Tuesday, March 18, 2008

ಮಳೆ ನೀರಿನಲ್ಲಿ...

ಸಿಹಿ ಘಮವೇ...
ವಾತಾವರಣವನ್ನೆಲ್ಲಾ ಘಂ ಎನಿಸುತ್ತಾ ಹಿತವಾಗಿ ನೆಲವನ್ನು ಒದ್ದೆಯಾಗಿಸುತ್ತಿದ್ದ ಮಳೆ ಅಮಲೇರಿ ಧೋ ಧೋ ಎಂದು ಸುರಿಯುತ್ತಿದೆ. ಕಿಟಕಿಯಿಂದ ನೋಡುತ್ತಿದ್ದರೆ ಆಸೆ ಹತ್ತಿಕ್ಕಲಾಗಲಿಲ್ಲ. ಯಾರಾದರೂ ಏನಾದರೂ ಅಂದುಕೊಂಡು ಸಾಯಲಿ ಅಂತ ಕನಕಾಂಬರದ ಗಿಡಗಳನ್ನ, ಮಲ್ಲಿಗೆ ಬಳ್ಳಿಯನ್ನ ಹಬ್ಬಿಸಿರುವ ಹಿತ್ತಲಿಗೆ ಹೋಗಿ ನನೆಯುತ್ತಿದ್ದರೆ ನೀನು ಈಜುತ್ತಿದ್ದ ನೆನಪು.ನದಿಯಲ್ಲಿ, ನನ್ನಲ್ಲಿ. ಪ್ರೀತಿ ಮಳೆಯಲ್ಲಿ ಒದ್ದೆ ಒದ್ದೆ.
ಇಬ್ಬನಿಯಲಿ ನೆಂದಿದೆ
ಪ್ರೀತಿಯಲಿ ತೊಯ್ದಿದೆ
ನೆನಪಿನಲಿ ನೇಯ್ದಿದೆ
ಈ ಪ್ರೇಮ..

ಅಜ್ಜಿಗೆ ಇನ್ನಿಲ್ಲದ ಹೊಟ್ಟೆಗಿಚ್ಚು. ನಾನು ಮಳೇಲಿ ನೆನಿತಾ ನಿನ್ನ ನೆನಪಿಸಿಕೊಳ್ಳುತ್ತಿರುವ ವಾಸನೆ ಹತ್ತಿದವಳಂತೆ ಕೊಡೆ ಹಿಡಿದುಕೊಂಡು ಹಿತ್ತಲಿಗೆ ಬಂದು ನೀ ಹಿಂಗೆಲ್ಲಾ ಮಳೇಲಿ ನೆಂದು ಹುಶಾರ್ ತಪ್ಪಿಸ್ಕೊಳದಾದ್ರೆ ಹಳ್ಳಿಗೆ ಬರ್ಲೇ ಬೇಡ ಅಂತ ಗುಟುರು ಹಾಕಿದಳು. ನೀನು ನನಗೆ ಸಮುದ್ರ ತೋರಿಸಿದೆಯಲ್ಲ, ಅಬ್ಬಾ! ಅದು ನಿನ್ನ ಥರವೇ... ಸಮುದ್ರದ ಅಲೆಗಳು ದಡವನ್ನು ಅಪ್ಪಳಿಸುತ್ತವೆ ಅಂತ ಯಾರೋ ಬರೆದಿದ್ದು ಸುಳ್ಳು. ಸಮುದ್ರದ ತುಟಿಗಳು ದಡವನ್ನು ಮುತ್ತಿಕ್ಕುತ್ತಿರುವುದನ್ನು ನೊಡಿ ನನ್ನ ಒಳಗುಗಳು ಸ್ಥಬ್ಧ. ಅವತ್ತೆಲ್ಲಾ ಅಲ್ಲೆ ಇದ್ದೆವಲ್ಲಾ ಪ್ರತೀ ಅಲೆ ಉಕ್ಕೋವಾಗಲೂ ನೀನು ಸುರಿಸುತ್ತಿದ್ದ ಮುತ್ತುಗಳ ರಾಶಿ. ಸಾಗರದಲ್ಲಿ ಮುತ್ತು ಸಿಗುತ್ತೆ ಅಂತಾರಲ್ಲ ಇದಕ್ಕೇನಾ?

ಇಂದು ಮರಳಿಗೆ ಹಬ್ಬ.. ಅಪ್ಪೋ ಅಲೆಗೂ ಹಬ್ಬ..

ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ. ತುಂಬ ದಿನ ಆಯಿತಲ್ವಾ ಮಾತಾಡಿ. ನೀನು ಸಿಟ್ಟಾಗಿ ಕಳಿಸಿದ ಮೆಸೇಜ್ ನೋಡಿದೆ... ಜಗಳಗಂಟ. ಇನ್ನೇನು ನಾಡಿದ್ದು ಬಂದುಬಿಡ್ತೀನಿ, ಬೈಕೊಬೇಡ. ನಿನ್ನ ಬಿಟ್ಟು ಖುಶಿಯಾಗೇನಿಲ್ಲ ನಾನು..

ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮಾ ಕನಸು

-ನೀ ಅಪ್ಪುವ ದಡ

15 comments:

ಅಮರ said...

ಎಂಥ ಮಾರಾಯ್ತಿ ಇದು!!!! .... ಜಾಲಿಗರ ಸಮಾವೇಶಕ್ಕೆ ಬರುವುದಲ್ಲವೋ...... ನೀನು ಮಳೆಲಿ ನೆನಿಲಿಕ್ಕೆ ಹೊಗಿದ್ಯೊ :)

"ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮಾ ಕನಸು"

ವಿಡಿಯೋ ನೋಡಿದ್ಯಾ ಯುಟ್ಯೂಬ್ ನಲ್ಲಿ.

ARUN MANIPAL said...

;-)

ಗಿರೀಶ್ ರಾವ್, ಎಚ್ (ಜೋಗಿ) said...

ನಿನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಲವಿಲ್ಲದೆ ಒಡೆಯಲಾಗದು
ನೋಯುತಿರುವ ಎದೆಯ.
-ಎಚ್ ಎಸ್ ವಿ ಸಾಲುಗಳನ್ನು ಕೊಂಚ ತಿರುಚಿದ್ದೇನೆ. ನಿಮ್ಮ ಪತ್ರಕ್ಕೆ ಒಪ್ಪುವಂತೆ. ತುಂಬ ಸೊಗಸಾಗಿದೆ.
-ಜೋಗಿ

Unknown said...

ಸೊಗಸಾಗಿದೆ. 'ಲವಲವಿಕೆ'ಯಿಂದ ಕೂಡಿದೆ.

sunaath said...

ಸುಂದರ ಲೇಖನ.

Shree said...

maleli ardha nendu innu ardha neniyakke agade koothukondu barde kate/kavithe ansutte thumba channagide kane keep it up

ಮೃಗನಯನೀ said...

@Amara
bloggers meet ತುಂಬ ಚೆನ್ನಾಗ್ ಆಯ್ತಂತೆ. ಖುಷಿಯಾತು ಕಣೋ ಕೇಳಿ. ಇಲ್ವೋ ನೋಡಿಲ್ಲ

@Arun

ನಗೂ... ಎಂದಿದೇ.. ಮಂಜಿನಾ.. ಬಿಂದು...

@ ಜೋಗಿ
thank yuo sirrrrrrrrr......... ;-)

@krutavarma nd sunatha...

lavlavike.....;-)ಧನ್ಯವಾದಗಳು ಇಬ್ಬರಿಗೂ..

@agni

ಪತ್ರ ಅಂತ ಗೊತ್ತಾಗದೆ ಕತೆನೋ ಕವಿತೆನೋ ಅಂತ ಗೊತ್ತಾಗದಷ್ಟು ಕೆಟ್ಟದಾಗಿ ಬರ್ದಿದೀನಿ ಅಂತ ಆಯ್ತು ;-)..

PRANJALE said...

really good nayaneee

ಮೃಗನಯನೀ said...

@ ಪ್ರಾಂಜಲೆ
thanks ಕಣೋ

ARUN MANIPAL said...
This comment has been removed by the author.
ARUN MANIPAL said...

ಅರೆ ! ನಿಂಗೆ ಹ್ಯಾಗೆ ಗೊತ್ತಾಯ್ತು ಅದು...? ಈ ಹಾಡು!? !?.. ನಂಗೊತ್ತಿರೋರು ನಿಂಗ್ಯಾರದ್ರು ಸಿಕ್ಕಿದ್ರಾ,..!? ಯಾಕೊ ಅನುಮಾನ ನಿನ್ ಮೇಲೆ...!?

arunkmanipal@gmail.com...;-)
kathe odi harasiddakke thank u..;-)

ಏಕಾಂತ said...

ನಮಸ್ತೆ....
ನಾನು ಲಕ್ಶ್ಮೀಕಾಂತ್...
ನಿಮ್ಮ ಕಾಲೇಜಿಗೆ ಒಂದು ದಿನದ ಮಟ್ಟಿಗೆ ಕ್ಲಾಸ್ ತಗೊಂಡಿದ್ದೆ.
ಬ್ಲಾಗ್ ಚೆನ್ನಾಗಿದೆ. ನನ್ನದೂ ಪುಟ್ಟದೊಂದು ಬ್ಲಾಗ್ ಇದೆ. ನೋಡಿ.
ಮತ್ತೆ ಸಿಗೋಣ.....

ಏಕಾಂತ said...
This comment has been removed by the author.
ನನ್ನ ನಿನ್ನ ಪ್ರೇಮಗೀತೆ said...

ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ.....

ಸಕತ್ತ್ ರಸಿಕಿ ನೀವು ಅನ್ಸುತ್ತೆ..ಹಿಹಿಹಿಹಿಹಿಹಿಹಿ ನನಗೆ ತುಂಬ ಇಷ್ಟ ಆಯ್ತಪ್ಪ..ಮುಂಗಾರು ಮಳೆ ಸಿನಿಮಾದ ಹಾಡೀನ ಯಾವುದೋ ೨ ಸಾಲುಗಳು ನೆನಪಾದವು...

Chethan K said...

< ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ > ಎ೦ಥೆ೦ಥಾ ಭಾವಗಳು!! ರೀ ಮ್ರುಗ(ಹರಿಣಿ)ನಯನಿ ನೀವು ಬರೆದದ್ದನ್ನೆಲ್ಲಾ ಒದ್ತಾ ಇದ್ರೆ ತಲೆಗೆ ಹೊಡೆದ ಹಾಗಿರುತ್ತೆ. ಮಸ್ತ್!! thanku