Saturday, May 26, 2007

ಬಂಧ!!!

ಯಾವತ್ತು 6 15ಕ್ಕೆ ಎಚ್ಚರ ಆಗೋಗೂತ್ತೆ ನಂಗೆ ಅಂದುಕೊಂಡು ಗಡಿಯಾರ ನೋಡಿದರೆ 6 23ಆಗಿತ್ತು ಸಧ್ಯ 7-8ನಿಮಿಷ ಜಾಸ್ತಿ ನಿದ್ದೆ ಬಂದಿದೆ ಅನ್ನಿಸಿ ಸಮಾಧಾನ ಮಾಡ್ಕೊಂಡೆ. ಎದುರುಗಡೆ ಬೆಡ್ ನೋಡಿದಾಗ ಮನಸ್ಸು ಖಾಲಿ ಅನ್ನಿಸುತ್ತಿದೆ..ಅವಳು ಅಲ್ಲಿ ಇದ್ದಿದ್ರೆ ಅವಳ ನಿದ್ದೆ ಕಣ್ಣನ್ನ ನೋಡುತ್ತಾ 'ನೆನ್ನೆ ರಾತ್ರಿ ನೀನು ಹಿಂಗೆ ಏನೇನೋ ಬಡಬಡಿಸುತ್ತಿದೆ' ಅಂತ ಹೇಳಿ ಗೋಳು ಹುಯ್ಕೋಬಹುದಿತ್ತು..



ಹಾ ಅವಳ ಹೆಸರು ವಾತ್ಸಾಲ.. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಅವಳು ಭಾರತಕ್ಕೆ ಹಾರಿಹೋದಳು. ನನ್ನ ಜೊತೆಗೆ ಕೆಲಸ ಮಾಡೊಳು ನಾವಿಬ್ಬರೂ ಒಂದೇ ಕಂಪನೀಲೀ ಕೆಲಸ ಮಾಡುತ್ತಿದ್ದೀವಿ...ನನಗಿಂತ ಮೊದಲೇ ಹಾಲೆಂಡ್‌ಗೆ ಬಂದವಳು. ಚೆನ್ನಾಗಿದ್ಲೂ ನೋಡೊಕ್ಕೆ.. ಅವಳೂ ಕನ್ನಡದವಳು ಅಂತ ಗೊತ್ತಾಗಿ ನಾನು ಸ್ವಲ್ಪ ಜಾಸ್ತಿನೇ ಸಲುಗೆಯಿಂದ ವರ್ತಿಸೊಕ್ಕೆ ಶುರು ಮಾಡ್ದಾಗ "ನೀವು ನನ್ನ ಜೊತೆ ಫ್ಲಾರ್ಟ್ ಮಾಡ್ತಿದ್ದೀರಾ ಅಂತ ಗೊತ್ತಗ್ತಿದೆ.. ಆದ್ರೂ ಇಷ್ಟ ಆಗ್ತಿರ ಅಂದಿದ್ಲು."



ಒಂದು ದಿನ ಆಫೀಸಿನಲ್ಲಿ ಜೋಲುಮುಖ ಹಾಕ್ಕೊಂದು ಕಾಫಿ ಕುಡೀತಿದ್ದೊಳ ಹತ್ತಿರ ಹೋಗಿ ಏನಾಯ್ತು ಅಂದಿದ್ದಕ್ಕೆ.. "ಒಂದು ವಾರದಿಂದ ಹೊಸಮನೆ ಹುಡುಕುತ್ತಾ ಇದ್ದೀನಿ, ಈಗಿನ ಒನರ್‍ದು ಸ್ವಲ್ಪ ಕಿರಿಕ್ಕು. ಮನೆ ಚೆನ್ನಾಗಿದ್ರೆ ಅಲ್ಲಿನ ಜನ ಸರಿ ಇಲ್ಲ, ಜನ ಸರಿ ಇದ್ರೆ ಮನೆ ಸರಿಯಾಗಿರಲ್ಲ, ಸಾಕಾಗ್ ಹೋಯ್ತು." ಅಂದಳೂ..'ಸರಿ ಹಾಗಾದ್ರೆ ನಮ್ಮನೆಗೆ ಬನ್ನಿ, ನಾವು ಮೂರು ಜನ ಇದ್ದೀವಿ. ನನ್ನ ಇಬ್ಬರು ಸ್ನೇಹಿತರು ಬೇರೆ ಕಂಪನೀಲಿ ಕೆಲಸ ಮಾಡ್ತಿದಾರೆ.' ಅಂತ ತಮಾಶೇ ಮಾಡಿ ಹಲ್ಲು ಕಿರಿದ್ರೆ.."ನಿಮ್ಮನೇ ಅಡ್ರೆಸ್ಸು ಕೊಡಿ" ಅಂತ ಸೀರಿಯಸ್ಸಾಗಿ ಅಡ್ರೆಸ್ಸು ಈಸ್‌ಕೊಂಡು ಸಂಜೆ ಮಾನೆಗ್ ಬಂದು ಸಂದೀಪ, ಸರ್ವನರನ್ನ ಮಾತಾಡ್ಸ್‌ಕೊಂಡು..ಮಾರನೇ ದಿನಾನೇ ಗಂಟು ಮೂಟೆ ಸಮೇತ ಮನೆ ಮುಂದೆ ಇಳಿದಳು!!!



ಅವಳು ಒಂಥರ ಮೂಡಿ..ಒಂದಿನ ಪಟಪಟಾ ಅಂತ ಮಾತಾಡೋದು, ಇನ್ನೊಂದು ದಿನಾ ಪೂರಾ ಮೌನವಾಗಿ ಇರೋದು.. ರಾತ್ರಿ ಇಡೀ ತಪಸ್ಸು ಮಾಡೊರ ಥರ ನನಗೆ ತಲೆ ಬುಡ ಅರ್ಥವೆ ಆಗದ ಪುಸ್ತಕನ ಓದೋದು..ಇನ್ನುಸ್ವಲ್ಪ ದಿನ ನಂಗೆ ಫ್ರೆಂಚ್ ಕಲೀಬೇಕು ಅಂತ ಆಸೆ ಅಂತ ಫ್ರೆಂಚ್ ಕಲಿಯೂಕ್ಕೆ ಇರೋ ಸೀಡಿ- ಪುಸ್ತಕಗಳನ್ನ ಗುಡ್ಡೆ ಹಾಕ್ಕೊಂಡು ಅದರಲ್ಲಿ ಮುಳುಗಿಹೋಗದು..ಅಯ್ಯೂ ಈ ಹಾಳಾದ್ ಭಾಷೆ ಕಲಿಯೂಕ್ಕೆ ಹೋಗಿ ಎಷ್ಟು ಸಮಯ ಹಾಳು ಮಾಡಿದೆ ಅಂದುಕೊಂಡು..ಭಾರತದಲ್ಲಿರೋ ತನ್ನ ಸ್ನೇಹಿತೆಗೆ ಫೋನ್ ಮಾಡಿ ಗಂಟೆಗಟ್ಟಲೆ ಹರಟೆ ಹೊಡೆಯೋದು,ಇದ್ದಕ್ಕಿಧಂಗೆ ಒಂದು ದಿನ ಜ್ಞಾನೋದಯ ಆದ್ಹಂಗೆ ಆಗಿ, ಸಕತ್ ದಪ್ಪ ಆಗಿದೀನಿ, ಅನ್ನಿಸಿ ಜಿಮ್‌ಗೆ ಹೋಗಿ ಯಾದ್ವಾ ತದ್ವಾ ವೊರ್ಕ್ ಔಟ್ ಮಾಡೋದು..ಹೀಗೆ!!!



ಮೊದಲು ಬೇರೆ ರೂಮ್ ನಲ್ಲಿ ಇರುತ್ತಿದ್ದ ಅವಳು ಸ್ವಲ್ಪ ದಿನದಲ್ಲೇ ನನ್ನ ಜೊತೆ ನನ್ನ ರೂಮ್ನಲ್ಲೇ ಇರೊಕ್ಕೆ ಶುರು ಮಾಡಿದಳು. ಒಂದು ದಿನಕ್ಕೂ ಸಂಬಂಧ ಕ್ಕೆ ಹೆಸರು ಕೊಡೋ ಪ್ರಯತ್ನ ಮಾಡಲಿಲ್ಲ ಅವಳು ಅದು ನನಗೂ ಬೇಕಿರಲಿಲ್ಲ ಅವಳನ್ನ ಮದುವೆ ಆಗ್ತೀನಾ ಅಂತ ಕೂಡ ಯೋಚಿಸಿರಲಿಲ್ಲ ನಾನು. ಸಂದೀಪ ಸರ್ವನರೇ ಗರ್ಲ್ ಫ್ರೆಂಡ್- ಬಾಯ್ ಫ್ರೆಂಡ್ ಅನ್ನೊಕ್ಕೆ ಶುರು ಮಾಡಿದ್ದರು 'ನೀನು ಅವಳನ್ನ ಪ್ರೀತಿಸುತ್ತಿಯ' ಅಂತ ಸರ್ವನ ಕೇಳಿದ್ದ 'ಇಲ್ಲ ,ಅವಳು ನಂಗೆ ಇಷ್ಟ ಆಗ್ತಾಳೆ ಅಷ್ಟೇ' ಅಂದಿದ್ದೆ ಅವಳನ್ನ ಇದೆ ಪ್ರಶ್ನೆ ಕೇಳಿದ್ದಕ್ಕೆ.."ಹಾ ಪ್ರೀತಿಸುತ್ತೀನಿ, ಆದರೆ ಅವನಿಗೆ ಈ ವಿಷಯ ಹೇಳಬೇಡ. ಅವನು ಹೇಗೆ ಅಂತ ನಂಗೆ ಗೊತ್ತು ಅವನಿಗೆ ಉಸಿರುಕಟ್ಟೋ ಹಂಗೆ ಆಗಬಾರದು. ನನ್ನ ಅವನ ಸಂಬಂಧಕ್ಕೆ ಹೆಸರು ಬೇಡ" ಅಂದಿದ್ದಳಂತೆ.



ದಿನಾ ರಾತ್ರಿ ನಿದ್ದೇಲಿ ಮಾತಾಡೋ ಅಭ್ಯಾಸ ಇತ್ತು ಅವಳಿಗೆ. ಅವಳು ರಾತ್ರಿ ಹಿಂಗ್ ಕಿರಿಚುತ್ತಿದ್ದಳು, ಹಂಗೆ ಮಾತಡುತ್ತಿದ್ದಳು, ಅಂತ ಸಂದೀಪ ಸರ್ವನರಿಗೆ ಹೇಳಿ..ಮೂರು ಜನಾನು ಅವಳನ್ನ ಸಕತ್ತು ಚುಡಾಯಿಸುತ್ತಿದ್ದವಿ..ಅವಳೂ ಅದಕ್ಕೆ ಆಯುರ್ವೇದಿಕ್ಕು, ಆಲೋಪತಿ, ಹೋಮಿಯೋಪತಿ, ರೇಖಿ, ಯುನಾನೀ, ಎಲ್ಲ ಟ್ರೀಟ್ಮೆಂಟ್ ಮಾಡಿಸಿಕೊಂಡು ಯಾವುದು ಸರಿ ಹೋಗದೇ, "ನಾನು ರಾತ್ರಿ ಮಾತಾಡೋದೇ ಸರಿ' ಅಂತ ನಿರ್ಧಾರ ಮಾಡಿದ್ಲು.



ಹೊರಡೋಕ್ಕೆ ಮುಂಚೆ ಚಿಗರೇ ಥರ ಆಗೋಗಿದ್ದಳು ಅವಳು. ಅಪ್ಪನಿಗೆ, ಅಮ್ಮನಿಗೆ, ತಮ್ಮನಿಗೆ, ಅಜ್ಜಿ- ತಾತನ್ಗೆ, ಸ್ನೆಹಿತರಿಗೇ ಅಂತ ಎಲ್ಲರಿಗೂ ಶೋಪಿಂಗ್ ಮಾಡಿ, ನಮ್ಮ ಮೂರು ಜನರಿಗೆ ಒಂದು ಚಂದದ ಪಾರ್ಟಿ ಕೊಟ್ಟಳು.ಅವಳಿಗೇನು ಕೊಟ್ಟಿರಲಿಲ್ಲ ನಾನು ಏನು ಕೊಡೋದು ಅಂತ ಯೋಚಿಸಿ ಒಂದು ಅತ್ಯಂತ ದುಬಾರಿಯಾದ ಟೆಡ್ಡಿ ಬೆರ್ ಕೊಟ್ಟೆ ಅವಳಿಗೆ ಅದರ ಹಾಲಿನ ಕೆನೆ ಬಣ್ಣ ಇಷ್ಟ ಆಯ್ತು.



ತೀರಾ ಹೊರೋಡೋ ಮುಂಚೆ ಏರ್‌ಪೋರ್ಟ್ ನಲ್ಲಿ ನನ್ನ ಕೈಗೆ ಒಂದು ಕವರ್ ಕೊಡುತ್ತಾ ನಾನು "ಇಲ್ಲಿಂದ ಹೋಗಿ ಒಂದೆರೆಡು ವರ್ಷಕ್ಕೆ ಮದುವೆ ಆಗಬಹುದು..ಆದರೆ ನನಗೆ ಇಷ್ಟವಾದವನ ಜೊತೆ ಯಾವುದೇ ಬಂಧನವಿಲ್ಲದೇ, ಬಂಧನ ಹಾಕದೆ, ಇದ್ದ ಸಂತೋಷವಿದೆ ನನಗೆ. ನಿನ್ನ ಮದುವೆಗೆ ನನ್ನ ಕರೆಯೋದು ಮರೀಬೇಡ" ಅಂತ ಹೇಳಿ ಹೊರಟೆ ಹೋದಳು. ಕವರು ಬಿಚ್ಚಿ ನೋಡಿದರೆ ಮೊಲದ ಬಿಳುಪಿನ ಟವೆಲ್ ಅದಕ್ಕಂಟಿಸಿದ ಚೀಟಿ "ನನ್ನ ಮಿಸ್ ಮಾಡಿಕೊಂಡಾಗ ಇದು ನಿನ್ನ ಮೈ- ಮನಗಳನ್ನ ಸವರಲಿ" ಅಂತ!!

ಆಫೀಸಿಗೆ ಲೇಟಾಯ್ತು ಅನ್ನೋದು ನೆನಪಾಗಿ ಅವಳು ಕೊಟ್ಟಿದ್ದ ಟವೆಲ್ ತೆಗೆದುಕೊಂಡು ಸ್ನಾನದ ಮನೆ ಹೊಕ್ಕೆ.....

7 comments:

Bigbuj said...

The Best Article among all Kane..Swalp hottu nanu yello mulugi hogbitte..

ಸಂತೋಷಕುಮಾರ said...

ತುಂಬ ಅದ್ಬುತವಾಗಿದೆ ಮತ್ತು ಹೃದಯಸ್ಪರ್ಶಿಯಾಗಿದೆ.ಮುಂದೆಯೂ ಈ ತರಹದ ಬರಹಗಳು ಬರುತ್ತಿರಲಿ..

Anonymous said...

ಹಾಯ್ ಮಲೆನಾಡು ಹುಡುಗಿ,
ತುಂಬಾ ಚನ್ನಾಗಿ ಇದೆ ನಿಮ್ಮ ಈ ಕಥೆ. ಇನ್ನು ಇದೆ ಇರಬೇಕು ಅನ್ನಿಸುತ್ತಿರುವಾಗಲೇ ಮುಗಿದು ಹೋಯ್ತು. ಅವರಿಬ್ಬರನ್ನ ಒಂದು ಮಾಡಬೇಕಾಗಿತ್ತು ಕಣ್ರಿ.

ನಿಮ್ಮ ಬರಹ ಮೆಚ್ಯೂರ್ಡ್ ಆಕ್ತಿದೆ. ಪ್ರತಿಭೆಯನ್ನಾ ಚನ್ನಾಗಿ ಅರಳಿಸುತ್ತಿದ್ದಿರಾ.ಮುಂದುವರೆಯಲಿ ನಿಮ್ಮ ಈ ಪಯಣ.

ವಿ.ರಾ.ಹೆ. said...

Frank ಆಗಿ ಹೇಳ್ಬೇಕು ಅಂದ್ರೆ ಲೇಖನದ conceptu ಬಹಳ ಇಷ್ಟ ಆಯಿತು. ಆದ್ರೆ narration ಯಾಕೋ ಸರಿ ಅನ್ನಿಸ್ಲಿಲ್ಲ. ಬಹಳ ಅವಸವಸರವಾಗಿ ಬರೆದಿರೋ ಹಾಗಿದೆ. ಕೆಲವೊಂದು ವಾಕ್ಯಗಳ ಮಧ್ಯೆ ಲಿಂಕ್ ಚೆನಾಗಿ ಕೊಡೋದ್ರಲ್ಲಿ ಎಡವಿದಿಯಾ ಅನ್ಸುತ್ತೆ. ಅದಕ್ಕೆ ಕಥೆ ಏನು, ಯಾರು ಪಾತ್ರಗಳು , ಏನ್ ನೆಡಿತಿದೆ ಅಂತ ಗೊಂದಲ ಆಗತ್ತೆ. ಏನ್ ಹೇಳಕ್ಕೆ ಹೋಗ್ತಿದಿರಾ ಸ್ವಲ್ಪ ಬಿಡಿಸಿಬಿಡಿಸಿ ಬರಿ ಪರ್ವಾಗಿಲ್ಲ. ಬ್ಲಾಗ್ ನಲ್ಲಿ ದೊಡ್ಡದು ಅನ್ಸುತ್ತೆ ಅಷ್ಟೆ. ಆದ್ರೆ ಓದಕ್ಕೆ ಚೆನಾಗಿರತ್ತೆ. ಆದ್ರೆ ನೀನು ಉದ್ದೇಶಪೂರ್ವಕವಾಗಿಯೇ ಈ ಥರಾ ಬರ್ದಿದ್ರೆ ಮಾತ್ರ ನಂಗೆ ಗೊತ್ತಿಲ್ಲ.

ಹ್ಮ್.. ಆಮೇಲೆ ಕಾಗುಣಿತ, punctuation ತಪ್ಪು ಗಳಂತೂ ಬಹಳ ಕಾಣಿಸ್ತಿದೆ. ಆದ್ರೆ ಬರಹ ವಿಷ್ಯಗಳಲ್ಲಿ ಪ್ರೌಢಿಮೆ ಬರಹದಿಂದ ಬರಹಕ್ಕೆ ಇಂಪ್ರೂವ್ ಆಗ್ತಾ ಇದೆ. ಗುಡ್.

ಇದು ನನಗನ್ನಿಸಿದ್ದು. ಜಾಸ್ತಿ ಮಾತಾಡಿದ್ದರೆ ಕ್ಷಮೆ ಇರಲಿ.
:)

Susheel Sandeep said...

ನಿಜಕ್ಕೂ ಬರವಣಿಗೆಯಲ್ಲಿ ಇಂಪ್ರೂವ್‍ಮೆಂಟ್ಸ್ ಇದೆ!
ಕಥೆಯ ಹಂದರ ಇಷ್ಟವಾಯ್ತು...ಇದು ನಿಮ್ಮದೋ ಇಲ್ಲ ನಿಮ್ಮ ಹತ್ತಿರದವರ ಅನುಭವದಂತೇ ಬರೆದಿದೀರ...ಶೈಲಿ ಸೂಪರ್!

ಆದ್ರೂ ಯಾಕ್ರೀ ಎಲ್ಲವನ್ನ ಅಬ್ಸ್ಟ್ರಾಕ್ಟ್ (abstract) ಮಾಡಿ ಸಹೃದಯರ ತಲೆಗೆ ಕೆಲಸ ಕೊಡ್ತೀರ??
Nice one!

ಮೃಗನಯನೀ said...

@bigbuj
thanks ಕಣೋ ಬುಜ್ಜು. ನಿಂಗೆ 2ರೆಡು thanksಹೇಳ್‌ಬೇಕು. ಒಂದು commentಗೆ ಇನ್ನೊಂದು ಯಾಕೆ ಅಂತ ನಿಂಗೊತ್ತು.

ಧನ್ಯವಾದಗಳು ಚಿರವಿರಹಿಗಳೇ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ.

thanksರೀ ರಂಜು ನನಗೋ ಅವರು ಸೇರಿದರೆ ಚೆನ್ನ ಅನ್ನಿಸುತ್ತಿದೆ ಆದರೇನು ಮಾಡಲಿ ನನೊಳಗಿನ ಕಥೆಗಾರ್ತಿ ಸುಮ್ಮನಿರಲು ಹೇಳಿದ್ದಾಳೆ. ಮುಂದೆನಾಗುತ್ತೆ ಅನ್ನೋದನ್ನ ಅವರವರ ಕಲ್ಪನೆಗೆ ಬಿಟ್ಟುಬಿಡು ಅಂತ ಅವಳ ಅಪ್ಪಣೆ. ನನ್ನ ಪಯಣವನ್ನು ಹೇಗೆ ಗಮನಿಸುತ್ತಿರಿ.

ವಿಕಾಸ್ ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ. ನಿಜ ಹೇಳ್‌ಬೇಕು ಅಂದ್ರೆ ಹೇಗೆ ಕ್ಲಿಷ್ಟ ವಾಗಿ ಬರೆಯೂದೂ ನನಗಿಷ್ಟ.. ತುಂಬಾ ಸರಳವಾಗಿ ಬಿಡಿಸಿ ಬರೆದರೆ ಓದುಗನಿಗೆ ತುಂಬಾ easyಆಗಿ ಅರ್ಥ ಆಗುತ್ತೆ ಆ ease ಕೊಡೋ ಇಷ್ಟ ಇಲ್ಲ ನನಗೆ..actually ಆ ಹುಡುಗಿಗೂ ಒಂದು ಹೆಸರು ಕೊಟ್ಟಿರಲಿಲ್ಲ ನಾನು.. ಆದರೆ ಅದು ತುಂಬಾ confusionಗಳಿಗೆ ಎಡೆ ಮಾಡಿಕೊಡುತ್ತೆ ಅನ್ನಿಸಿ ಅವಳಿಗೊಂದು ಹೆಸರು ಕೊಡಬೇಕಾಯ್ತು.
ಕಾಗುಣಿತದ ತಪ್ಪುಗಳನ್ನು ತಿದ್ದಿ ಕೊಳ್ಳುತ್ತೇನೆ.. ಇನ್ನೂ ಸರಿ ಹೋಗದಿದ್ದರೆ ನಿಮ್ಮ ಹತ್ತಿರ ಕನ್ನಡ tusion ಗೆ ಬರುತ್ತೇನೆ ಫೀ ಎಷ್ಟು ನಿರ್ಧರಿಸಿ:-)

thanks ಸುಸಂಸ್ಕೃತ. ಆದರೆ ಇದು ನನ್ನ ಕಥೆಯಲ್ಲ ಮಾರಾಯರೇ... ನನ್ನ ಕಥೆ ಆದ್ರೆ ನನ್ನ ಕಥೆ ಅಂತ ಹೇಳಿ ಬಿಡುತ್ತೇನೆ. ಕಥೆ ಹೇಳಿ ಮುಗಿಸಿಬಿಟ್ಟರೆ ಆಯಿತ ನಿಮ್ಮ ಕಲ್ಪನೆಗಳಿಗೂ ಅವಕಾಶ ಇರಲಿ ಅಂತ... :-)

praveen said...

adellindha idkondu barthiree kathevasthu na ,idu kooda thumbha chennagide