraha tumba sahaja hagu nija vadarinda hagu alli varnisida a muttada hudugiya irritation edu indigu halligalilli nadedu kondu barutide