Wednesday, August 29, 2007

ಮಳೆ-ನೆನಪು

ನಾನು ಸುಶ್ ನಮ್ಮ ಹಾಸ್ಟಲೆಂಬ ಜೈಲಿನಲ್ಲಿ ನನ್ನ ರೂಮಿನ ಮುಂದಿನ ಕಿಟಕಿಯ ಬಳಿ ಬುಕ್ಕು ಪೆನ್ನು ಹಿಡಿದುಕೊಂಡು ಕುಳಿತಿದ್ದೆವು. ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಎಂಬ ಕಾರ್ಯಕ್ರಮದ ರಿಪೋರ್ಟು ಮಾಡೊಕ್ಕಿತ್ತು.. ಜರ್ನಲಿಸಮ್ ಮೇಡಂ ಅಸೈನ್ಮೆಂಟ್ ಕೊಟ್ಟಿದ್ದರು. ಸುಶ್ ಬರೆಯೋಕ್ಕೆ ಶುರು ಮಾಡಿದ್ದಳು ನಾನು ಕಿಟಕಿಯಂದ ಕಾಣುವ ನಮ್ಮ ಕಾಲೇಜನ್ನೇ ನೋಡುತ್ತಾ ಕುಳಿತ್ತಿದ್ದೆ. ಸುಶ್ ಮಳೆ ಅಂದ್ರೆ ಏನನ್ನಿಸುತ್ತೆ ನಿಂಗೆ ಅಂತ ಕೇಳ್ದೆ ಅವಳು ಸುಮ್ನೆ ನನ್ನ ದುರುಗುಟ್ಟಿಕೊಂಡು ನೋಡಿ ಮತ್ತೆ ಬರೆಯೊದನ್ನ ಮುಂದುವರೆಸಿದಳು."ಇವಳಿಗೊಂದು ಮಳೆ ಹುಚ್ಚು" ಅಂತ ಗೊಣಗಿದ್ದು ಕೇಳಿಸಿತು.


ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.

ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.


ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...


ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....

ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....

22 comments:

ಶ್ರೀನಿಧಿ.ಡಿ.ಎಸ್ said...

nice..

ಆದ್ರೆ ಈ ಮಳೆಯೆಂಬೋ ವಿಷಯದ ಬಗ್ಗೆ ಕೋಟ್ಯಂತರ ಜನ ಬರೆದಿರೋದ್ರಿಂದ, ಸ್ವಲ್ಪ...:)
ಕಾಫಿ ಮಾಡೋ ವಿಧಾನ ಮಸ್ತ್ ಮಸ್ತ್ !

Sushrutha Dodderi said...

'ಸುಶ್' ಅಂತ ಶುರು ಆಗಿದ್ ನೋಡಿ 'ಅರೆ! ನನ್ ಹೆಸ್ರು!!' ಅಂತ ರೋಮಾಂಚನಗೊಂಡು ಓದ್ಲಿಕ್ಕೆ ಶುರು ಮಾಡಿದ್ರೆ ನಿರಾಶೆಯಾಗೋಯ್ತು.. :(

ಆದ್ರೂ ಒಂದು ಅದ್ಭುತ ಕಾಫಿ ಕುಡ್ಸಿದ್ಯಲ್ಲ, ಅದಕ್ಕೆ ಥ್ಯಾಂಕ್ಸ್. :-)

Ranju said...

ನಾನು ರೋಮಾಂಚನಗೊಂಡೆ ’ಸುಶ್’ ಹೆಸರು ನೋಡಿ.
ಮಳೆನಾ ಕಾಫಿಗೆ ಹೋಲಿಸಿದ್ದು ಚನ್ನಾಗಿ ಇದೆ. ನಮ್ಮ ಬೆಂಗಳೂರಿನ ಮಳೆ ನೋಡಿ ನಂಗೆ ಅತ್ತೆ ಸೊಸೆ ಜಗಳ ಅಂತ ಅನ್ನಿಸುತ್ತೆ. ಯಾಕೆ ಗೊತ್ತಾ ಅದು ಯಾವಾಗ ಬರುತ್ತೆ ಯಾವಗ ಹೋಗುತ್ತೆ ಒಂದು ಗೊತ್ತಾಗಲ್ಲ ದಬ ದಬ ಸುರಿಯುತ್ತೆ. :)

Susheel Sandeep said...
This comment has been removed by the author.
Susheel Sandeep said...

ಹಹ್! 'ಸುಶ್' ಅಂತ ನೋಡಿ ನನ್ನ ಹೆಸ್ರು ಅಂದುಕೊಳ್ಳೋಕ್ ಮುಂಚೇನೆ ನನ್ ಥರಾನೆ ಈಗಾಗ್ಲೆ ಒಬ್ರು ಅಂದ್ಕೊಂಡು ನಿರಾಸೆಯಾಗಿದ್ದಾರೆ! :):)
ಮಳೆಗಿಂತ ಕಾಫಿ ಚೆನ್ನಾಗಿತ್ತು! ನಿಮ್ಮ ಮಳೆಯ ಯೋಚನೆಗಳಲ್ಲೇ ಮೂಡಿಬಂದ ಹಳೆಯ ನಾಕು ಸಾಲುಗಳನ್ನ ಹಾಕೋ ಮನಸ್ಸಾಗಿದೆ ಹಾಕ್ತೀನಿ.

-ಮಳೆ-
ಬಾಲ್ಯಾವಸ್ಥೆಯ ತುಂತುರು ಹನಿ
ಯೌವ್ವನದ ಮಳೆಬಿಲ್ಲು
ಗೃಹಸ್ಥಾಶ್ರಮದ ಜಡಿಮಳೆ
ಮುಪ್ಪಿನ ಮೋಡ ಕವಿದ ವಾತಾವರಣ
ಮಳೆಗೆ ಸಾವುಂಟೆ?!?

Ganumaamanigondu namana said...

"Male Nenapige" neenu jeeva tumbirodu bahala hrudayasparshiyaagisde...

Idanna onsala odtaa kootre nange seeda malenaadina namma oorina nenapaaytu..coffee tota adra madhyadalli bere bere maragalige menasinaballi habbirodu, beligge schoolge hogovaaga allalli navilugalu kaige sigovastu hattiradalli haarihogtidvu...

Nijvaaglu malegaala annodu nenapina butti... maleya pratiyondu haneelu ondondu kate irute... avugalu nammanna matte baalyakke seledu aata aastave...

AhaskaraRashmi said...

:)ಈ article ಓದುತ್ತಿರುವಂತೆ ನನ್ನ office ಕಿಟಕಿಯಿಂದ ಆಚೆ ನೋಡಿದ್ರೆ ಮಳೆ ಬರ್ತಿದೆ........., ಟ್..ಪಟ್..ಪಟು ಸದ್ದು ಕೇಳ್ತಿದೆ, ಹು bangalore ಅಲ್ವಾ vehicles ಸದ್ದಿನೊಂದಿಗೆ ಸೂಕ್ಷ್ಮವಾಗಿ ಗಮನಿಸಿದ್ರೆ ಮಗುವಿನ ಪುಟ್ಟ ಹೆಜ್ಜೆ ಸದ್ದಿನಂತೆ ಕೇಳ್ತಿದೆ, ನೋಡಿ Bangaloreನಲ್ಲಿದ್ರೆ ಹೆಚ್ಚು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕಾಗುತ್ತದೆ........, ಇನ್ನು coffee ವಿಷಯ ನಿಜವಾಗ್ಲು ಅದು ನಂಗೆ ಅರ್ಥವಾಗದ್ದು ಬಿಡಿ, ಅದರ ವಾಸನೆ ಕಂಡ್ರೂ ಆಗದು ನಂಗೆ....ಎನು ಎಂಥಾ ಅನುಭವ miss ಮಾಡ್ತಿದಿನಿ ಅನ್ಕೊಂಡರಾ..ನಂಗೆ ಮಳೇಲಿ icecream ತಿನ್ನೂದಂದ್ರೆ ಬಾರಿ ಇಷ್ಟ....whatever it is nice experience......keep writing.........
haaaaa ಮರೆತಿದ್ದೆ ಒಂದು ಸಣ್ಣ clarification ಪ್ರತಿಬಾರಿಯು ನನ್ನ ಹೆಸರನ್ನ ಅಕ್ಷ್ರರ ಅಂತ ಕರಿತಿರಿ ಅದು ಅಹಸ್ಕ್ರರ ರಶ್ಮಿ, ರಶ್ಮಿ ಅಂದ್ರೆ ಅಡ್ಡಿ ಇಲ್ಲಾ.........

ಮೃಗನಯನೀ said...

@Shreeni
ಕೊಟ್ಯಾಂತರ ಜನ ಬರೆದಿದಾರೆ ಅಂತ ಮಳೆ ಬಗ್ಗೆ ಎನಾದರೂ ಅನ್ನಿಸಿದರೆ ಬರೀ ಬಾರ್ದ? ಮನೇಗ್ ಬಂದ್ರೆ ಅಮ್ಮನ ಆ ಮಸ್ತ್ ಮಸ್ತ್ ಕಾಫಿ ಕುಡೀಬಹುದು:-)

ಮೃಗನಯನೀ said...

@ Sush
ಶ್ರೀನಿಯ ಜೊತೆಗೆ ಮನೆಗೆ ಬಂದು ಕಾಫಿ ಕುಡಿಯಬೇಕಾಗಿ ವಿನಂತಿ.
@Ranju
ಅತ್ತೆ ಸೊಸೆ ಜಗಳ್ದ ಕಂಪಾರಿಶನ್ ಚೆನ್ನಗಿದೆ ಬೆಂಗಳೂರಿನ ಮಳೆಯದೂ ಇದೇ ಕತೆಯ?
@SusaMskruta
ನಿಮ್ಮ ನಾಲ್ಕು ಸಾಲುಗಳು ನನ್ನ ಅಮ್ಮನ ಕಾಫಿಯಷ್ಟೇ ಚಂದ
:-)
@Arun
thnx 4r the comment.
@Rashmi
you really miss that dear.by the way ನನಗೂ ಮಳೇಲಿ ನೆನಿತಾ icream ತಿನ್ನೋಕ್ಕೆ ಇಷ್ಟ

ಮೃಗನಯನೀ said...

ವಿಶೇಷ ಸೂಚನೆ ಎಲ್ಲರೂ ನಮ್ಮ ಮನೆಗೆ ಮಳೆಗಾಲದಲ್ಲಿ ಬಂದು ಅಮ್ಮನ ಕಾಫಿ ಕುಡಿಯಬೇಕಾಗಿ ವಿನಂತಿ;-)
(with permission 4m Amma)

Kannada said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ಮಾತು ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."



ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ಚೆನ್ನಾಗಿದೆ.

ನನ್ನ ಬ್ಲಾಗ್ ಡಿಯರ್ ಫ್ರೆಂಡ್,

http://kavimanasu.blogspot.com/

Lohit said...
This comment has been removed by the author.
Lohit said...

ನೆನಪುಗಳ ಮಾತು ಮಧುರ ಅ೦ತಾ ಎಲ್ಲರೂ ಹೇಳ್ತಾರೆ...
ಎಷ್ಟು ನಿಜ ಅಲ್ವಾ!!!
ಕೆಲವು ಸಾರಿ ಗೊತ್ತಿದ್ದು ಅಥವಾ ಗೊತ್ತಿಲ್ಲದೆ ನಮ್ಮ ಎದೆಯಾಳದಿ೦ದ ಹೊರ ಬರುವ ಈ ವಿಚಾರಗಳು ಪ್ರಪ೦ಚವನ್ನೆ ಗೆದ್ದು ಬಿಡುತ್ತೆ :-)

ನಿಮ್ಮ ಈ ಮಳೆ ಹಾಗು ಕಾಫಿಯ ಅನುಭವ ನಮಗೂ ಲಭ್ಯವಾಗಲಿ ಎನ್ನುವ ಹೊಸ ಆಸೆ ನನ್ನಲ್ಲೀಗ ಮೂಡಿದೆ.

Keep up these amazing writings going on for we like fans...
All the very best
& thanks a lot for sharing these feelings.

dinesh said...

ಲೇಖನ ಚೆನ್ನಾಗಿದೆ....

Unknown said...

good one

Girish Rao H said...

where is the NEW Story?

JOGI

ವಿಜಯ್ ಜೋಶಿ said...

Hey, nin blog na journalist JOGI kooda nodthara?
- joshi

ಮೃಗನಯನೀ said...

@ Jogi
haaktene sir 2-3 daysnalli

ಗಿರೀಶ್ ರಾವ್, ಎಚ್ (ಜೋಗಿ) said...

ವಿಜಯ್ ಜೋಶಿ,
ಜುಲೈ 9ರ ನಂತರ ಅಪ್-ಡೇಟ್ ಆಗದ ನಿಮ್ಮ ಬ್ಲಾಗನ್ನೂ ನೋಡಿದ್ದೇನೆ.
-ಜೋಗಿ

ARUN MANIPAL said...

ಹ್ವಾಯ್ ! ಈ ಮಳೆ ಬಗ್ಗೆ ಓದ್ದಾಗ ಒಂದು ನೆನಪಾಯ್ತು ನೊಡಿ,
ನಮ್ಮ ಅಜ್ಜ ತೀರ್ಕೊಂಡ ಹೊತ್ಗೆ ಪುನರ್ವಸು ನಕ್ಷತ್ರ ಮಳೆ ಬಂತ್ ಕಾಣಿ .ಹೆಣ ಹ್ಯಾಗಪ್ಪಾ ಹೊರಗೆ ಹಾಕೋದು ಅಂತ್ ನಾವ್ ಯೋಚ್ನೆ ಮಾಡ್ತಾ ಅಂಗ್ಳದ ಮಾಡಿನ್ ಬದಿಗೆ ನಿಂತಿತ್ತ್ ಕಾಣಿ.ಈಗಿನ್ ತರ ಆವಗೆಲ್ಲಾ ಸ್ಮಶಾನ ಅಂತ ಇರ್ಲಿಲ್ಲ್ಯೆ ತಕೊಂಡು ಹ್ವ್ವಾಪದು ಅಲ್ಲೆ ಗದ್ದೆ ಬದಿಯಲ್ಲಿ ಹೆಣ ಸುಡುದು.ಇನ್ನೇನ್ ಈ ಮಳೆ ಬಿಡೊ ಹಾಗೆ ಕಾಣ್ತಾ ಇರೋವಷ್ಟೊತ್ತಿಗೆ ಅಂಗ್ಳ ಪೂರ್ತಿ ಕೆಸ್ರೇ.ಅದ್ಯಾರೋ ಒಬ್ಬು ಮುದುಕ ಕಾಣಿ ಚಟ್ಟ ಕಟ್ಟಕ್ಕೆ ಅಂತ ತಕಪಕ ಅಂತ ಒಡಾಡೋಕೆ ಸುರು ಮಾಡಿದ್ನೆ.ಅಂವ ನಡಿವ ಸ್ಟಯಿಲಿಗೆ ನಾವಂದುಕೊಂಡ್ತು ಯೇನಾದ್ರು ಎಡ್ವಟ್ತು ಮಾಡಿ ಆಜ್ಜನ್ ಹೆಣ ಸುಡದಂಗ್ ಮಾಡ್ತಾ ಇಂವ ಅಂತ.ಹಾಗೆ ಆಗೋದೆ ..! ಇಂವ ಅಂಗ್ಳ ಪೂರ್ತಿ ಆ ಕೆಸ್ರು ಮೆಳೆ ಪಚ ಪಚ ನಡ್ದಾ ನೋಡಿ ಸುಯಿಂಕ ಜಾರಿ ಬಿದ್ನೆ.ಅದೂ ಹೇಗೆ ಅಂಗ್ಳ ಈ ತುದಿಯಿಂದ ಜಾರೊಕೆ ಸುರು ಮಾಡಿದಂವ ಇನ್ನೊಂದು ತುದಿ ವರೆಗೆ ಅಂವ ಜಾರ್ತಾ ಹೋದ ಸ್ಟೈಲು ಉಂಟು ನೋಡಿ ಯಾವ್ ಹಾಲಿವುಡ್ ಹೀರೋಗು ಕಮ್ಮಿ ಇಲ್ದಂಗಿತ್ತು ನೋಡಿ..
ನಮ್ಗೋ ಅಜ್ಜ ಸತ್ತ ಕರ್ಮಕ್ಕೆ ಅಳೊಕು ಆಗ್ದೆ ನಗೋಕು ಆಗ್ದೆ ಧರ್ಮ ಸಂಕಟ....
ಈಗ್ಲು ಈ ಮಳೆ ಬಂದು ಅಂಗಳ ಕೆಸ್ರಾಗಿದ್ರೆ ಒಮ್ಮೊಮ್ಮೆ ನೆನಪಾಗುದುಂಟ್ ಕಾಣಿ.....

ಒಟ್ಟ್ ಮಳೆ ಮರ್ಲ್......

Unknown said...

ಮಳೆ ನು ಚೆನ್ನಾಗಿತ್ತು, ಹಾಗೂ ಕಾಫಿ ಕೂಡ. ಆರ್ . ಕೆ. ನಾರಾಯಣ ಅವರು ಕಾಫಿ ಮಾಡುವ ವಿಧಾನದ ಬಗ್ಗೆ, ತಮ್ಮ ಬರಹ ದಲ್ಲಿ, ವರ್ಣಿಸುತ್ತಾರೆ, ಅದನ್ನು ಓದಿ ಚೆನ್ನಾಗಿದೆ.