Tuesday, August 21, 2007

ಅಮ್ಮಾ.. ನಿನ್ನ ಎದೆಯಾಳದಲ್ಲಿ..

ಉಹೂಂ, ಅಪ್ಪನ ಮುಖ ನೆನಪಿಲ್ಲ ನನಗೆ ನನಗೆ ನೆನಪಿರೋದೆಲ್ಲ ಬರೀ ಇಷ್ಟೆ ಅಮ್ಮ ಕೆಂಪು ಸೀರೆ ಉಟ್ಟುಕೊಂಡು ಒಂದು ಶವದ ಮುಂದೆ ಕೂತಿರೋದು (ಅದು ಶವ ಅಂತಾನೂ ಗೊತ್ತಿರಲಿಲ್ಲ ನಂಗೆ ಯಾರೋ ಮಲಗಿದಾರಲ್ಲ .. ಯಾಕೆ ಬೀದೀಲಿ ಮಲಗಿದಾರೆ ಅನ್ಕೊಂಡಿದ್ದೆ) ಮತ್ತೆ ಶೂನ್ಯವನ್ನು ದ್ರುಷ್ಟಿಸುವ ಅಮ್ಮನ ಕಣ್ಣುಗಳು. ಎಲ್ಲರೂ ಅಳುತ್ತಿದ್ದರು, ಅಮ್ಮನ ಕಣ್ಣು ಭಯವಾಗೊಷ್ಟು ಕೆಂಪಾಗಿತ್ತು. ಪ್ರಾಯಷಃ ರಾತ್ರಿಯೆಲ್ಲಾ ಅತ್ತಿರಬೇಕು. ಏನಾಗಿದೆ ಅಂತ ಗೊತ್ತಿರಲಿಲ್ಲ ನನಗೆ ಆದರೆ ಅಮ್ಮನಲ್ಲಿ ಆದ ಬದಲಾವಣೆ ನನಗೆ ಅಳು ತರಿಸಿತ್ತು.ಅಮ್ಮನ ಹತ್ತಿರ ಹೋಗೋಕ್ಕೆ ಬಿಟ್ಟಿರಲಿಲ್ಲ ನಮ್ಮನ್ನ
"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"
ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ
ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.

ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.


ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...


ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?
ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.
ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"
ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.


ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...
ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು
"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....

ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.

12 comments:

Appu said...

ಮೃಗನಯನೀ....

ತುಂಬಾ ಉತ್ತಮವಾದ ಕಥೆ....

"ನಿಮ್ಮಪ್ಪ ಇದ್ದಾಗ ಅಂಥವರನ್ನು...." ಈ ಪ್ಯಾರ ಓದಿದಾಗ ನಮ್ಮ ತಂದೆ ತೀರಿಕೊಂಡಾಗ, ನಮ್ಮಮ್ಮ ಹೇಳಿದ ಮಾತುಗಳು ನೆನಪಾಯಿತು.

Very nostalgic....

Heege Baritha iri....

Tumba Dhanyavaadagalu..

Appu...

amar muniraju said...

ಪಾತ್ರಗಳನ್ನ ಪರಿಚಯಿಸುವ ಹಟಕ್ಕೆ ಬಿದ್ದು ..... ಹೇಳ ಬೇಕಾದದ್ದನು ಹೇಳಲಾಗಿಲ್ಲ ಅಥವಾ ಪರಿಣಾಮಕಾರಿಯಾಲಿ ಹರಿದುಬಂದಿಲ್ಲ ಅನ್ನಿಸಿತು ನನಗೆ .... ನಿಮಗೆ ಲಭಿಸಿದ ಕಡಿಮೆ ಅವದಿಯಲ್ಲಿ ಅವಸವರವಾಗಿ ಎಲ್ಲವನ್ನು ಹೇಳಿಕೊಳ್ಳುವ ತವಕ ಎದ್ದು ಕಾಣುತ್ತದೆ ......ಬೆಳಗಿನಿಂದ ಹೊರಗಿದ್ದು ಬಂದ ಅಪ್ಪ- ಅಮ್ಮಂದಿರಿಗೆ ದಿನಚರಿಯನೆಲ್ಲ ಒಪ್ಪಿಸುವ ಕಂದನ ಹಾಗೆ ನಿಮ್ಮ ಬರವಣಿಗೆ ಸಾಗುತ್ತದೆ ....... ಪಾತ್ರಗಳ ಪರಿಚಯ ಮತ್ತು ಸನ್ನಿವೆಷಗಲು .... ಸ್ವಲ್ಪ ಗೊಜಲಾಗಿವೆ .... ಇದು ನನ್ನ ಅನಿಸಿಕೆ .... ನನ್ನ ದೃಷ್ಟಿಕೋನ.

ಒಲವಿನಿಂದ
ಅಮರ

condumdots said...

According to me, there are three ways that a reader can be made sticked to reading. 1. Style or writing and 2. Making the content interesting enough, and 3. A combination of 1. and 2.

Adopting a very attractive style - may be an initial way of creating new readers. For instance, Ravi belagere did such a trick. However, this becomes ultimately boring due to the monotony.

Creating interesting content in writing is another better way. For instance, Tejaswi traversed this way. As the contents keep on getting interesting, this mode of writing never will bore the readers.

A combination of both - interesting content and attractive style (an intellectual marriage between Ravi belagere and Tejaswi, for instance) is not always possible in every writing and for every writer.

All in all, in order to make contentful writing it is very essential to increase our horizons of knowledge and experience. If you wanna be a writer, seriously, read vast number and variety of books. Don't stick to the traditional 'story-kind' of writing. That is a old style and no more attractive now. No writers other than indian writer, are embracing this style. Consider western writers, for instance,they mix a number of things such as, interesting content, science, fiction, social aspects, political, logic, intellect, human behavior, anthropology, psychology, and so many interesting things.

Expecting more matured writings from you

Regards
Dr.D.M.Sagar
CANADA

condumdots said...

Hi Mriganayani,
If possible read the story "Alabamada apaanavaayu" by Dr.Guruprasad kaginele. His adoptation techniques are excellent.

Regards
Dr.D.M.Sagar
CANADA

ಮೃಗನಯನೀ said...

@Sagar
Seriously... your sujjestions will help me thnx 4r this. I wil read that book.will be expecting such sujjestions 4m u

ಮೃಗನಯನೀ said...

@ appu
thnx 4r ur comment

Susheel - ಸುಸಂಕೃತ said...

ನೂರಾರು ಎಪಿಸೋಡುಗಳಲ್ಲಿ ಹಾಕಿ ಎಳೆಯಬಹುದಾದಂಥ ಒಂದು ಮೆಗಾ ಸೀರಿಯಲ್ಲನ್ನು ಒಂದೇ ಎಪಿಸೋಡಿನಲ್ಲಿ ತುರುಕಿದಂತಾಯ್ತು ಅನ್ನಿಸ್ತಿದೆ.ಕಥೆ ಪಾತ್ರಗಳಿಂದ ಪಾತ್ರಕ್ಕೆ ಜಿಗಿಯುವುದು ಇದಕ್ಕೆ ಕಾರಣವಿರಬಹುದು.
ಒಟ್ಟಿನಲ್ಲಿ ತಾಯಿಯ ವಾತ್ಸಲ್ಯ-ಕುರುಡು ಪ್ರೇಮ-ಹತಾಶೆ-ಅಸಹಾಯಕತೆ ಎಲ್ಲ ಭಾವನೆಗಳ ಮಿಶ್ರಣ ಇನ್ನಷ್ಟು ಉತ್ತಮವಾಗಿ ಕೆಲವೇ ಪಾತ್ರಗಳ ಮೂಲಕ ಅಭಿವ್ಯಕ್ತ ಪಡಿಸಬಹುದಿತ್ತು ಅನ್ನೋದು ನನ್ನನಿಸಿಕೆ. ಬರಹ ಮುಂದುವರೀಲಿ.

Prasad Shetty said...

Very nice article.. Looking forward for your next post.. In ur "Male-Nenapu", Ammana COffee and Nimmora male comparison is very good..

Vijay Joshi said...

Excellent story. I like it..
Vijay Joshi

Crazy said...

I stand next to Amar..

Arun said...

ನಿಮ್ಮ್ ಬ್ಲಾಗು ಚೆನ್ನಾಗಿದೆ ಬರಹಗಳನ್ನು ಪೊಸ್ಟ್ ಮಾಡುವುದರಲ್ಲಿ ಎಲ್ಲಿಯು ಉದಾಸೀನತೆ ತೋರಬೇಡಿ ಎಂಬುದು ನನ್ನ ಪ್ರಾರ್ಥನೆ..ಯಾಕೆಂದರೆ ಇತ್ತೀಚೆಗೆ ಕೆಲವು ಬ್ಲಾಗುಗಳು ಒಮ್ಮೆ ದೀಪಾವಳಿ ಪಟಾಕಿ ಹಾಗೆ ಒಮ್ಮೆ ಜಗ್ಗನೆ ಉರಿದು ಮತ್ತೆ ಯಾಕೋ ಮಾಯವಾಗಿ ಹೋಗುವುದನ್ನು ನಾನು ಕಂಡಿದ್ದೇನೆ.ಮತ್ತೆ ಇನ್ನೊಂದು ಮಾತು ಈ ಹೆಣ್ಣು ಮಕ್ಕಳು ಬರೆಯುವ ಬರಹಗಳು ಮತ್ತು ಮಾತು ಕತೆಗಳು ಹೆಚ್ಚಾಗಿ ಅವರ ಮನೆ,ಗೆಳತಿ,ಸಂಬಂದ,ಇಂತವೆ ಕೆಲವು ಚಿಕ್ಕ ವ್ರತ್ತಗಳೊಳಗೆ ಸುತ್ತುತ್ತಿರುತ್ತವ ಅಂತ ನಾನೆಲ್ಲೊ ಓದಿದ ನೆನಪು ನೀವು ಹಾಗೆ ಅಂತ ನಾನೇನು ಹೇಳುತ್ತಿಲ್ಲ ..but just ಈ ದಿಕ್ಕಿನಲು ಒಮ್ಮೆ ಯೊಚಿಸಿ. ನಿಮಗೆ ಎಲ್ಲೊ ಒಂದು ಕಡೆ ಹೌದು ಅಂತನ್ನಿಸಿದ್ರೆ ಇನ್ನೊಂದಷ್ಟು ಸರ್ಕಲ್ಲಿನಿಂದ ಹೊರಗೆ ಜಿಗಿದು ಬರಯಲಾಗಬಹುದು.. ಇಲ್ಲಾ ಅಂತನ್ನಿಸಿದ್ರೆ no problem ನೀವೇನೆ ಬರೆದರು ಈ ಪರದೇಶದಲ್ಲಿ ಕುಳಿತು ಏನು ಬರೆದಿದ್ದೇರೆಂದು ಕುತೂಹಲದಿಂದ ಓದುವ ನಾವು ಇದ್ದೇವೆ,ತಪ್ಪದ್ದೆ ಬ್ಲಾಗು ಬರೆಯುವಿರೆಂಬ ನೀವು ಇರುವಿರೆಂಬ ಆಶಯದೊಂದಿಗೆ.....

manasagelathi said...

hello mruganayanee,how are you? nivu tumba chennagi baritiri,u know who am i? ask u r sis putti
by
sanjanahoysala