Tuesday, May 22, 2007

ಒಂದು ಮುತ್ತಿನ ಕಥೆ

ನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೊರನೆಯ ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾoದ್ಯವಾಗಿತ್ತು.

ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸೆಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದಾಗ ನಾನು 10ನೇ ತರಗತೇಲಿದ್ದೆ.

ಅವರ ಕೊನೇ ಹುಡುಗ ಕೈಗೆ ಸಿಕ್ಕಿದ ಚಪ್ಪಲಿ, ಟೀ ವಿಯ ರೆಮೋಟು ,ಚೇರು, ಪುಸ್ತಕ ಎಲ್ಲವನ್ನು ಹೊರಗೆ ಎಸೀತಿದ್ದ ಅವೆಲ್ಲ ನಮ್ಮ ಮನೆ ಮುಂದೆ ಬಂದು ಬೇಳುತ್ತಿದ್ದವು.ಆ ಮೇಂಟಲೀ ರಟಾರ್ಡೆಡ್ ಹುಡುಗ ಇವತ್ತು ಟೇಪ್ ರೆಕೊರ್ಡೆರ್ ಹೊರಗೆ ಎಸ್ದ ಕಣೆ ಅಂತ ನನ್ನ ತಂಗಿಗೆ ನಾನು ಹೇಳುವುದಕ್ಕೂ, ಅಪ್ಪ ಆಫೀಸಿನಿದ ಬರುವುದಕ್ಕೂ ಸರಿಯಾಯಿತು. "ಏನಮ್ಮ ಇದನ್ನೇನ ನಾನು ಕಲಿಸಿರೋದು ನಿಮಗೆ ಎಷ್ಟು ಓದಿದ್ರೆ ಏನು ಬಂತು? ಮನುಶ್ಯತ್ವ ಇಲ್ಲದಿರೊವಾಗ" ಅಂದರೂ ಅಪ್ಪ ನನಗೆ ಅರ್ಥವಾಗದೇ 'ನಾ ಏನು ಮಾಡ್ ದೇ ಈಗಾ..' ಅಂತ ರಾಗ ಎಳೆದೆ ."ಆ ಹುಡುಗನಿಗೆ ಹೆಸರಿಲ್ಲವ ಯಾವಾಗಲೂ ಮೇಂಟಲೀ ರಟಾರ್ಡೆಡ್ ಹಂಗೆ ಮಾಡ್ದ, ಹಿಂಗೆ ಮಾಡ್ದ ಅಂತಿರಲ್ಲ.... ಅವನ ಹೆಸರಿನಿಂದ ಕೆರೆಯೊಕ್ಕೆ ಏನು ಕಷ್ಟ ನಿಮಗೆ" ಅಂದರು. ನಾನು ಪುಟ್ಟಿ ಅಪ್ಪನ್ನ ಸಾರಿ ಕೇಳಿದ್ವಿ. ಅವನ ಹೆಸರು ರಾಮು ಅಂತ ಇಟ್ಕೋಳಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಆ ಮನೆಗೆ ಬಂದು ಎರಡು ವರ್ಷ ಆಗಿದ್ರೂ ಎದೂರುಗಡೆ ಮನೆಗೆ ನಾನು ಒಂದು ಸಲನು ಹೋಗಿರಲಿಲ್ಲ.ಅವರ ಮನೇಲಿ ಏನೇ ಫ್‌ಂಕ್ಷನ್ನು ಆದ್ರೂ ಅಪ್ಪ ಅಮ್ಮ ಪುಟ್ಟಿ ಹೋಗ್ತಿದ್ರು ನಾನು ಹೋಗ್ತಿರ್ಲಿಲ್ಲ. ನಾನು ಸೆಕೆಂಡ್ ಪಿ ಯು ಸಿ ನಲ್ಲಿದ್ದೆ ಅವತ್ತು ದೀಪಾವಳಿ ನಾನು ಸಚ್ಚು (ನನ್ನ ಕ್ಲಾಸ್ಸ ಮೇಟು) ಮತ್ತೆ ಪುಟ್ಟಿ ಮಾತಾಡುತ್ತಾ ನಿಂತಿದ್ವಿ.ಅಮ್ಮ ಬಂದು "ನೀನು ಇಷ್ಟು ದಿನ ಆದ್ರೂ ಅವರ ಮನೆಗೆ ಹೋಗಿಲ್ಲ ಜಂಬ ಅಂತ ತಿಳ್ಕೋತಾರೆ ಹೋಗಿ ಹೋಳಿಗೆ ತಿಂದು ಬಾ. ಸಚ್ಚು ನೀನು ಹೋಗಮ್ಮ, ಪುಟ್ಟಿ ನೀನು ಹೊಗೆ" ಅಂದ್ರೂ. ಸರಿ ಹೋಗಲೆ ಬೇಕಾಯ್ತು.

ಹೊದ್ವಿ ಡಾಕ್ಟರ್ ಅಣ್ಣ ಮಾತಾಡಿಸಿದರು.ಸಚ್ಚು, ಪುಟ್ಟಿ ಒಂದು ಸೊಫಾ ಮೇಲೆ ಕೊತ್ಕೊಂಡ್ರೂ. ನಾನು ಇನ್ನೊಂದರ ಒಂದು ಬದೀಲಿ ಕೊತ್ಕೊಂಡೆ ಆಂಟಿ ಹೋಳಿಗೆ ಕೊಟ್ರೂ.ಅಷ್ಟರಲ್ಲಿ ಆ ರಾಮು ನನ್ನ ಪಕ್ಕಾ ಖಾಲಿ ಇದ್ದ ಜಾಗದಲ್ಲಿ ಕೂತುಕೊಂಡ.ನನಗೆ ಎದೆಯಲ್ಲಿ ಅವಲ್ಕ್ಕಿ ಕುಟ್ಟಿದ ಹಾಗೆ ಆಗುತ್ತಿತ್ತು. ನಾನು ಹೋಳಿಗೆ ಮುರೀತಿದೀನಿ, ಅಷ್ಟರಲ್ಲಿ ನನ್ನ ಎರಡು ತೋಳು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡಗೆನ್ನೆಗೆ ಮುತ್ತಿಟ್ಟ ನಾನು ಕಿಟಾರ್.... ಅಂತ ಕಿರುಚಿಕೊಂಡು ತಟ್ಟೇನ ತ್ರೋ ಬಾಲ್ ತರ ದೂರಕ್ಕೆ ಎಸೆದು ಅಲ್ಲಿಂದ ಓಡಿದೆ.ಅಮ್ಮಂಗೆ ಕಿರುಚು ಕೇಳಿಸಿರಬೇಕು ಬಾಗಿಲ ಹತ್ತಿರ ಬಂದಿದ್ದರು. ಅಷ್ಟರಲ್ಲಿ ಪುಟ್ಟಿ, ಸಚ್ಚು, ಆಂಟಿಯು ಬಂದರೂ.ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ.ಆಕಸ್ಮಾತ್ ಅವನು ತುಟಿಗೆ ಏನಾದರೂ ಮುತ್ತು ಕೊಟ್ಟಿದ್ದರೆ ಏನು ಗತಿ ಅಂತ ಯೋಚಿಸುತ್ತಿದ್ದೆ.

ಅಮ್ಮ ತುಂಬಾ ಆರಾಮಾಗಿ 'ಹೋಗ್ಲಿ ಬಿಡು ಪಾಪ ಆ ಹುಡುಗನಿಗೆ ತಲೆ ಸರಿ ಇಲ್ಲ' ಅಂತ ನನಗೆ ಗೊತ್ತಿರೋದನ್ನೇ ಹೊಸ ವಿಷಯ ಅನ್ನೋಹಾಗೆ ಹೇಳಿದರು..ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ..ನೀನು ಚಿಕ್ಕವಳಾಗಿದ್ದಾಗ ಇಡೀ ರೋಡಿನವರು ನಿನ್ನ ಕೆನ್ನೆ ಹಿಂಡಿ, ಮುದ್ದು ಮಾಡಿ, ಮುತ್ತು ಕೊಟ್ಟು ಕಳಿಸೋರು ಇದನ್ನು ಹಾಗೆ ಅಂತ ತಿಳುಕೋ ಅಂದ್ರು.ಇದನ್ನು ಹಾಗೆ ಅಂತ ಹೇಗೆ ತಿಳ್ಕೋಳೋದು ಅಂತ ನನಗೆ ಅರ್ಥ ಆಗಲಿಲ್ಲ.ಆದ್ರೂ ಬೇರೆ ವಿಧಿ ಇಲ್ಲದೇ ಸುಮ್ಮನಾದೆ

9 comments:

ಚಿರವಿರಹಿ said...

ಅಂದ್ರೆ ಜೀವನದ ಮೊದಲ ಕಿಸ್ಸು ಹೇಗಿರಬೇಕು ಅಂತ ಅನ್ಕೋಂಡಿದ್ರಿ? :-)
ಪಾಪ! ಹೀಗಾಗಬಾರದಿತ್ತು.
ಹೇಳಬೇಕಾಗಿದ್ದನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದಿರಾ..

Ahaskara said...

Mruganayani, Hudgiyarige Sensitiveness irbeku adre yestara mattige annodu mukya,nimmanna hattiradinda kanada avanige nimma bagge hag yak ansirbahudu antha yochisidira, avanu mentally retarded nija adakke avanu special person, avanu muthu kottiddakke savira arthagaliruthe, savira putagala pustaka odo namige Ee manushya yak artha haglara, artha agthane prayatnisi, Nanu nanna free time na inthaha mentally retarded maklottige kalithini avrigu bhavanegaliruthe artha madkoli spandisi. Nimma mruganayanada notavanna koncha badalaisi nodi.

Preeti irali,
Rashmi

aithalsandy said...
This comment has been removed by the author.
aithalsandy said...

"...ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ.."
fantastic sense of humor

-Malnad Maga

Kannadad Kusu said...

Parvagilla..Your writing is meliorated blog by blog..I also agree with Rashmi at somepoint. Adu nimma modalaneya muttu annuvadakinta nimma anna kottida muttu anth tilidukolli. Its just my views..

With Regards
Kannadada Kusu

ವಿಕಾಸ್ ಹೆಗಡೆ/ Vikas Hegde said...

ಹ್ಹ ಹ್ಹ. ಸೂಪರ್..

ಆದ್ರೂ ಈ ಹುಡ್ಗೀರೆ ಹಿಂಗೆ.. ಯಾವ್ದುನ್ನ ಏನಂತ ತಿಳ್ಕೋಬೇಕೋ ಹಂಗೆ ತಿಳ್ಕೊಳಲ್ಲ, ಯಾವ್ದನ್ನ ಏನ್ ತಿಳ್ಕೋಬಾರ್ದೋ ಹಂಗೇ ತಿಳ್ಕೊಳೋದು... :-)

ಕಾಗುಣಿತ ದೋಷ ಸ್ವಲ್ಪ ಬಿಟ್ಟರೆ ಮಲ್ನಾಡ್ ಹುಡ್ಗಿ ಬರಹಗಳು ಇಂಪ್ರೂವ್ ಆಗ್ತಾ ಇವೆ.

ಮೃಗನಯನೀ said...

ಚಿರವಿರಹಿಗಳೇ..
ಮೊದಲನೆಯ ಕಿಸ್ಸು ಹೇಗಿರಬೇಕು ಅಂತ ಯೋಚಿಸುವ ಮೊದಲೇ ಹೀಗಾಗಿಬಿಟ್ಟಿತ್ತು

ರಶ್ಮಿಅವರೇ
ಈ ಘಟನೆ ನೆಡೆದಾಗ ನನಗೆ 16 ವರ್ಷ ಇರ್ಬೇಕು ಆವಾಗ ಏನನ್ನಿಸಿತು ಅನ್ನೋದನ್ನ ಈಗ ಬರೆದಿದೀನಿ... ಆ ಸಮಯದಲ್ಲಿ ಹೀಗೆಲ್ಲ ಉದಾತ್ತವಾಗಿ ಯೋಚನೆ ಮಾಡೋಕ್ಕಾಗಲಿಲ್ಲ ಸಕತ್ ಶಾಕ್ ಆಗಿತ್ತು. ಆವಾಗ ನನಗೆ ಏನನ್ನಿಸಿತು ಏನಾಯ್ತು ಅನ್ನೋದನ್ನ ಒಂದು ಸಾಕ್ಷಿ ಥರ ಬರೆದಿದೀನಿ ಅಷ್ಟೇ..
ಮೃಗದ ನಯನಗಳು ಚಂಚಲ ಯಾವಾಗಲು ಅದು ಬದಲಾವಣೆಯನ್ನು ಬಯಸುತ್ತಿರುತ್ತದೆ ಹೊಸದನ್ನು ಹುಡುಕುತ್ತಿರುತ್ತದೆ.
ನೀವು ಅವರಿಗೋಸ್ಕರ ಸಮಯ ಕಳಿತೀರೋದು ಸಂತೋಷದ ವಿಷಯ.

@Sandy
sense of humoraa? ಹೂಂ ಅದೇನೋ ಅಂತಾರಲ್ಲ ಬೆಕ್ಕಿ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅಂತ ...thank u by the way..


@Kannadada kusu
ಆ ಹುಡುಗನ ಕಡೆಗೆ ನನಗೆ ಯಾವುದೇ ಭಾವನೆಗಳಿರಲಿಲ್ಲ. ಅವರಮ್ಮನಿಗೆ ಅವನು ಕೊಡೋ ಕಷ್ಟ ನೋಡಿ "ಪಾಪ ಆಂಟಿ" ಅನ್ನಿಸುತ್ತಿತ್ತು. ಯಾವುದೇ ಭಾವನೆಗಲಿಲ್ಲದೇ ಇರೋವಾಗ ಅವನು ಮುತ್ತು ಕೊಟ್ಟ ಅನ್ನೋ ಕಾರಣಕ್ಕೆ ಹೇಗೆ ಸುಮ್ಮಸುಮ್ಮನೇ ಅಣ್ಣ ಅಂತ ತಿಳ್ಕೋಳೋದು?

@ Vikas hedge
ಯಾವ್ದುನ್ನ ಏನಂತ ತಿಳ್ಕೋಬೇಕು ವಿಕಾಸ್? by the way thank u ಹೀಗೆ ಪ್ರೋತ್ಸಾಹವಿರಲಿ

Prasad Shetty said...

"ಮುತ್ತು, ಮನಸ್ಸಿಗೆ ಹಿತವಾದರೆ ಅದು ಸಂಪತ್ತು..
ಇಲ್ಲವಾದರೆ.. ಆಪತ್ತು..!"

ನಿಮ್ಮ ಅಲ್ಲಿಂದ ಓಡಿ ಬಂದದ್ದು ಆ ಕ್ಷಣಕ್ಕೆ ಸರಿ ಅಂತ ತೋರುತ್ತದೆ. ಅವನಿಗೆ ಕಪಾಳಮೊಕ್ಷ ಮಾಡಿದ್ದರೆ..!!!? :) ಏನೂ ಅರಿಯದ ಹುಡುಗನಿಗೆ ನಿಮಗೆ ಮುತ್ತು ಕೊಡಬೇಕೆಂದು ಏಕೆ ಅನಿಸಿತೊ!! :)

ಮೃಗನಯನೀ said...

ಏಕೆ ಅನಿಸಿತೋ ನಿಜವಾಗಲೂ ಗೊತ್ತಿಲ್ಲ ಕಣ್ರೀ!! ಆಮೇಲೆ ಕೆಳೊಕ್ಕ್ ಹೋಗಿ ಇನ್ನೊಂದ್ ಮುತ್ತು ಕೊಟ್ಬಿಟ್ರೆ ಕಷ್ಟ ಅಂತ ಸುಮ್ಮನಾದೆ:-o by the way thnx 4r the comment Prasad