Monday, June 4, 2007

ಬೆಳ್ಳಿಯ ಭಾವನೆ

ಕಾಡು ಕುದುರೆಯ ಆವೇಗವೇ,

ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.

ನೀನು ಮುಗಿಲು ನಾನು ನೆಲ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ

ನಾ ಅಚಲದ ತುಟಿ ಎತ್ತುವೆ
ನೀ ಮಳೆಯೊಳು ಮುತ್ತನಿಡುವೆ


ಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.


ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.
ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??
ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??


ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.

ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣ.

...................................................ನಿನ್ನ ಬೆಳ್ಳಿ


(ಇದನ್ನು ಓ ಮನಸೇ communityಲಿ ಪೋಸ್ಟ್ ಮಾಡಿದ್ದೆ ಇಲ್ಲೂ ಇರಲಿ ಎಂದು ಹಾಕಿರುವೆ )

8 comments:

ಚಿರವಿರಹಿ said...

ಇದು ತುಂಬ ಇಷ್ಟ ಆಯ್ತು.ಸ್ವಲ್ಪ ನಿಮ್ಮ ಗಂಡ/ಸಖ/ಅತ್ಮಬಂಧುವಿನ ಮೇಲೆ ಹೊಟ್ಟೆಕಿಚ್ಚೂ ಆಯ್ತು!:-)

ಮೃಗನಯನೀ said...

@ Chiravirahi
ಖರ್ಮ ಕಾಂಡ ನನಗಿನ್ನೂ ಮದುವೆ ಆಗಿಲ್ಲ ಮಾರಾಯರೇ... ನನ್ನ ಕಥೆಗಳಲೆಲ್ಲ ನಾನು heroin ಅಂತ ಅಂದುಕೋಬೇಡಿ plzzz

condumdots said...

The writing is not bad, however, there are some textual errors, for instance, kurchi is written as khurchi [mahaapraaNa!]. Though, you may consider me as your unfriendly severe critic, I suggest you to read kannada meemaMse, that will definitely improve your writing skills, also, you will learn more sophisticated kannada words and their proper usage. A strong knowledge of words will definitely improve the quality of expression in any language.

Try to read more kannada books. From a fundamental point of view, "Igo kannada" by prof.Venkatasubbaiah is suppose to be a good one. Try to get that.

Regards
Dr.D.M.Sagar
Canada

ಮೃಗನಯನೀ said...

@ Dr.Sagar

life without critisism is not worth leaving...ಅಂತ ಸಾಕ್ರೆಟಿಸ್ ಹೇಳಿದಾರಲ್ವ.

syllabus ಬಿಟ್ಟು ಬೇರೆಲ್ಲ ಓದುತ್ತೀಯ ಅಂತ ಅಮ್ಮನಿಂದ ಬೈಗುಳ ತಿನ್ನುತ್ತಿರುತ್ತೇನೆ ನಾನು. ನಿಮ್ಮ ಸಲಹೆಗೆ ಧನ್ಯವಾದಗಳು. ಅವೆರೆಡು ಪುಸ್ತಕಗಳನ್ನು ಆಗಸ್ಟ್‌ನಲ್ಲಿ ಬರೋ vaccationನಲ್ಲಿ ಓದುವೆ. ಓದಿದ ಮೇಲೆ ಏನಾದ್ರೂ doubts ಇದ್ರೆ ನಿಮ್ಮನ್ನು approach ಮಾಡ್ತೀನಿ .

ಸುಸಂಕೃತ said...

ಈ ರೀತಿಯ ಕಥೆಗಳಲ್ಲಿ ಆ ಬಿಸಿಯುಸಿರ ಭಾವನೆಗಳನ್ನ ಸೂಕ್ಷ್ಮವಾಗಿ ಹೊರಗೆ ಹಾಕೋ ಕಲೆ ನಿಮ್ಮಲ್ಲಿದೆ! ತುಂಬಾನೇ ಹಿಡಿಸಿತು...ತಕ್ಕನಾದ ಭಾವಗೀತೆಯ ರೆಫರೆಂಸ್ ಇನ್ನೂ ಮುದ ನೀಡಿತು...ರತ್ನಮಾಲ ಹಾಗೇ ಕಿವಿಯಲ್ಲಿ ಗುನುಗುನಿಸಿ ಹೋದ ಭಾವನೆ!
"ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ!" ಹಾ...Bliss....

ಮೃಗನಯನೀ said...

thank you Susanskruta

ಉಮಾಶಂಕರ್ ಯು. said...

ಮದುವೆ ಆಗಿಲ್ಲ ಹೇಳ್ತಾ ಇದ್ದೀರಿ ... ಮದುವೆ ಆಗದಿದ್ರು ನಿಮ್ಮ ಕಲ್ಪನೆ ಮಾತ್ರ ಮದುವೆ ಆಗಿರುವವರನ್ನೆ ಮೀರಿಸುವಹಾಗೆ ಇದೆ... ನನ್ನ ಚಿಕ್ಕ suggestion, ಬೇಗ ಮದುವೆ ಆಗಿ....Cheers!!!!

anu said...

gelati, haage kareyabahuda nimmanna u r the BEST believe me. belliya bhavaneyanna oodida mele nimma barahakke taledoogadale iroke saadyane illa. Nivu maduve yaago huduga timba lucky ansatte