Sunday, August 12, 2007

ವನಸಿರಿಯ ಮಗಳು

ಯಾರೂ ಓಡಾಡದಿದ್ದಲ್ಲಿ ಅವಳಿದ್ದಳು

ಜೊತೆಗೆ ಕಾವೇರಿಯ ಝರಿ

ಇವಳನ್ನು ಹೊಗಳಲು ಯಾರೂ ಇರಲಿಲ್ಲ

ಪ್ರೀತಿಸುವವರು ಇನ್ನ್ಯಾರು




ಅವಳ ಓಡಾಟವೆಲ್ಲಾ ಹಸಿರ ಬಳಿ

ಜೊತೆಗೆ ಬೆಚ್ಚಗಾಗುತಿಹ ಸೂರ್ಯ

ದನಿಗೂಡಿಸಲು ಕೋಗಿಲೆಗಳಿವೆ

ಅಲ್ಲಿ ಇನ್ನೆಲ್ಲಿಯ ಕ್ರೌರ್ಯ




ಅವಳ ಊಟ ಕಾಡು ಫಲ

ಕುಡಿಯುವುದು ಮಕರಂದ

ವನಸಿರಿಯ ಮಗಳಲ್ಲವೇ

ನೋಡಲು ಬಲುಚಂದ




ಎಲೆಯ ಮರೆಯ ಸಂಪಿಗೆ

ಕಣ್ಣಿಗೆ ಕಾಣದೆ ಅಡಗಿಹಳು

ರಾತ್ರಿಯ ಒಂಟಿ ನಕ್ಷತ್ರ

ಬೆಳ್ಳನೆ ಬೆಳಗುತಿಹಳು




ಅವಳಿದ್ದಳೆಂಬುದೇ ಕೆಲವರಿಗೆ ಗೊತ್ತಿದ್ದು

ಸತ್ತರೆ ಹೇಗೆ ತಿಳಿಯಬೇಕು;

ಅವಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ

ಸಂಕಟವನ್ನು ನಾನೆಲ್ಲಿ ಬಚ್ಚಿಡಬೇಕು!







ಇದು William Wordsworthನ She dwelt amoung the untrodden waysನ ಭಾವಾನುವಾದ ಆ poem ಹೀಗಿದೆ



She dwelt among the untrodden ways

Beside the springs of Dove;

A Maid whom there were none to praise

And very few to love



A violet by a mossy stone

Half hidden from the eye

Fair as a star when only one

Is shining in the sky



She lived unknown and few could know

When Lucy ceased to be

She is in her grave, and,Oh!

The difference to me

8 comments:

Ranju said...

ಮೃಗನಯನಿ,
ಭಾವಾನುವಾದ ಅದ್ಭುತವಾಗಿದೆ.

Susheel Sandeep said...

ಭಾವಾನುವಾದ ಭಾವಪೂರ್ಣವಾಗಿ ಮೂಡಿಬಂದಿದೆ. ಹೀಗೇ ಬರೀತಿರಿ

AhaskaraRashmi said...

ಜೀವನದ ಹಲವು ಮಜಲುಗಳಲ್ಲಿ ಕಾಣಸಿಕೊಳ್ಳುವ ಲೂಸಿಯನ್ನು(ವನಸಿರಿಯ ಮಗಳು)ಚಿತ್ರಿಸುವ ಈ ಕವನ, ಆಕೆಯ ವ್ಯಕ್ತಿತ್ವ ನಿರೂಪಣೆಯಲ್ಲಿ ಮಹತ್ವದ್ದಾಗಿದೆ, ಇಡೀ ಪ್ರಪಂಚಕ್ಕೆ ಯಾರು ಅಲ್ಲದ ಒಬ್ಬಾಕೆ, ನಿರೂಪಕರ ಮನಸಲ್ಲಿ ಮಾತ್ರ ಆಘಾತದ್ ಛಾಪು ಹೊರಸೂಸಿದಂತಿದೆ.

William Wordsworthನ ಅವಲೋಕಿಸಿರುವ ರೀತಿ & ಭಾವಾನುವಾದಿಸಿರುವ ರೀತಿ ಎರಡು ಶ್ಲಾಘನೀಯ......... great going.....

ಮೃಗನಯನೀ said...

ಧನ್ಯವಾದ ರಂಜು,ಸುಶೀಲ್ ನಿಮ್ಮ ಪ್ರೊತ್ಸಾಹ ಹೀಗೆ ಇರಲಿ.

ಮೃಗನಯನೀ said...

ಧನ್ಯವಾದಗಳು ಅಕ್ಷರ.

Lucyಯನ್ನು ಪ್ರೀತಿಯ ದೇವತೆಗೆ(fair as a star when only one=venus,godess of love) ಹೋಲಿಸುವ ಕಲ್ಪನೆ ಎಷ್ಟು ಚಂದ್ದದ್ದಲ್ಲವ?

Wordsworth is Incredible

dinesh said...

ಒಳ್ಳೆಯ ಭಾವ..... ಒಳ್ಳೆಯ ಅನುವಾದ

Anonymous said...

ತುಂಬ ಚಂದದ ಅನುವಾದ..

Unknown said...

ಅನಾಮಿಕ ಚೆಲುವೆಗೆ,...

ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?

ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು.

ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!
ಈಗುಳಿದಿರುವುದು ಅವಳ ಹಂಬಲವಷ್ಟೇ!

(ಇದು ನಿಮ್ಮ ಭಾವಾನುವಾದದಿಂದ ಪ್ರೇರಿತನಾಗಿ ನಾನು ಮಾಡಿದ ಅದೇ ಪದ್ಯದ ಅನುವಾದ.. ಧನ್ಯವಾದ ಇಂತಹದ್ದಕ್ಕೆ ಕಾರಣವಾಗಿದ್ದಕ್ಕೆ- ಶಶಿ- www.shashisampalli.wordpress.com)